ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶ, ವಿದೇಶಗಳ ಪ್ರಮುಖ ಘಟನಾವಳಿಗಳ ಚಿತ್ರ ಸುದ್ದಿ

By Kiran B Hegde
|
Google Oneindia Kannada News

ಬೆಂಗಳೂರು, ಫೆ. 16: ದೇಶ ಹಾಗೂ ವಿದೇಶಗಳಲ್ಲಿ ಫೆ. 16ರಂದು ನಡೆದ ವಿವಿಧ ಪ್ರಮುಖ ಘಟನೆಗಳ ಚಿತ್ರ ಸಹಿತ ಸಂಕ್ಷಿಪ್ತ ಸುದ್ದಿಯನ್ನು ಇಲ್ಲಿ ನೀಡಲಾಗಿದೆ.

ಭಾರತದ ಪ್ರವಾಸದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ನವದೆಹಲಿಯಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು. ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ.

ನವದೆಹಲಿಯ ನಾರ್ತ್ ಬ್ಲಾಕ್‌ನಲ್ಲಿ ಆಯೋಜಿಸಿದ್ದ ಯೋಗ ಸ್ಪರ್ಧೆಯಲ್ಲಿ ಅಂಗವಿಕಲ ಮಕ್ಕಳು ಯೋಗಾಸನ ಪ್ರದರ್ಶಿಸಿದರು. ನವದೆಹಲಿಯ ನಾರ್ತ್ ಬ್ಲಾಕ್‌ನಲ್ಲಿ ಆಯೋಜಿಸಿದ್ದ ಯೋಗ ಸ್ಪರ್ಧೆಯಲ್ಲಿ ಅಂಗವಿಕಲ ಮಕ್ಕಳು ಯೋಗಾಸನ ಪ್ರದರ್ಶಿಸಿದರು. ಇನ್ನಿತರ ಸುದ್ದಿಗಳ ಚಿತ್ರಗಳನ್ನು ನೋಡಲು ಕೆಳಗೆ ಕ್ಲಿಕ್ ಮಾಡಿ.

ಮೋದಿ ಕೈಕುಲುಕಿದ ಸಿರಿಸೇನಾ

ಮೋದಿ ಕೈಕುಲುಕಿದ ಸಿರಿಸೇನಾ

ಭಾರತದ ಪ್ರವಾಸದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈಕುಲುಕಿದರು.

ಗಾಂಧಿ ಸಮಾಧಿಗೆ ನಮನ

ಗಾಂಧಿ ಸಮಾಧಿಗೆ ನಮನ

ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಹಾಗೂ ಪತ್ನಿ ಜಯಂತಿ ಸಿರಿಸೇನಾ ಅವರು ರಾಜಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿಗೆ ನಮಿಸಿದರು.

ಗಾರ್ಡ್ ಆಫ್ ಹಾನರ್

ಗಾರ್ಡ್ ಆಫ್ ಹಾನರ್

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಭಾರತೀಯ ಸೈನಿಕರು ಗಾರ್ಡ್ ಆಫ್ ಹಾನರ್ ನೀಡಿದರು.

ಟಿಎಂಸಿ ಸಂಭ್ರಮ

ಟಿಎಂಸಿ ಸಂಭ್ರಮ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣಗಂಜ್ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ ಗೆಲುವು ಸಾಧಿಸಿದ ಕಾರಣ ಕಾರ್ಯಕರ್ತರು ಸಂಭ್ರಮಿಸಿದರು.

ಯೋಗಾಸನ ಪ್ರದರ್ಶನ

ಯೋಗಾಸನ ಪ್ರದರ್ಶನ

ನವದೆಹಲಿಯ ನಾರ್ತ್ ಬ್ಲಾಕ್‌ನಲ್ಲಿ ಆಯೋಜಿಸಿದ್ದ ಯೋಗ ಸ್ಪರ್ಧೆಯಲ್ಲಿ ಅಂಗವಿಕಲ ಮಕ್ಕಳು ಯೋಗಾಸನ ಪ್ರದರ್ಶಿಸಿದರು.

ದೆಹಲಿ ಪೊಲೀಸ್ ರೈಸಿಂಗ್ ಡೆ ಪರೇಡ್‌

ದೆಹಲಿ ಪೊಲೀಸ್ ರೈಸಿಂಗ್ ಡೆ ಪರೇಡ್‌

ನವದೆಹಲಿಯಲ್ಲಿ ಆಯೋಜಿಸಿದ್ದ ದೆಹಲಿ ಪೊಲೀಸ್ ರೈಸಿಂಗ್ ಡೆ ಪರೇಡ್‌ನಲ್ಲಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಹಾಗೂ ಗೃಹ ಸಚಿವ ರಾಜನಾಥ ಸಿಂಗ್ ಅವರು ಪ್ರಶಸ್ತಿ ಗೆದ್ದ ಪೊಲೀಸರೊಂದಿಗೆ ಫೋಟೊ ತೆಗೆಸಿಕೊಂಡರು.

ವಿವಾಹ ಸಂಭ್ರಮ

ವಿವಾಹ ಸಂಭ್ರಮ

ಅಹಮದಾಬಾದ್‌ನಲ್ಲಿ ಆಯೋಜಿಸಿದ್ದ ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹದಲ್ಲಿ 191 ಯುವತಿಯರು ವಿವಾಹ ಬಂಧನಕ್ಕೊಳಗಾದರು.

English summary
Here are the news with pictures happened in India and around the world on 16th February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X