ಮಂಗಳವಾರ ದೇಶ, ವಿದೇಶದಲ್ಲಿ ಏನೇನಾಯ್ತು ನೋಡಿ

ಬೆಂಗಳೂರು, ಫೆ. 10: ಭಾರತ ಹಾಗೂ ವಿದೇಶಗಳಲ್ಲಿ ಮಂಗಳವಾರ ನಡೆದ ಹಲವು ಪ್ರಮುಖ ಘಟನಾವಳಿಗಳ ಚಿತ್ರ ಸಹಿತ ಸಂಕ್ಷಿಪ್ತ ಸುದ್ದಿಯನ್ನು ಇಲ್ಲಿ ನೀಡಲಾಗಿದೆ.

ನವದೆಹಲಿ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಜಯಗಳಿಸಿರುವುದು ಇಡೀ ದೇಶದ ಗಮನ ಸೆಳೆದಿದೆ. ದೆಹಲಿಯ ಚರ್ಚ್ ಮೇಲೆ ನಡೆದ ದಾಳಿಯ ವಿರುದ್ಧ ಕ್ರೈಸ್ತ ಸಮುದಾಯದವರು ಮುಂಬಯಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಪ್ರತಿಭಟನೆ ನಡೆಸಿದರು. ಕೊಚ್ಚಿಯಲ್ಲಿ ನಡೆಯುತ್ತಿರುವ ನ್ಯಾಶನಲ್ ಗೇಮ್ಸ್‌ನಲ್ಲಿ ಬಂಗಾರದ ಪದಕ ಗೆದ್ದ ದೀಪ್ ರಾಯ್ ಹಾಗೂ ಲಕ್ಷ್ಮಿ ರಾಣಿ ತಮ್ಮ ಚಿನ್ನದ ಪದಕ ತೋರಿಸಿದರು.

ಭಾರತದಲ್ಲಿ ಸಾರಿಗೆ ಇಲಾಖೆ ಟಿಕೆಟ್ ಶುಲ್ಕ ಏರಿಸಿದಾಗ ಪ್ರತಿಭಟನೆ ನಡೆದಂತೆ ಉಕ್ರೇನ್‌ನಲ್ಲೂ ನಡೆಯುತ್ತಿದೆ. ಇನ್ನಷ್ಟು ಸುದ್ದಿಗಳಿಗಾಗಿ ಕೆಳಗೆ ಕ್ಲಿಕ್ ಮಾಡಿ.

ಗೆಲುವಿನ ನಗೆ

ಗೆಲುವಿನ ನಗೆ

ನವದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಅದ್ಭುತ ಗೆಲುವು ದಾಖಲಿಸಿದ ಕಾರಣ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ ಕೇಜ್ರಿವಾಲ್ ತಮ್ಮ ಪತ್ನಿ ಜೊತೆ ಜನತೆಗೆ ಧನ್ಯವಾದ ಸಲ್ಲಿಸಿದರು.

ಗೆಲುವಿನ ಹುರುಪು

ಗೆಲುವಿನ ಹುರುಪು

ನವದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅದ್ಭುತ ಗೆಲುವು ಸಾಧಿಸಿದ ಕಾರಣ ಪಕ್ಷದ ಕಾರ್ಯಕರ್ತರು ಸಂಭ್ರಮಿಸಿದರು.

ಚಿನ್ನದ ಹುಡುಗ

ಚಿನ್ನದ ಹುಡುಗ

ಕೊಚ್ಚಿಯಲ್ಲಿ ನಡೆಯುತ್ತಿರುವ ನ್ಯಾಶನಲ್ ಗೇಮ್ಸ್‌ನ ರಿಕರ್ವ್ ಮೆನ್ ಇಂಡಿವಿಜುವಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ದೀಪ್ ರಾಯ್ ಗೆಲುವಿನ ಸಂಕೇತ ಪ್ರದರ್ಶಿಸಿದರು.

ಚಿನ್ನದ ಹುಡುಗಿ

ಚಿನ್ನದ ಹುಡುಗಿ

ಕೊಚ್ಚಿಯಲ್ಲಿ ನಡೆಯುತ್ತಿರುವ ನ್ಯಾಶನಲ್ ಗೇಮ್ಸ್‌ನ ರಿಕರ್ವ್ ವುಮೆನ್ ಇಂಡಿವಿಜುವಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಲಕ್ಷ್ಮಿ ರಾಣಿ ಪದಕ ತೋರಿಸಿ ಗೆಲುವಿನ ನಗೆ ಚೆಲ್ಲಿದರು.

ಮೂಲಸೌಲಭ್ಯ ಸಭೆ

ಮೂಲಸೌಲಭ್ಯ ಸಭೆ

ನವದೆಹಲಿಯಲ್ಲಿ ಆಯೋಜಿಸಿದ್ದ ಮೂಲಸೌಲಭ್ಯ ಕ್ಷೇತ್ರ ಕುರಿತ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.

ಕ್ರೈಸ್ತರ ಪ್ರತಿಭಟನೆ

ಕ್ರೈಸ್ತರ ಪ್ರತಿಭಟನೆ

ನವದೆಹಲಿಯಲ್ಲಿ ಚರ್ಚೆ ಮೇಲೆ ನಡೆದ ದಾಳಿಯನ್ನು ವಿರೋಧಿಸಿ ಮುಂಬೈನಲ್ಲಿ ಕ್ರೈಸ್ತ ಸಮುದಾಯದವರು ಪ್ರತಿಭಟನೆ ನಡೆಸಿದರು.

ರಾಕೆಟ್ ನಿರ್ವಹಣೆ

ರಾಕೆಟ್ ನಿರ್ವಹಣೆ

ಅಮೆರಿಕದ ಕೇಪ್ ಕಾರ್ನಿವಲ್ ಏರ್ ಫೋರ್ಸ್ ಸ್ಟೇಶನ್‌ನಲ್ಲಿ ಫಾಲ್ಕನ್ 9 ಸ್ಪೇಸ್ ಎಕ್ಸ್ ರಾಕೆಟ್‌ನ ನಿರ್ವಹಣೆ ಕೆಲಸ ನಡೆಸಲಾಯಿತು.

ಉಕ್ರೇನ್‌ನಲ್ಲಿ ಪ್ರತಿಭಟನೆ

ಉಕ್ರೇನ್‌ನಲ್ಲಿ ಪ್ರತಿಭಟನೆ

ಉಕ್ರೇನ್ ದೇಶದಲ್ಲಿ ಸಾರ್ವಜನಿಕ ಸಾರಿಗೆ ಶುಲ್ಕ ಏರಿಸಿರುವ ಕಾರಣ ಜನರು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.

ಆಡಳಿತಕ್ಕಾಗಿ ಯುವಕರು

ಆಡಳಿತಕ್ಕಾಗಿ ಯುವಕರು

ಮುಂಬೈನಲ್ಲಿ ಆಯೋಜಿಸಿದ್ದ ಆಡಳಿತಕ್ಕಾಗಿ ಯುವಕರು 2015 ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ, ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಮಾಜಿ ಪೊಲೀಸ್ ಆಯುಕ್ತ ಜುಲಿಯೋ ರೆಬೆರೋ ಪಾಲ್ಗೊಂಡಿದ್ದರು.

ಬದ್ಲಾಪುರ ಪ್ರಚಾರ

ಬದ್ಲಾಪುರ ಪ್ರಚಾರ

ಬಾಲಿವುಡ್ ಚಲನಚಿತ್ರ 'ಬದ್ಲಾಪುರ' ಪ್ರಚಾರಕ್ಕಾಗಿ ರಾಜಸ್ತಾನದ ಜೈಪುರಕ್ಕೆ ಬಂದಿರುವ ನಟರಾದ ವರುಣ್ ಧವನ್, ಯಾಮಿ ಗೌತಮ್ ಹಾಗೂ ನವಾಜುದ್ದೀನ್ ಸುದ್ದಿಗೋಷ್ಠಿಯಲ್ಲಿ ಕಂಡುಬಂದಿದ್ದು ಹೀಗೆ.

ಪೊರಕೆ ಗತ್ತು

ಪೊರಕೆ ಗತ್ತು

ನವದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಕಾರ್ಯಕರ್ತೆಯೋರ್ವರು ಪಕ್ಷದ ಸಂಕೇತವಾದ ಪೊರಕೆಗಳನ್ನು ಒಯ್ಯುತ್ತಿದ್ದಾಗ ಕಂಡುಬಂದ ದೃಶ್ಯ.

ಕನ್ಯಾಶ್ರೀ ಪ್ರೊಕೊಲ್ಪಾ

ಕನ್ಯಾಶ್ರೀ ಪ್ರೊಕೊಲ್ಪಾ

ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 'ಕನ್ಯಾಶ್ರೀ ಪ್ರೊಕೊಲ್ಪಾ' ಯೋಜನೆ ಅಡಿ ಸಹಾಯಧನದ ಚೆಕ್‌ ಅನ್ನು ಯುವತಿಯೋರ್ವಳಿಗೆ ನೀಡುವಾಗ ಆಕೆಗೆ ಬಳೆ ತೊಡಿಸಿದರು.

ಕಾಶ್ಮೀರದಲ್ಲಿ ಮುಷ್ಕರ

ಕಾಶ್ಮೀರದಲ್ಲಿ ಮುಷ್ಕರ

ಕಾಶ್ಮೀರದ ಶ್ರೀನಗರದಲ್ಲಿ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಮುಷ್ಕರದ ಸಂದರ್ಭ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದ ಸೈನಿಕರು.

ಪ್ರವಾಹ ಸಂತ್ರಸ್ತರು

ಪ್ರವಾಹ ಸಂತ್ರಸ್ತರು

ಇಂಡೋನೇಶಿಯಾದ ಜಕಾರ್ತಾದಲ್ಲಿ ಬಂದಿರುವ ಪ್ರವಾಹದ ಕಾರಣ ಸ್ಥಳೀಯ ನಿವಾಸಿಗಳು ನಿರಾಶ್ರಿತರಾಗಿದ್ದಾರೆ.

ಜನಾಕ್ರೋಶ

ಜನಾಕ್ರೋಶ

ಯುವಕನ ಹತ್ಯೆ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಜನರು ದಕ್ಷಿಣ ಕಾಶ್ಮೀರದ ಕುಲ್ಗಮ್ ಖಾಡ್ವಾನಿ ಖಮೋಹ್‌ನಲ್ಲಿ ಕಲ್ಲು ತೂರಾಟ ನಡೆಸಿದರು.

ನಿತೀಶ್ ಸಂತಸ

ನಿತೀಶ್ ಸಂತಸ

ಬಿಹಾರದ ಪಾಟ್ನಾದಲ್ಲಿ ಸುದ್ದಿಗೋಷ್ಠಿ ನಡೆಸಿದ ನಿತೀಶ್ ಕುಮಾರ್ ತೀವ್ರ ಸಂತಸದಲ್ಲಿರುವುದು.

ಚಾಂಡಾಲರು

ಚಾಂಡಾಲರು

ರೋಹ್ಟಕ್‌ನಲ್ಲಿ ನೇಪಾಳಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆಗೈದ ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ರಷ್ಯಾ ಪ್ರತಿಭೆ

ರಷ್ಯಾ ಪ್ರತಿಭೆ

ಹರ್ಯಾಣಾದ ಸೂರಜ್‌ಕುಂಡ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕೌಶಲ್ಯ ಮೇಳದಲ್ಲಿ ನೃತ್ಯ ಪ್ರತಿಭೆ ಪ್ರದರ್ಶಿಸಿದ ರಷ್ಯಾ ಕಲಾವಿದರು.

ಸಿಂಗಪುರ-ಭಾರತ ಭವಿಷ್ಯ

ಸಿಂಗಪುರ-ಭಾರತ ಭವಿಷ್ಯ

ಸಿಂಗಪುರದ ಅಧ್ಯಕ್ಷ ಟೋನಿ ಟ್ಯಾನ್ ಕೆಂಗ್ ಯಾಮ್ ಮತ್ತು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ನವದೆಹಲಿಯಲ್ಲಿ ಆಯೋಜಿಸಿದ್ದ "ಸಿಂಗಪುರ-ಭಾರತ : ಭವಿಷ್ಯ ಹಂಚಿಕೊಳ್ಳುವತ್ತ" ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೃಷಿ-ತೋಟಗಾರಿಕೆ ಪ್ರದರ್ಶನ

ಕೃಷಿ-ತೋಟಗಾರಿಕೆ ಪ್ರದರ್ಶನ

ಗವಾಹಟಿಯಲ್ಲಿ ಆರಂಭವಾದ ಎರಡನೇ 'ಅಸ್ಸಾಂ ಅಂತಾರಾಷ್ಟ್ರೀಯ ಕೃಷಿ-ತೋಟಗಾರಿಕೆ ಪ್ರದರ್ಶನ-2015' ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್, ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗೊಯ್ ಮತ್ತು ಅಸ್ಸಾಂ ಕೃಷಿ ಸಚಿವ ರಾಕಿಬುಲ್‌ ಹುಸೇನ್ ಸಾಂಪ್ರದಾಯಿಕ ಉಡುಪಿನಲ್ಲಿ ಕಂಡುಬಂದಿದ್ದು ಹೀಗೆ.

ಸಂಚಾರ ದಟ್ಟಣೆ

ಸಂಚಾರ ದಟ್ಟಣೆ

ನವದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಅಕ್ಷರಧಾಮ ದೇಗುಲದ ಸಮೀಪ ಕಂಡುಬಂದ ಸಂಚಾರ ದಟ್ಟಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+