• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ

|

ನವದೆಹಲಿ, ಆಗಸ್ಟ್ 21: ಭಾರತದಲ್ಲಿ ಇತ್ತೀಚೆಗೆ ಒಂದರ ಹಿಂದೊಂದರಂತೆ ಸಂಭವಿಸುತ್ತಿರುವ ಮಕ್ಕಳ ನಿಗೂಢ ಆತ್ಮಹತ್ಯೆ ಪ್ರಕರಣಗಳನ್ನು ಬೆನ್ನತ್ತಿ ಹೊರಟಾಗ ಸಿಕ್ಕ ಉತ್ತರ ಬ್ಲೂವ್ಹೇಲ್ ಚಾಲೆಂಜ್ ಎಂಬ ವಿಚಿತ್ರ ಆತ್ಮಹತ್ಯಾ ಕೂಪ!

ಅಮಾಯಕ ಮಕ್ಕಳನ್ನು ಆತ್ಮಹತ್ಯೆಗೆ, ವಿಕೃತಿಗೆ ಪ್ರೇರೇಪಿಸುವ ಇಂಥದೊಂದು ವಿಚಿತ್ರ, ವಿಕೃತ, ಕ್ರೂರ ಆಟದ ಉದ್ದೇಶವೇನು? ಪಾಲಕರು, ಪೋಷಕರು, ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿರುವ ಈ ಆಟದ ಮೂಲವನ್ನು ಬೆನ್ನತ್ತಿ ಹೊರಟಾಗಿ ಸಿಕ್ಕಿದ್ದು ಹಲವು ದಿಗ್ಭ್ರಮೆ ಮೂಡಿಸುವ ಸಂಗತಿಗಳು.

'ಬ್ಲೂ ವೇಲ್' ಗೇಮ್ ಬ್ಲಾಕ್ ಮಾಡುವಂತೆ ಮೇನಕಾ ಗಾಂಧಿ ಪತ್ರ

ಮುಂಬೈಯಲ್ಲಿ ಜುಲೈ 30 ರಂದು 17 ನೇ ಮಹಡಿಯಿಂದ ಹಾರಿ ಮೃತನಾದ 14 ವರ್ಷದ ಬಾಲಕ, ಆಗಸ್ಟ್ 10 ರಂದು ಇಂದೋರ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ 7 ನೇ ತರಗತಿಯ ಬಾಲಕ, ಆಗಸ್ಟ್ 12 ರಂದು ಬಾತ್ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪಶ್ಚಿಮ ಬಂಗಾಳದ 10 ನೇ ತರಗತಿಯ ಬಾಲಕ ಇವರೆಲ್ಲರ ಸಾವಿಗೂ ಕಾರಣ ಅದೇ ಬ್ಲೂವ್ಹೇಲ್ ಎಂಬುದು ಆ ಎಲ್ಲ ಮಕ್ಕಳ ಡೈರಿಯಿಂದಾಗಿ ತಿಳಿದುಬಂದಿದೆ.

ವಿವಾದಿತ 'ಬ್ಲೂ ವೇಲ್' ಲಿಂಕ್ ತೆಗೆಯುವಂತೆ ಕೇಂದ್ರದಿಂದ ಸೂಚನೆ

ಅಷ್ಟಕ್ಕೂ ಏನಿದು ಬ್ಲೂ ವ್ಹೇಲ್? ಈ ಆಟದ ಚಟಕ್ಕೆ ಬಿದ್ದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದೇಕೆ? ಇದು ಶುರುವಾಗಿದ್ದು ಎಲ್ಲಿಂದ? ಯಾವಾಗ? ಇದರ ಉದ್ದೇಶವೇನು? ಇಲ್ಲಿದೆ ಬ್ಲೂ ವ್ಹೇಲ್ ಬಗ್ಗೆ ತಿಳಿಯಬೇಕಾದ 10 ಸಂಗತಿ.

ರಷ್ಯಾ ಮೂಲ

ರಷ್ಯಾ ಮೂಲ

ಬ್ಲೂ ವ್ಹೇಲ್ ಎಂಬ ಅಪಾಯಕಾರಿ ಆನ್ ಲೈನ್ ಆಟವನ್ನು ಪರಿಚಯಿಸಿದ್ದು, ರಷ್ಯಾದ ಫಿಲಿಪ್ ಬುಡೇಕಿನ್ ಎಂಬ ಮನಃಶಾಸ್ತ್ರ ವಿದ್ಯಾರ್ಥಿ! 2013 ರಲ್ಲಿ 'ಡೆತ್ ಗ್ರೂಪ್' ಎಂಬ ಹೆಸರಿನೊಂದಿಗೆ ಬ್ಲೂ ವ್ಹೇಲ್ ಅಸ್ತಿತ್ವಕ್ಕೆ ಬಂತು. 2015 ರಲ್ಲಿ ಬ್ಲೂವ್ಹೇಲ್ ಗೆ ಮೊದಲ ಬಲಿ ರಷ್ಯಾದಲ್ಲೇ ಆಗಿತ್ತು.

ಸಮಾಜ ಸ್ವಚ್ಛಗೊಳಿಸುವ ಉದ್ದೇಶ!

ಸಮಾಜ ಸ್ವಚ್ಛಗೊಳಿಸುವ ಉದ್ದೇಶ!

ಈ ಆಟಕ್ಕೆ 16 ಯುವಕರು ಬಲಿಯಾದಾಗ, ಆಟವನ್ನು ಆರಂಭಿಸಿದ ಬುಡೇಕಿನ್ ಅವರನ್ನು ಬಂಧಿಸಿ 3 ವರ್ಷ ಸಜೆ ವಿಧಿಸಲಾಗಿತ್ತು. ಆ ಸಮಯದಲ್ಲಿ ಈ ಆಟವನ್ನು ಆರಂಭಿಸಿದ್ದು ನಾನೇ ಎಂದು ಒಪ್ಪಿಕೊಂಡಿದ್ದ ಬುಡೇಕಿನ್, "ಈ ಸಮಾಜಕ್ಕೆ ನನ್ನಿಂದ ಯಾವುದೇ ಉಪಯೋಗವಿಲ್ಲ ಎಂದು ಯಾರಿಗನ್ನಿಸುತ್ತದೆಯೋ, ಅಂಥವರನ್ನು ಆತ್ಮಹತ್ಯೆಗೆ ಪ್ರೇರೇಪಿಸುವುದು ಈ ಆಟದ ಉದ್ದೇಶ. ಸಮಾಜವನ್ನು ಸ್ವಚ್ಛಗೊಳಿಸುವ ಗುರಿ ಈ ಆಟದಲ್ಲಿದೆ" ಎಂದಿದ್ದರು!

ಬ್ಲೂ ವ್ಹೇಲ್ ಎಂಬ ಹೆಸರೇಕೆ?

ಬ್ಲೂ ವ್ಹೇಲ್ ಎಂಬ ಹೆಸರೇಕೆ?

ಬ್ಲೂ ವ್ಹೇಲ್ (ನೀಲಿ ತಿಮಿಂಗಿಲ)ಗಳು ಸಮುದ್ರ ದಡಕ್ಕೆ ಬಂದು ನೀರಿಲ್ಲದೆ, ನಿರ್ಜಲೀಕರಣದಿಂದ ಸಾಯುತ್ತವೆ. ಈ ರೀತಿ ತಮ್ಮ ಸಾವಿಗೆ ಇವು ತಾವೇ ಕಾರಣವಾಗುವುದರಿಂದ ಬ್ಲೂವ್ಹೇಲ್ ಗಳು ಆತ್ಮಹತ್ಯೆಯನ್ನು ಪ್ರತಿನಿಧಿಸುತ್ತವೆ. ಅದಕ್ಕೆಂದೇ ಈ ಆಟಕ್ಕೆ ಬ್ಲೂವ್ಹೇಲ್ ಎಂದು ಹೆಸರು.

ಆಟಕ್ಕೆ ಸೂಚನೆ ಎಲ್ಲಿಂದ ಸಿಕ್ಕುತ್ತೆ ?

ಆಟಕ್ಕೆ ಸೂಚನೆ ಎಲ್ಲಿಂದ ಸಿಕ್ಕುತ್ತೆ ?

ಬ್ಲೂವ್ಹೇಲ್ ಆಪ್ ಡೌನ್ ಲೋಡ್ ಮಾಡಿಕೊಂಡ ವ್ಯಕ್ತಿಗೆ ಅನಾಮಿಕ ವ್ಯಕ್ತಿಯಿಂದ ಸೂಚನೆಗಳು ಬರುತ್ತಿರುತ್ತವೆ. ಈ ಆಟದಲ್ಲಿ ಒಟ್ಟು 50 ಹಂತಗಳಿರುತ್ತವೆ. ಪ್ರತಿಹಂತದಲ್ಲೂ ವ್ಯಕ್ತಿ ತನ್ನನ್ನೇ ತಾನು ಹಿಂಸಿಸಿಕೊಳ್ಳಬೇಕು! ಆತನ ಸಹಿಷ್ಣು ಶಕ್ತಿಯನ್ನು ಅಳೆಯುವ ಕೆಲಸ ಆತ ಒಂದೊಂದು ಹಂತ ದಾಟುತ್ತಿದ್ದಂತೆಯೇ ನಡೆಯುತ್ತಿರುತ್ತದೆ.

ಒಟ್ಟು 50 ಟಾಸ್ಕ್ ಗಳು!

ಒಟ್ಟು 50 ಟಾಸ್ಕ್ ಗಳು!

ಒಟ್ಟು 50 ಟಾಸ್ಕ್ ಗಳು ಇರಲಿದ್ದು, ವ್ಯಕ್ತಿ ಒಂದು ಟಾಸ್ಕ್ ಅನ್ನು ಯಶಸ್ವಿಯಾಗಿ ಮುಗಿಸಿದರೆ ಮಾತ್ರ ಆತನಿಗೆ ಮುಂದಿನ ಟಾಸ್ಕ್ ಹೇಳಲಾಗುತ್ತದೆ. ಟಾಸ್ಕ್ ಗೆಲ್ಲಲಾಗದಿದ್ದರೆ ಆತ ಚಾಲೆಂಜ್ ಸೋತಂತೆ! ತಾನು ಒಂದೊಂದು ಟಾಸ್ಕ್ ಅನ್ನೂ ಯಶಸ್ವಿಗೊಳಿಸಿದ ವಿಡಿಯೋವನ್ನು ಆಟಗಾರ, ಅನಾಮಿಕ ವ್ಯಕ್ತಿಗೆ ಕಳಿಸಬೇಕು. ಆಗ ಮಾತ್ರ ಅನಾಮಿಕ ವ್ಯಕ್ತಿ ಮುಂದಿನ ಟಾಸ್ಕ್ ನೀಡುತ್ತಾನೆ!

ಏನಿರುತ್ತೆ ಟಾಸ್ಕ್ ನಲ್ಲಿ?

ಏನಿರುತ್ತೆ ಟಾಸ್ಕ್ ನಲ್ಲಿ?

ಅತ್ಯಂತ ಕ್ರೂರ ಟಾಸ್ಕ್ ಗಳನ್ನು ನೀಡಲಾಗುವ ಈ ಆಟದಲ್ಲಿ ಆಟಗಾರನ ತಾಳ್ಮೆಯ ಪರೀಕ್ಷೆ ನಡೆಯುತ್ತದೆ. ಜಗತ್ತಿನಲ್ಲೇ ಅತ್ಯಂತ ಖಾರ ಎಂದು ಕರೆಸಿಕೊಂಡ ಗೋಸ್ಟ್ ಪೆಪ್ಪರ್ ಅನ್ನು ತಿನ್ನುವಂತೆ ಟಾಸ್ಕ್ ನೀಡಲಾಗುತ್ತದೆ! ಕೆಲವರು ಈ ಮೆಣಸಿನಕಾಯಿಯನ್ನು ತಿಂದು ಪ್ರಜ್ಞಾಹೀನರೂ ಆಗಬಹುದಾದಷ್ಟು ಖಾರ ಈ ಮೆಣಸಿನ ಕಾಯಿಯಲ್ಲಿರುತ್ತದೆ! ಒಂದು ಚಮಚದ ತುಂಬ ದಾಲ್ಚಿನ್ನಿಯ ಪುಡಿಯನ್ನು ಹಾಕಿ ಅದನ್ನು ತಿನ್ನುವುದಕ್ಕೆ ಹೇಳಲಾಗುತ್ತದೆ. ಅದನ್ನು ತಿಂದ ಕೆಲ ಹೊತ್ತಿನ ತನಕ ನೀರು ಮತ್ತು ಇನ್ನೇನನ್ನೂ ಸೇವಿಸುವಂತಿಲ್ಲ. ಈ ಪುಡಿಯನ್ನು ಇಷ್ಟು ಪ್ರಮಾಣದಲ್ಲಿ ಸೇವಿಸಿದರೆ ಗಂಟಲು ಸುಟ್ಟು ಹೋಗುವ ಸಂಭವವೂ ಇದೆ! ಮಾತ್ರವಲ್ಲ, ಇದು ಶ್ವಾಸಕೋಶ, ಅನ್ನನಾಳವನ್ನೂ ಹಾನಿಗೊಳಿಸುತ್ತದೆ!

ಮೈಮೇಲೆ ಗಾಯ ಮಾಡಿಕೊಳ್ಳುವ ಟಾಸ್ಕ್!

ಮೈಮೇಲೆ ಗಾಯ ಮಾಡಿಕೊಳ್ಳುವ ಟಾಸ್ಕ್!

ಮೈ ಮೇಲೆ ಗಾಯ ಮಾಡಿಕೊಳ್ಳುವ ಟಾಸ್ಕ್ ಸಹ ಇದರಲ್ಲಿರುತ್ತದೆ. ವ್ಯಕ್ತಿ ತನ್ನ ದೇಹದ ಕೆಲವು ಭಾಗಗಳನ್ನು ಚಾಕುವಿನಿಂದ ಚುಚ್ಚಿಕೊಂಡು ಗಾಯ ಮಾಡಿಕೊಳ್ಳಬೇಕು. ಕೆಲವೊಮ್ಮೆ ಈ ಟಾಸ್ಕ್ ಮಾಡುವಾಗ ನರವೇ ಕತ್ತರಿಸಿ ಸಾಯುವ ಸಾಧ್ಯತೆಯೂ ಇರುತ್ತದೆ! ಇದರಿಂದ ಮೆದುಳಿಗೆ ಆಮ್ಲಜನಕ ಪೂರೈಕೆಯಾಗದ ವ್ಯಕ್ತಿ ಸಾಯಬಹುದು!

ಉಪ್ಪು ಮತ್ತು ಐಸ್!

ಉಪ್ಪು ಮತ್ತು ಐಸ್!

ಈ ಟಾಸ್ಕ್ ನಲ್ಲಿ ವ್ಯಕ್ತಿ ಮೈ ಮೇಲೆಲ್ಲ ಉಪ್ಪು ಸುರಿದುಕೊಂಡು, ತಕ್ಷಣವೇ ಮೈ ಮೇಲೆ ಐಸ್ ಹಾಕಿಕೊಳ್ಳಬೇಕು. ಇದರಿಂದ ಮೈ ಎಲ್ಲ ಸುಟ್ಟು ಹೋಗಬಹುದು. ಎಳೆ ಚರ್ಮವಾದರಂತೂ ಬೆಂಕಿಯಿಂದ ಸುಟ್ಟಷ್ಟೇ ಅಪಾಯಕಾರಿ!

ಕಾನೂನು ಏನು ಹೇಳುತ್ತೆ?

ಕಾನೂನು ಏನು ಹೇಳುತ್ತೆ?

ಈ ಆಟದ ಮೂಲ ದೇಶವಾದ ರಷ್ಯಾದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಗುಂಪುಗಳಿಗೆ 6 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜಗತ್ತಿನಾದ್ಯಂತ ಈ ಆಟವನ್ನು ನಿಷೇಧಿಸಲಾಗಿದ್ದರೂ ಈ ಆಟದಿಂದ ಮುಗ್ಧ ಮಕ್ಕಳು ಇಂದಿಗೂ ಬಲಿಯಾಗುತ್ತಿರುವುದು ಬ್ಲೂ ವ್ಹೇಲ್ ಚಟ ಇನ್ನೂ ಮರೆಯಾಗಿಲ್ಲ ಎಂಬುದಕ್ಕೆ ಸಾಕ್ಷಿ. ಭಾರತದಲ್ಲಿ ಇತ್ತೀಚೆಗೆ ಈ ಆಟದಿಂದಾಗಿ ಸಾವು ಸಂಭವಿಸುತ್ತಿದೆ ಎಂಬುದು ದೃಢಪಟ್ಟ ಮೇಲೆ ಮಹಿಳಾ ಮತ್ತು ಮಕ್ಕಳ ಸಚಿವಾಲಯ ಈ ಆಟಕ್ಕೆ ಸಂಬಂಧಿಸಿದ ಎಲ್ಲ ಲಿಂಕ್ ಗಳನ್ನೂ ಸಾಮಾಜಿಕ ಜಾಲತಾಣಗಳಿಂದ ಕಿತ್ತುಹಾಕುವಂತೆ ಗೂಗಲ್, ಫೇಸ್ ಬುಕ್, ವಾಟ್ಸ್ ಆಪ್, ಇನ್ ಸ್ಟಾಗ್ರಾಂ ಮತ್ತು ಯಾಹೂ ಗಳಿಗೆ ಹೇಳಿದೆ.

ಇದುವರೆಗೂ 130 ಬಲಿ!

ಇದುವರೆಗೂ 130 ಬಲಿ!

ಈ ಆಟಕ್ಕೆ ಇದುವರೆಗೂ ಬಲಿಯಾದವರ ಸಂಖ್ಯೆ 130. ಈ ಎಲ್ಲರೂ 25 ವರ್ಷ ಒಳಗಿನ ಯುವಕರು, ಇಲ್ಲವೇ ಮಕ್ಕಳು ಎಂಬುದು ಮತ್ತಷ್ಟು ಅಪಾಯಕಾರಿ ಸಂಗತಿ. ಅಮಾಯಕ ಮಕ್ಕಳ ಮನಸ್ಸಿನಲ್ಲಿ ವಿಕೃತಿ ತುಂಬಿ ಅವರನ್ನು ಸಾವಿನ ದವಡೆಗೆ ಒಡ್ಡುತ್ತಿರುವ ಈ ಬ್ಲೂ ವ್ಹೇಲ್ ವಿರುದ್ಧ ಜಾಗತಿಕ ಸಮರ ನಡೆಯುವ ಅಗತ್ಯವಿದೆಯಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After many deaths in India by Blue whale challenge game, the union ministry of women and child development instructed google, yahoo, facebook, whats app and other social sites to remove links related to blue whale game, which is deadliest in nature. What is Blue whale challenge? who invented it? where did it origin? here is an explainer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more