ಡಿಸೆಂಬರ್ 14ರ ಸಂಜೆವರೆಗೆ ಎಕ್ಸಿಟ್ ಪೋಲ್ ಪ್ರಕಟಿಸದಂತೆ ನಿರ್ಬಂಧ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ನವೆಂಬರ್ 8: ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳನ್ನು ಡಿಸೆಂಬರ್ 14ರ ಸಂಜೆವರೆಗೆ ಪ್ರಕಟಿಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.

ಸಿ-ವೋಟರ್ ಸಮೀಕ್ಷೆಯಲ್ಲೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಗೆಲುವು

ಎರಡೂ ರಾಜ್ಯಗಳಲ್ಲಿ ಎಲ್ಲಾ ಹಂತದ ಮತದಾನ ಕೊನೆಗೊಂಡ ಅರ್ಧಗಂಟೆ ನಂತರ ಅಂದರೆ ಡಿಸೆಂಬರ್ 14ರ ಸಂಜೆಯ ನಂತರ ಚುನಾವಣೋತ್ತರ ಸಮೀಕ್ಷೆ ಬಹಿರಂಗಪಡಿಸಬಹುದು ಎಂದು ಚುನಾವಣಾ ಆಯೋಗ ತನ್ನ ಸುತ್ತೋಲೆಯಲ್ಲಿ ಹೇಳಿದೆ.

Himachal, Gujarat elections: No exit polls before Dec 14 says EC

ಹಿಮಾಚಲ ಪ್ರದೇಶದ ನವೆಂಬರ್ 9ರಂದು ಒಂದೇ ಹಂತದ ಮತದಾನ ನಡೆಯಲಿದೆ. ಇನ್ನು ಗುಜರಾತ್ ನಲ್ಲೂ ಮೊದಲ ಹಂತದ ಮತದಾನ ಡಿಸೆಂಬರ್ 9ರಂದು ನಡೆಯಲಿದೆ. ಎರಡನೇ ಹಂತದ ಮತದಾನ ಇಲ್ಲಿ ಡಿಸೆಂಬರ್ 14ರಂದು ನಡೆಯಲಿರುವುದರಿಂದ ಅಲ್ಲಿಯವರೆಗೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಬಹಿರಂಗಪಡಿಸುವಂತಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸದ್ಯ ಚಾಲ್ತಿಯಲ್ಲಿರುವ ಕಾನೂನುಗಳ ಪ್ರಕಾರ ಮತದಾನಕ್ಕೂ 48 ಗಂಟೆಗಳ ಮೊದಲು ಸಮೀಕ್ಷೆಯ ವರದಿಗಳನ್ನು ಜನರ ಮುಂದಿಡುವಂತಿಲ್ಲ.

ಗುಜರಾತ್ ವಿಧಾನಸಭಾ ಚುನಾವಣೆ: ತಿಳಿದುಕೊಳ್ಳಬೇಕಾದ ಕೆಲವು ಸಂಗತಿ

ಇದರ ಜತೆಗೆ ಮತದಾನಕ್ಕೂ 48 ಗಂಟೆಗಳ ಮೊದಲು ಯಾವುದೇ ಟಿವಿ ಚಾನಲ್ ಗಳು, ರೇಡಿಯೋ ಸ್ಟೇಷನ್ ಗಳು ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರ ಇಲ್ಲವೇ ಚುನಾವಣೆಯ ಮೇಲೆ ಪರಿಣಾಮ ಬೀರುವಂತ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Election Commission of India has barred exit polls for the Himachal Pradesh and Gujarat assembly elections 2018 till December 14. The EC said that exit polls cannot be made public before December 14 evening.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ