70 ವರ್ಷದಿಂದ ಆಹಾರವಿಲ್ಲದ, ನೀರೂ ಕುಡಿಯದ ಯೋಗಿಯ ಕತೆ ಕೇಳಿ!

Recommended Video

      70 ವರ್ಷದಿಂದ ಅನ್ನ ನೀರಿಲ್ಲದೆ ಬದುಕಿದ್ದಾರೆ ಗುಜರಾತಿನ ಯೋಗಿ ಪ್ರಹ್ಲಾದ್ ಜಾನಿ | Oneindia Kannada

      ಮೆಹ್ಸಾನಾ, ಜೂನ್ 12: ಊಟಕ್ಕೆ ಸ್ವಲ್ಪ ತಡವಾದರೂ ಆಸಿಡಿಟಿಯಾದೀತು ಎಂದು ಹಲಬುವವರು ನಾವು! ಆದರೆ ಇಲ್ಲೊಬ್ಬ ಯೋಗಿ ಕಳೆದ 70 ವರ್ಷಗಳಿಂದ ಅನ್ನ ಹೋಗಲೀ, ನೀರೂ ಕುಡಿಯದೆ ಬದುಕಿದ್ದಾರೆ ಅಂದ್ರೆ ನಂಬ್ತೀರಾ?

      ಗುಜರಾತಿನ ಮೆಹ್ಸಾನಾದ ಆಶ್ರಮವೊಂದರಲ್ಲಿರುವ ಪ್ರಹ್ಲಾದ್ ಜಾನಿ ಎಂಬ ಯೋಗಿ ಕಳೆದ 7 ದಶಜಳಿಂದ ಹನಿ ನೀರು ಕುಡಿದಿಲ್ಲ, ಹಿಡಿ ಆಹಾರ ಸೇವಿಸಿಲ್ಲ! ಆದರೂ ಆರೋಗ್ಯದಲ್ಲಿ ಯಾವ ಸಮಸ್ಯೆಯೂ, ಏರುಪೇರೂ ಆಗದೆ ಆರಾಮವಾಗಿದ್ದಾರೆ!

      85 ವರ್ಷದ ಪ್ರಹ್ಲಾದ್ ಜಾನಿ ಇಲ್ಲಿನ ಜನರ ಬಾಯಲ್ಲಿ 'ಮಾತಾಜಿ' ಎಂದೇ ಕರೆಸಿಕೊಳ್ಳುತ್ತಾರೆ. ಪೂರ್ತಿ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದ ವೇಷ ಧರಿಸುವ ಇವರು ಯಾವಾಗಲೂ ಶಾಂತಿಯ ಮಂತ್ರ ಪಠಿಸುತ್ತಿರುತ್ತಾರೆ.

      Here is a yogi, spent more that 70 years without food and water!

      ಸದಾ ಪ್ರಾರ್ಥನೆ ಮಾಡುತ್ತ, ಎಲ್ಲರನ್ನೂ ಪ್ರೀತಿ ಮಾಡುವ ಇವರಿಗೆ ಆಹಾರವೆಂದರೆ ವರ್ಜ್ಯ! ಆಹಾರವನ್ನೇ ಸೇವಿಸದೆ ಇವರು ಇಷ್ಟು ಸುದೀರ್ಘ ಕಾಲ ಬದುಕಿರುವುದು ವಿಜ್ಞಾನ ಲೋಕಕ್ಕೂ ಪವಾಡವೆನ್ನಿಸಿದೆ. ಈಗಾಗಲೇ ಇವರನ್ನು ಹಲವು ಬಾರಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಹಲವು ರೀತಿಯ ಸಂಶೋಧನೆಗಳನ್ನು ಮಾಡಲಾಗಿದೆಯಾದರೂ ಯಾವುದರಲ್ಲೂ ಇವರ ಆರೋಗ್ಯದ ಗುಟ್ಟು ಮಾತ್ರ ಬಯಲಾಗಿಲ್ಲ.

      ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ ಅವರು ಸಹ ಇವರನ್ನು ಭೇಟಿಯಾಗಿ ಇವರ ಆರೋಗ್ಯದ ಕುರಿತು ಅಧ್ಯಯನ ನಡೆಸಿದ್ದರಂತೆ! ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಸಹ ಜಾನಿ ಅವರ ಆಶೀರ್ವಾದ ಪಡೆದಿದ್ದಾರೆ.

      ಎಷ್ಟೇ ಅಧ್ಯಯನ ನಡೆದರೂ 85 ವರ್ಷದ ಜಾನಿಯ ಪವಾಡಸದೃಶ ಬದುಕು ಮಾತ್ರ ನಿಗೂಢತೆಯ ಗೂಡಾಗಿಯೇ ಉಳಿದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+