ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಿಗ್‌ ಅಪ್ಡೇಟ್‌ ನೀಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್

ಹುಬ್ಬಳ್ಳಿ, ನವೆಂಬರ್‌ 30: ಸಂಪುಟ ಪುನರ್‌ ರಚನೆ ಅಥವಾ ವಿಸ್ತರಣೆ ಬಗ್ಗೆ ಪಕ್ಷದ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಹಿರಿಯ-ಕಿರಿಯ ಸಚಿವರೆಲ್ಲರು‌ ಒಪ್ಪಿಕೊಳ್ಳಬೇಕು ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ಹೇಳಿದರು.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ನಿರ್ಣಯ ಹೈಕಮಾಂಡ್ ಮಾಡಿದ್ರೆ, ಸಚಿವ ಸಂಪುಟದಲ್ಲಿರುವ ಹಿರಿಯರು ತಲೆ ಬಾಗಬೇಕು. ಇನ್ನೂ ಶಾಸಕ ಯತ್ನಾಳ್ ಸಿಎಂ ಪರ ಮಾತಾಡಿದ್ದಕ್ಕೆ ಬಿಜೆಪಿ ಅವರು ಅವರನ್ನ ವೀಕ್ ಮಾಡಲು ಹೊರಟಿರಬೇಕು ಎಂದು ಹೇಳಿದರು.

HK Patil s Reaction On Cabinet Reshuffle

ಹಾಸನ ಸ್ವಾಭಿಮಾನಿ ಸಮಾವೇಶಕ್ಕೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ಯಾರೋ ಸೃಷ್ಟಿ ಮಾಡ್ತಾ ಇದ್ದಾರೆ ಅನಾಮದೇಯ ಪತ್ರದ ಒಕ್ಕಲಿಕೆ ನಾವು ಒಪ್ಪೋದಿಲ್ಲ. ಕಾಂಗ್ರೆಸ್ ಪಕ್ಷ ಮುಂದಾಳತ್ವವಹಿಸಿಕೊಂಡು ಯಶಸ್ವಿ ಮಾಡುತ್ತೇವೆ. ಮೂಲ ಕಾಂಗ್ರೇಸ್ಸಿಗರಾಗಿ ನಾವೇ ಚರ್ಚೆ ಮಾಡಿಲ್ಲ ಅಂದ್ರೆ ಯಾರು ಮಾಡೋರು. ನಮ್ಮ ನಾಯಕರನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ರೆ ನಾವು ಒಗ್ಗಟ್ಟಾಗಿ ಎದುರಿಸುತ್ತೇವೆ.
ನಮ್ಮ ಸರ್ಕಾರ ಅಭದ್ರಗೊಳಿಸುವ ಕೆಲಸ ಮಾಡಿದ್ರೆ ಒಗ್ಗಟ್ಟಾಗಿ ಎದುರಿಸ್ತೇವೆ ಎಂದು ಹೇಳಿದರು.

ಬೈ ಎಲೆಕ್ಷಣ್ ಗೆದ್ದಿದ್ದೇವೆ, ಬಿಜೆಪಿ ಅವರಿಗೆ ಕಪಾಳ ಮೋಕ್ಷ ಮಾಡಿದ್ದಂತಾಗಿದೆ. ಯತ್ನಾಳ್‌ ಎಲ್ಲರ ಮೇಲೂ ಟೀಕೆ ಮಾಡ್ತಾರೆ ಇದು ಸರಿಯಲ್ಲ. ಇಷ್ಟು ದಿನ ಸಿಎಂರ ಮೇಲೆ ಸುಳ್ಳು ಪ್ರಚಾರ ಮಾಡಿ ವೀಕ್ ಮಾಡಲು ಹೊರಟ್ಟಿದ್ರು, ಈಗ ಯತ್ನಾಳ್ ಅವರನ್ನ ವೀಕ್ ಮಾಡಲು ಹೊರಟ್ಟಿದ್ದಾರೆ. ಯತ್ನಾಳ್ ನಮ್ಮ ಭಿನ್ನಾಭಿಪ್ರಾಯ ಇರಬಹುದು, ಬಿಜೆಪಿ ಅವರದ್ದು ಸಣ್ಣ ತನದ ಮಾತುಗಳು ಎಂದು ಎಚ್ ಕೆ ಪಾಟೀಲ್ ಅವರು ಹೇಳಿದರು.

ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ಅನುಮತಿ ವಿಚಾರವಾಗಿ ಮಾತನಾಡಿ, ದೊಡ್ಡ ತಪ್ಪು ನಿರ್ಣಯ ಆದ ಸಂದರ್ಭದಲ್ಲಿ ವೈಯಕ್ತಿಕವಾಗಿ ಅಬ್ರಹಾಂ ದೂರು ನೀಡಿದ್ರು. ಅದರ ಹಿನ್ನಲೆ ರಾಜ್ಯಪಾಲರು ಅನುಮತಿ ಕೊಡೋದನ್ನ ನಿರಾಕರಣೆ ಮಾಡಿದ್ದರು. ಕೊಡಬಾರದು ಅಂದಿದ್ದು, ಸರಿಯಾದ ನಿರ್ಣಯ ಅಲ್ಲ. ಅದನ್ನು ಪುನರ್ ಪರಿಶೀಲಿಸಲು ಸಚಿವ ಸಂಪುಟದಿಂದ ನಮ್ಮ ನಿರ್ಣಯವನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ ಎಂದ ಅವರು ಇದರಲ್ಲಿ ರಿವೇಂಜ್ ಪೊಲಿಟಿಕ್ಸ್ ಏನಿದೆ? ಎಂದು ಪ್ರಶ್ನಿಸಿದರು.

ಇದು ನಾವು ನೀಡಿದ ದೂರು ಅಲ್ಲ. ಸಾಮಾಜಿಕ ಕಾರ್ಯಕರ್ತಅಬ್ರಹಾಂ ನಮ್ಮ ಮುಖ್ಯಮಂತ್ರಿ ಅವರ ಮುಖ್ಯಮಂತ್ರಿ ಮೇಲು ದೂರು ಕೊಟ್ಟಿದ್ದರು. ರಾಜ್ಯಪಾಲರು ಅವಾಗಲೇ ನಿರ್ಣಯ ಕೈಗೊಂಡಿಲ್ಲ, ಹೀಗಾಗಿ ನಾವು ಮರು ಪರಿಶೀಲನೆ ಮಾಡೋಕೆ ಹೇಳಿದ್ದೇವೆ ಎಂದು ತಿಳಿಸಿದರು. ಇನ್ನೂ ಪಕ್ಷ ಸಂಘಟನೆ ಬಗ್ಗೆ ನಡೆದ ನಿರ್ಣಯಗಳನ್ನು ಜಾರಿ ಮಾಡ್ತೇವೆ ಎಂದು ಹೇಳಿದರು.

ಸಿಎಂ ಬದಲಾವಣೆ ಬಗ್ಗೆ ಬಿ ಆರ್ ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಪ್ರಭುದ್ದ ರಾಜಕಾರಣಿ, ಮುಖ್ಯಮಂತ್ರಿ ಸಲಹೆಗಾರರು. ಅವರನ್ನೇ ಕೇಳಬೇಕು ಅವರ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ಮಾತನ್ನು ನಾನು ಒಪ್ಪೋದಿಲ್ಲ ಸಾರ್ವಜನಿಕವಾಗಿ ಚರ್ಚೆ ಮಾಡಲ್ಲ ಎಂದು ಹೇಳಿದ ಹೆಚ್‌ ಕೆ ಪಾಟೀಲ್‌ ಅವರು, ಯಲ್ಲಮ್ಮನ ಗುಡ್ಡ ಸರ್ವಾಂಗೀಣ ಅಭಿವೃದ್ಧಿ ನಾಡಿನ ಐತಿಹಾಸಿಕ. ಯಲ್ಲಮ್ಮನ ಗುಡ್ಡ ದಕ್ಷಿಣ ಭಾರತದಲ್ಲಿ ಹೆಚ್ಚಿನ ಜನ ಬರುವ ಕ್ಷೇತ್ರ, ಪ್ರತಿ ವರ್ಷ ಸುಮಾರು 1.25 ಕೋಟಿ ಯಾತ್ರಿಗಳು ಬರ್ತಾರೆ ಹೀಗಾಗಿ ಮೊನ್ನೆ ಮುಖ್ಯಮಂತ್ರಿ ಕರೆದುಕೊಂಡು ಬಂದು ಶಂಕು ಸ್ಥಾಪನೆ ಮಾಡಿದ್ವಿ ಇನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದರು.

ಯಾತ್ರಿಗಳಿಗಾಗಿ ಸುಮಾರು 25 ಕೋಟಿಯ ಕಟ್ಟಡ ಉದ್ಘಾಟನೆ ಮಾಡಿದ್ವಿ ಕೇಂದ್ರ ಪ್ರವಾಸೋದ್ಯಮ ಮಂತ್ರಿಗಳು ನಮ್ಮ ಜೊತೆ ಬೆಂಗಳೂರಿನಲ್ಲಿ ಸಭೆ ಮಾಡಿದ್ರು. ಇದಕ್ಕೆ ಕೇಂದ್ರ ಸರ್ಕಾರದವರು ಯಲ್ಲಮ್ಮನ ಗುಡ್ಡ ಅಭಿವೃದ್ಧಿಗೆ 100 ಕೋಟಿ ಅನುದಾನ ಕೊಟ್ಟಿದ್ದಾರೆ. ನಮ್ಮ ಬೇಡಿಕೆಯ ಪೂರ್ಣ ಭಾಗ ಇಲ್ಲದಿದ್ದರು ಗಣನೆಗೆ ತೆಗೆದುಕೊಳ್ಳುಬಂತಹ ಅನುದಾನ ಮಂಜೂರಾದ ಮೂಲಕ ಯಲ್ಲಮ್ಮನ ಗುಡ್ಡ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+