ವೇಣುಗೋಪಾಲ್ ಲೈಂಗಿಕ ಸಾಹಸದ ಬಗ್ಗೆ ಸರಿತಾ ನಾಯರ್ ಹೇಳಿಕೆಗಳು

Posted By:
Subscribe to Oneindia Kannada
   ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ರ ಲೈಂಗಿಕ ಕಥೆಯನ್ನ ಬಿಚ್ಚಿಟ್ಟ ಸರಿತಾ ನಾಯರ್

   ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ರ ಮೇಲೆ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ಆರೋಪ ಬಿಜೆಪಿ ನಾಯಕರಿಗೆ ಸರಿಯಾಗಿ ತಗಲ್ಹಾಕಿಕೊಂಡಂತೆ ಆಗಿದೆ.

   ಕೇರಳದ ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ನ ಹೇಳಿಕೆ ಆಧರಿಸಿ ಸಿದ್ಧಪಡಿಸಿರುವ ನ್ಯಾಯಾಂಗ ವರದಿಯಲ್ಲಿ ವೇಣುಗೋಪಾಲ್ ರ ಲೈಂಗಿಕ ದೌರ್ಜನ್ಯದ ವಿವರಗಳು ಎಳೆ ಎಳೆಯಾಗಿ ದಾಖಲಾಗಿವೆ.

   ಚುನಾವಣಾ ವರ್ಷದಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡರಿಗೆ ಕಾಡಲಿದೆಯೇ ಸ್ತ್ರೀಕಂಟಕ?

   ವರದಿಯಲ್ಲಿ ಸರಿತಾ ನಾಯರ್ ಹೇಳಿರುವ ಪ್ರಮುಖಾಂಶಗಳು ಹೀಗಿವೆ.

   ಟೀಂ ಸೋಲಾರ್ ಬ್ರ್ಯಾಂಚ್ ಉದ್ಘಾಟನೆ

   ಟೀಂ ಸೋಲಾರ್ ಬ್ರ್ಯಾಂಚ್ ಉದ್ಘಾಟನೆ

   ಟೀಂ ಸೋಲಾರ್ ಬ್ರ್ಯಾಂಚ್ ಉದ್ಘಾಟನೆಗೆ ವೇಣುಗೋಪಾಲ್ ರನ್ನು ಆಹ್ವಾನಿಸಲು ತೆರಳಿದಾಗ ಸರಿತಾರ ಹಿಂಭಾಗವನ್ನು ಸವರಿದ್ದಾರೆ. ಈ ಘಟನೆಗೆ ಅಂದು ಸರಿತಾ ಜತೆಗೆ ತೆರಳಿದ್ದ ಜನರಲ್ ಮ್ಯಾನೇಜರ್ ಸಾಕ್ಷಿಯಾಗಿದ್ದಾರೆ. ಅಸಲಿಗೆ ಅಂದಿನ ಘಟನೆಯಲ್ಲಿ ಆಕೆಯನ್ನು ಆ ಜನರಲ್ ಮ್ಯಾನೇಜರ್ ಸುಮ್ಮನಾಗಿಸಿದ್ದಾರೆ.

   ಸ್ಟಿಲ್ ಲವ್ ಯೂ

   ಸ್ಟಿಲ್ ಲವ್ ಯೂ

   ಆ ಘಟನೆಯ ನಂತರದ ಕೆಲ ದಿನಗಳಿಗೆ ವೇಣುಗೋಪಾಲ್ 'ತುಂಬಾ ಮೃದುವಾಗಿತ್ತು', 'ಸ್ಟಿಲ್ ಲವ್ ಯೂ' ಎಂದು ಸರಿತಾ ಮೊಬೈಲ್ ಗೆ ಸಂದೇಶ ಕಳುಹಿಸಿದ್ದಾರೆ. ನೀನು ದೆಹಲಿಗೆ ಬಂದರಷ್ಟೇ ಬ್ರ್ಯಾಂಚ್ ಉದ್ಘಾಟನೆಗೆ ಬರುವುದಾಗಿ ಫೋನ್ ನಲ್ಲಿ ಹೇಳಿದ್ದಾರೆ.

   ಅನಿಲ್ ಕುಮಾರ್

   ಅನಿಲ್ ಕುಮಾರ್

   ಅನಿಲ್ ಕುಮಾರ್ ಹಾಗೂ ನಜರುಲ್ಲಾ ಎಂಬುವವರು ವೇಣುಗೋಪಾಲ್ ಪರ ಮಧ್ಯವರ್ತಿಗಳಂತೆ ವರ್ತಿಸಿದ್ದಾರೆ.

   ಇಕೋ ಟೂರಿಸಂ

   ಇಕೋ ಟೂರಿಸಂ

   ಇಕೋ ಟೂರಿಸಂಗೆ ಸಂಬಂಧಿಸಿದ ಪತ್ರಗಳಿಗೆ ಸಹಿ ಹಾಕುವುದಾಗಿ ರೋಸ್ ಹೌಸ್ ಗೆ ಕರೆಸಿಕೊಂಡ ವೇಣುಗೋಪಾಲ್ ಅದಾಗಲೇ ಮದ್ಯಪಾನ ಮಾಡಿ, ಸರಿತಾ ಮೇಲೆ ದೈಹಿಕ ದೌರ್ಜನ್ಯ ನಡೆಸಿದ್ದಾರೆ. ಅ ಬಳಿಕ ಸರಿತಾಗೆ ಐದು ದಿನಗಳ ಕಾಲ ನಡೆಯಲು, ನಿಲ್ಲಲು ಸಹ ಸಾಧ್ಯವಾಗಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಕೂಡ ಸಾಕ್ಷ್ಯವಿದೆ.

   ಫೋನ್ ಕರೆ

   ಫೋನ್ ಕರೆ

   ಈ ಘಟನೆ ನಂತರವೂ ವೇಣುಗೋಪಾಲ್ ಫೋನ್ ಕರೆ ಮಾಡಿದ್ದಕ್ಕೆ, ಸಂದೇಶ ಕಳುಹಿಸುತ್ತಿದ್ದಿದ್ದಕ್ಕೆ ಕೂಡ ಸಾಕ್ಷ್ಯಗಳಿರುವುದಾಗಿ ಸರಿತಾ ನಾಯರ್ ತಿಳಿಸಿದ್ದಾರೆ.

   ಸರಿತಾ ನಾಯರ್

   ಸರಿತಾ ನಾಯರ್

   ಅಂದಹಾಗೆ ಸರಿತಾ ನಾಯರ್ ಇತರ ನಾಯಕರ ವಿರುದ್ಧ ಕೂಡ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಎಲ್ಲ ಆರೋಪಗಳ ವಿರುದ್ಧ ಎಫ್ ಐಆರ್ ದಾಖಲಿಸಬಹುದು ಎಂದು ನ್ಯಾಯಾಂಗ ಆಯೋಗ ಹೇಳಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Here is the Highlights of Solar scam accused Sarita Nair allegation against Karnataka Congress incharge KC Venugopal.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ