ಪಂಜಾಬಿನ ಸಿಂಹಿಣಿ ಸನ್ನಿ ಲಿಯೋನ್ ಚಿತ್ರಕ್ಕೆ ಭೀತಿ!

Posted By:
Subscribe to Oneindia Kannada

ಲೂಧಿಯಾನ, ಫೆ. 03: ಪಂಜಾಬಿನ ಲೂಧಿಯಾನ ಬುಧವಾರ ಎರಡನೇ ಬಾರಿಗೆ ಸುದ್ದಿಮನೆ ಕದ ತಟ್ಟಿದೆ. ಹಾಕಿ ಇಂಡಿಯಾ ನಾಯಕ ಸರ್ದಾರ್ ಸಿಂಗ್ ಮೇಲಿನ ರೇಪ್ ಕೇಸ್ ಆದ ಮೇಲೆ ಬಾಲಿವುಡ್ 'ಬೇಬಿ ಡಾಲ್' ಸನ್ನಿ ಲಿಯೋನ್ ವಿರುದ್ಧದ ಪ್ರತಿಭಟನೆಯ ಸುದ್ದಿ ಬಂದಿದೆ.

ಸನ್ನಿ ಲಿಯೋನ್ ಅಭಿನಯದ 'ಮಸ್ತಿಝಾದೆ' ಚಿತ್ರ ಪ್ರದರ್ಶನ ವಿರೋಧಿಸಿ ಬುಧವಾರ (ಫೆಬ್ರವರಿ 03) ದಂದು ಹಿಂದೂ ನ್ಯಾಯ ಪೀಠದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.[ಹಾಕಿ ಇಂಡಿಯಾ ಕ್ಯಾಪ್ಟನ್ ಸರ್ದಾರ್ ಮೇಲೆ ರೇಪ್ ಕೇಸ್]

Here's why Sunny Leone’s Mastizaade is facing trouble in Ludhiana

'ಮಸ್ತಿಝಾದೆ ಚಿತ್ರದ ಟ್ರೈಲರ್ ನೋಡೋಕೆ ಆಗುವುದಿಲ್ಲ. ಅದರಲ್ಲೂ ನಟಿ ಸನ್ನಿ ಲಿಯೋನ್ ವೈಯ್ಯಾರ, ಬಳುಕಾಟ ನಮ್ಮ ಯುವ ಜನತೆ ದಿಕ್ಕು ತಪ್ಪಿಸುತ್ತಿದೆ. ಈ ಚಿತ್ರದಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ. ಸಮಾಜದ ಆರೋಗ್ಯ ಹದಗೆಡಿಸುವ ಇಂಥ ಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನೀಡುವುದಿಲ್ಲ. ಅವಾಚ್ಯ ಶಬ್ದ ಹಾಗೂ ಅಶ್ಲೀಲ ದೃಶ್ಯಗಳಿರುವ ಇಂಥ ಚಿತ್ರವನ್ನು ಸೆನ್ಸಾರ್ ಮಂಡಳಿ ಹೇಗೆ ಪಾಸ್ ಮಾಡಿದರೋ ಗೊತ್ತಿಲ್ಲ' ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಮುಖ್ಯವಾಗಿ ಸನ್ನಿ ಲಿಯೋನ್ ಹಾಗೂ ನಟ ತುಷಾರ್ ಕಪೂರ್ ವಿರುದ್ಧ ಘೋಷಣೆಗಳು ಕೇಳಿಬಂದಿದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮುಂದೆ ಬಂದು ಚಿತ್ರವನ್ನು ದೇಶದೆಲ್ಲೆಡೆ ನಿಷೇಧವಾಗುವಂತೆ ಮಾಡುವ ತನಕ ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.

ಸೆನ್ಸಾರ್ ಬೋರ್ಡ್ ನಿಂದ 'ಎ' ಪ್ರಮಾಣ ಪತ್ರ ಪಡೆದು ಜನವರಿ 29, 2016ರಂದು ದೇಶದೆಲ್ಲೆಡೆ ಬಿಡುಗಡೆಯಾಗಿರುವ ವಯಸ್ಕರ ಕಾಮಿಡಿ ಚಿತ್ರ 'ಮಸ್ತಿಝಾದೆ' ಈಗಾಗಲೇ 20ಕೋಟಿ ರು ಗೂ ಅಧಿಕ ಮೊತ್ತ ಬಾಚಿಕೊಂಡಿದೆ.

ಚಿತ್ರದ ಪೋಸ್ಟರ್, ಟ್ರೈಲರ್ ರಿಲೀಸ್ ಆದ ದಿನದಿಂದ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಸೆನ್ಸಾರ್ ಮಂಡಳಿಯಲ್ಲೂ ಕೂಡಾ ಎರಡು ಬಾರಿ ರಿಜೆಕ್ಟ್ ಆಗಿತ್ತು. ಸೆಂಟರ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಟ್ ಅಥವಾ ಸಂಕ್ಷಿಪ್ತವಾಗಿ ಸೆನ್ಸಾರ್ ಬೋರ್ಡ್ ನ ಎರಡು ಸಮಿತಿಗಳಿಂದ ಮಸ್ತಿಝಾದೆ ತಿರಸ್ಕರಿಸಲ್ಪಟ್ಟು ನಂತರ ಎ ಸರ್ಟಿಫಿಕೇಟ್ ಪಡೆದು ತೆರೆ ಕಂಡಿದೆ.(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English: Trouble for Sunny Leone?
English summary
It seems trouble has come for Sunny Leone starrer Mastizaade as members of the Hindu Nyay Peeth on Wednesday protested against the movie in Ludhiana.
Please Wait while comments are loading...