ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ವರ್ಷದಲ್ಲಿ 17 ಲಕ್ಷಕ್ಕೂ ಅಧಿಕ ಜನರಿಗೆ HIV: ಆಂಧ್ರಕ್ಕೆ ಅಗ್ರಸ್ಥಾನ

|
Google Oneindia Kannada News

ನವದೆಹಲಿ, ಏಪ್ರಿಲ್ 24: ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ 17 ಲಕ್ಷಕ್ಕೂ ಹೆಚ್ಚು ಜನರು ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಆರ್‌ಟಿಐ ಪ್ರಶ್ನೆಗೆ ಉತ್ತರಿಸಿದ ಸರ್ಕಾರ ಹೇಳಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಒದಗಿಸಿದ ಡೇಟಾವನ್ನು ಸರ್ಕಾರ ಉಲ್ಲೇಖಿಸಿದೆ.

ಸೋಂಕಿನ ಮುಖ್ಯ ಕಾರಣ ಅಸುರಕ್ಷಿತ ಲೈಂಗಿಕತೆ ಎಂದು ಕಂಡುಬಂದಿದೆ. ಮಧ್ಯಪ್ರದೇಶ ಮೂಲದ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಆರ್‌ಟಿಐ ಅರ್ಜಿ ಸಲ್ಲಿಕೆ ಮಾಡಿದ್ದು, ಈ ವೇಳೆ ಈ ಮಾಹಿತಿ ಹೊರಬಿದ್ದಿದೆ.

ಮೈಸೂರಲ್ಲಿ ಹೆಚ್ಚುತ್ತಿದೆ ಎಚ್ಐವಿ ಸೋಂಕಿತರ ಸಂಖ್ಯೆ! ಮೈಸೂರಲ್ಲಿ ಹೆಚ್ಚುತ್ತಿದೆ ಎಚ್ಐವಿ ಸೋಂಕಿತರ ಸಂಖ್ಯೆ!

ಭಾರತದಲ್ಲಿ 2011-2021 ರ ನಡುವೆ ಅಸುರಕ್ಷಿತ ಲೈಂಗಿಕತೆಯಿಂದಾಗಿ 17,08,777 ಜನರು ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಒದಗಿಸಿದ ಮಾಹಿತಿಯು ಬಹಿರಂಗಪಡಿಸಿದೆ.

 HIV infects over 17 lakh people in India in last 10 years

ಕಳೆದ ಹತ್ತು ವರ್ಷದಲ್ಲಿ ಎಚ್‌ಐವಿ ಪ್ರಕರಣ ಇಳಿಕೆ

ಪ್ರಮುಖವಾಗಿ, ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಎಚ್ಐವಿ ಪ್ರಕರಣವು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಡೇಟಾ ಸೂಚಿಸುತ್ತದೆ. 2011-12ರಲ್ಲಿ ಅಸುರಕ್ಷಿತ ಲೈಂಗಿಕತೆಯಿಂದ ಜನರಲ್ಲಿ ಎಚ್‌ಐವಿ ಹರಡುವವರ ಸಂಖ್ಯೆ 2.4 ಲಕ್ಷ ದಾಖಲಾಗಿದೆ. 2020-21 ರಲ್ಲಿ, ಪ್ರಕರಣವು 2.4 ಲಕ್ಷ ಜನರಿಂದ 85,268 ಕ್ಕೆ ಇಳಿದಿದೆ.

ಆಂಧ್ರಪ್ರದೇಶ ಅಗ್ರ ಸ್ಥಾನದಲ್ಲಿ, ಕರ್ನಾಟಕ ಎಷ್ಟನೇ ಸ್ಥಾನ?

ಇನ್ನು ನಾವು ರಾಜ್ಯವಾರು ದತ್ತಾಂಶವನ್ನು ನೋಡುವಾಗ ಆಂಧ್ರ ಪ್ರದೇಶವು ಹೆಚ್ಚು ಎಚ್‌ಐವಿ ಸೋಂಕಿತರನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಎಚ್‌ಐವಿ ಸೋಂಕಿತರ ಪಟ್ಟಿಯಲ್ಲಿ ಆಂಧ್ರ ಪ್ರದೇಶ ರಾಜ್ಯವು ಟಾಪ್‌ನಲ್ಲಿದೆ. ಆಂಧ್ರಪ್ರದೇಶದಲ್ಲಿ 3,18,814 ಎಚ್ಐವಿ ಪ್ರಕರಣಗಳು ವರದಿ ಆಗಿದೆ. ದರ ನಂತರ ಮಹಾರಾಷ್ಟ್ರದಲ್ಲಿ 2,84,577, ಕರ್ನಾಟಕದಲ್ಲಿ 2,21,982, ತಮಿಳುನಾಡಿನಲ್ಲಿ 1,16,536, ಉತ್ತರ ಪ್ರದೇಶದಲ್ಲಿ 1,10,911 ಮತ್ತು ಗುಜರಾತ್‌ನಲ್ಲಿ 87,440 ಪ್ರಕರಣಗಳಿವೆ.

ವಿಶ್ವ ಏಡ್ಸ್ ದಿನ: ಜಾಗೃತಿ ಮೂಡಿಸಲು ಬದ್ಧರಾಗೋಣವೆಂದ ರಾಜಕೀಯ ನಾಯಕರುವಿಶ್ವ ಏಡ್ಸ್ ದಿನ: ಜಾಗೃತಿ ಮೂಡಿಸಲು ಬದ್ಧರಾಗೋಣವೆಂದ ರಾಜಕೀಯ ನಾಯಕರು

18 ತಿಂಗಳ ಪರೀಕ್ಷೆಯಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, 2011-12 ರಿಂದ 2020-21 ರವರೆಗೆ ರಕ್ತ ಮತ್ತು ರಕ್ತದ ಉತ್ಪನ್ನಗಳ ಮೂಲಕ ಹರಡುವ ಮೂಲಕ 15,782 ಜನರು ಎಚ್ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ತಾಯಿಯಿಂದ ಮಗುವಿಗೆ ಸೋಂಕು ಹರಡಿದ ಪ್ರಕರಣಗಳು 4,423 ಆಗಿದೆ. ಅಂಕಿಅಂಶಗಳ ಪ್ರಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಚ್ಐವಿ ಹರಡುವಿಕೆಯು ಕುಸಿತವನ್ನು ಕಂಡಿದೆ.

2020 ರ ಹೊತ್ತಿಗೆ ಎಚ್ಐವಿ ಇದ್ದ 23,18,737 ಜನರಲ್ಲಿ 81,430 ಮಂದಿ ಮಕ್ಕಳು ಆಗಿದ್ದರು. ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ನೇರವಾಗಿ ದಾಳಿ ಮಾಡುವ ಕಾರಣ ಎಚ್ಐವಿ ಮನುಷ್ಯರಿಗೆ ತುಂಬಾ ಅಪಾಯಕಾರಿ. ವೈರಸ್‌ಗೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೆ ಸರಿಯಾದ ವೈದ್ಯಕೀಯ ಆರೈಕೆಯೊಂದಿಗೆ ಅದನ್ನು ನಿರ್ವಹಿಸಬಹುದು. ಚಿಕಿತ್ಸೆ ನೀಡದೆ ಬಿಟ್ಟರೆ, ವೈರಸ್ ಏಡ್ಸ್ ಗೆ ಕಾರಣವಾಗಬಹುದು.

English summary
HIV infects over 17 lakh people in India in last 10 years; Andhra Pradesh tops in states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X