ಹಿಮಾಚಲದಲ್ಲಿ ಬಿಜೆಪಿ ಗೆದ್ದರೂ ಪ್ರೇಮ್ ಕುಮಾರ್ ಅವಧಿ ಪೂರೈಸಲ್ಲ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 21: ಹಿಮಾಚಲ ಪ್ರದೇಶದ 68 ಸ್ಥಾನಗಳಿಗೆ ನವೆಂಬರ್ 09ರಂದು ಒಂದು ಹಂತದ ಮತದಾನ ನಡೆದಿದ್ದು, , ಡಿಸೆಂಬರ್ 18ಕ್ಕೆ ಮತ ಎಣಿಕೆ ನಡೆಯಲಿದೆ. ಒಂದು ವೇಳೆ ಬಿಜೆಪಿ ಜಯಭೇರಿ ಬಾರಿಸಿದರೂ ಸಿಎಂ ಅಭ್ಯರ್ಥಿ ಪೂರ್ಣಾವಧಿ ಪೂರೈಸಲು ಸಾಧ್ಯವಾಗುವುದಿಲ್ಲ.

ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಪ್ರಕಟ

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಅವರು ಗೆಲುವು ಸಾಧಿಸಿ ಸಿಎಂ ಪಟ್ಟಕ್ಕೇರಿದರೂ ಅವರ ಅವಧಿ 2019ರ ಲೋಕಸಭೆ ಚುನಾವಣೆ ಹೊತ್ತಿಗೆ ಮುಗಿಯಲಿದೆ. ಇದಕ್ಕೆ ಭಾರತೀಯ ಜನತಾಪಕ್ಷದಲ್ಲಿರುವ ಅಲಿಖಿತ ನಿಯಮವೇ ಕಾರಣ.

Himachal Pradesh election: Why Prem Kumar Dhumal may last as CM only till 2019 Lok Sabha polls even if BJP wins.

ಒಂದು ವೇಳೆ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ(ಇತಿಹಾಸ ಅವಲೋಕಿಸಿದರೆ ಇಲ್ಲಿ ಒಮ್ಮೆ ಕೂಡಾ ಸತತವಾಗಿ ಯಾವುದೇ ಪಾರ್ಟಿ ಅಧಿಕಾರ ಉಳಿಸಿಕೊಂಡಿಲ್ಲ) 83 ವರ್ಷ ವಯಸ್ಸಿನ ವೀರಭದ್ರ ಸಿಂಗ್ ಅವರು ಮತ್ತೊಂದು ಅವಧಿಗೆ ಸಿಎಂ ಆಗಲಿದ್ದಾರೆ.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ ಬಿಜೆಪಿ

ಸದ್ಯದ ಸಮೀಕ್ಷೆಗಳ ಪ್ರಕಾರ ಬಿಜೆಪಿ 43 ರಿಂದ 47 ಸೀಟು ಗೆದ್ದು ಅಧಿಕಾರ ಸ್ಥಾಪಿಸಲಿದೆ. 35 ಸ್ಥಾನಗಳ ಮ್ಯಾಜಿಕ್ ಸಂಖ್ಯೆ ದಾಟುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ 21 ರಿಂದ 25 ಸ್ಥಾನ ಗಳಿಸಬಹುದು.

ಸಮೀಕ್ಷೆ: ಹಿಮಾಚಲ ಪ್ರದೇಶದಲ್ಲೂ ಹಾರಲಿದೆ ಬಿಜೆಪಿ ಪತಾಕೆ

2012ರಲ್ಲಿ ಕಾಂಗ್ರೆಸ್ 36 ಸ್ಥಾನ ಹಾಗೂ ಬಿಜೆಪಿ 26 ಸ್ಥಾನಗಳಿಸಿತ್ತು. ದಾಖಲೆಯ 6ನೇ ಬಾರಿಗೆ ವೀರಭದ್ರ ಸಿಂಗ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಸಿ-ವೋಟರ್ ಸಮೀಕ್ಷೆಯಲ್ಲೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಗೆಲುವು

ಈಗಿನ ಸಂದರ್ಭದಲ್ಲಿ ಸದ್ಯ 73 ವರ್ಷ ವಯಸ್ಸಿನ ಪ್ರೇಮ್ ಕುಮಾರ್ ಅವರು ಅಧಿಕಾರಕ್ಕೆ ಬಂದರೆ 2019ರಲ್ಲಿ 75 ವರ್ಷಕ್ಕೆ ಕಾಲಿರಿಸುತ್ತಾರೆ. ಇದರ ಬೆನ್ನಲ್ಲೆ ಸಿಎಂ ಕುರ್ಚಿಯಿಂದ ಕೆಳಗಿಳಿಯಲೆ ಬೇಕಾಗುತ್ತದೆ. ಕಾರಣ, 75 ವರ್ಷಕ್ಕೂ ಮೇಲ್ಪಟ್ಟವರು ಉನ್ನತ ಹುದ್ದೆಯಲ್ಲಿರುವುದು ಭಾಜಪದಲ್ಲಿ ನಿಷಿದ್ಧ.

ಕಾಂಗ್ರೆಸ್ ಒಂದು ಗೆದ್ದಲು ಹುಳ, ಹೊಸಕಿ ಹಾಕಿ : ಮೋದಿ

2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿಯ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಯಶ್ವಂತ್ ಸಿನ್ಹಾ ಹಾಗೂ ಶಾಂತಕುಮಾರ್ ಅವರಿಗೆ ಬಂದ ಸ್ಥಿತಿ ಪ್ರೇಮ್ ಕುಮಾರ್ ಅವರಿಗೂ ಬರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Himachal Pradesh election: Why Prem Kumar Dhumal may last as CM only till 2019 Lok Sabha polls even if BJP wins.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ