ಕೊಪ್ಪಳದ ಮಲ್ಲಮ್ಮ ಬಗ್ಗೆ 'ಮನ್ ಕೀ ಬಾತ್'ನಲ್ಲಿ ಮಾತನಾಡಿದ ಮೋದಿ

Posted By: Staff
Subscribe to Oneindia Kannada

ಬೆಂಗಳೂರು, ಆಗಸ್ಟ್ 28 : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶವನ್ನು ಉದ್ದೇಶಿಸಿ 'ಮನ್ ಕೀ ಬಾತ್' ಮೂಲಕ ಮಾತನಾಡಿದರು. ತಮ್ಮ ತಿಂಗಳ ರೆಡಿಯೋ ಕಾರ್ಯಕ್ರಮದಲ್ಲಿ ಮೋದಿ ಕರ್ನಾಟಕದ ಬಾಲಕಿಯ ಸಾಧನೆಯನ್ನು ಪ್ರಸ್ತಾಪಿಸಿದರು.

ರೆಡಿಯೋ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡುವ ಪ್ರಧಾನಿ ಮೋದಿ ಅವರ ತಿಂಗಳ ಕಾರ್ಯಕ್ರಮ ಭಾನುವಾರ ನಡೆಯಿತು. 'ಮನ್ ಕೀ ಬಾತ್' ಸರಣಿಯ 23ನೇ ಕಾರ್ಯಕ್ರಮದಲ್ಲಿ ಮೋದಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದರು.[ಶೌಚಾಲಯಕ್ಕಾಗಿ ಉಪವಾಸ ಕುಳಿತ ವಿದ್ಯಾರ್ಥಿನಿ ಮಲ್ಲಮ್ಮ!]

Highlights : Narendra Modi addresses the nation on Mann Ki Baat

ತಮ್ಮ ಭಾಷಣದಲ್ಲಿ ಮೋದಿ ಶೌಚಾಲಯಕ್ಕಾಗಿ ಉಪವಾಸ ಮಾಡಿ ರಾಜ್ಯದ ಗಮನ ಸೆಳೆದಿದ್ದ ಕೊಪ್ಪಳದ ಮಲ್ಲಮ್ಮ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಮನೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದ 10ನೇ ತರಗತಿ ಮಲ್ಲಮ್ಮ ಉಪವಾಸ ಕುಳಿತು ಸುದ್ದಿ ಮಾಡಿದ್ದಳು.[ವಿದ್ಯಾರ್ಥಿ ಮಲ್ಲಮ್ಮಳ ಉಪವಾಸಕ್ಕೆ ಫಲ ಸಿಕ್ಕಿತ್ತು]

ವಿದ್ಯಾರ್ಥಿನಿ ಮಲ್ಲಮ್ಮ ಬೇಡಿಕೆ ಈಡೇರಿದ್ದು, ಕೊಪ್ಪಳ ಜಿಲ್ಲಾ ಪಂಚಾಯಿತಿ ಸಿಇಓ ಆರ್. ರಾಮಚಂದ್ರನ್ ಮತ್ತು ಗ್ರಾಮ ಪಂಚಾಯಿತಿ ಸಹಕಾರದಿಂದ ಮಲ್ಲಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಶೌಚಾಲಯ ನಿರ್ಮಾಣ ಮಾಡಿಕೊಟ್ಟ ಗ್ರಾಮಸ್ಥರಿಗೆ ಮೋದಿ ಧನ್ಯವಾದ ಅರ್ಪಿಸಿದರು.

ಮೋದಿ ಭಾಷಣದ ಮುಖ್ಯಾಂಶಗಳು

* ಒಲಂಪಿಕ್‌ನಲ್ಲಿ ಸಾಧನೆ ಮಾಡುವ ಮೂಲಕ ನಮ್ಮ ಪುತ್ರಿಯರು ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡಲು ನಾವು ಸಮಿತಿ ರಚನೆ ಮಾಡಿದ್ದೇವೆ.

* ಓದಿನ ಜೊತೆಗೆ ಕ್ರೀಡೆಗೂ ನಾವು ಹೆಚ್ಚಿನ ಗಮನವನ್ನು ಕೊಡಬೇಕು. ಆಗಸ್ಟ್ 29 ಹಾಕಿ ದಂತಕತೆ ಧ್ಯಾನ್‌ಚಂದ್ ಹುಟ್ಟು ಹಬ್ಬ. ಅದನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಣೆ ಮಾಡೋಣ

* ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ. ನಮ್ಮ ಜೀವನದಲ್ಲಿ ತಾಯಿ ಬಳಿಕ ಮಹತ್ವದ ಪಾತ್ರ ವಹಿಸುವುದು ಶಿಕ್ಷಕರು.
ವಿದ್ಯಾರ್ಥಿಗಳನ್ನು ಬೆಳೆಸಲು ಶಿಕ್ಷಕರು ತಮ್ಮ ಜೀವನವನ್ನು ಮುಡುಪಾಗಿಡುತ್ತಾರೆ.

ಮೋದಿ ಭಾಷಣ ಕೇಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On August 28, 2016 Prime Minister Narendra Modi is addressd the nation through Mann Ki Baat programme. This is the 23rd edition of the his monthly radio programme.
Please Wait while comments are loading...