ತ್ವರಿತ ಅಲರ್ಟ್ ಗಳಿಗಾಗಿ
For Daily Alerts
44 ದೇಶ ಸುತ್ತಿ ಬಂದಿರುವ ಪ್ರಧಾನಿ ಮೋದಿ, ಟ್ರಾವೆಲ್ ಚಾರ್ಟ್!
ನವದೆಹಲಿ, ಮೇ 11: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಯಾತ್ರೆ ಬಗ್ಗೆ ವಿಪಕ್ಷಗಳು, ಮಾಧ್ಯಮಗಳು ಎಷ್ಟೇ ಟೀಕಿಸಬಹುದು. ಆದರೆ, ನೆರೆ ಹೊರೆ ರಾಷ್ಟ್ರಗಳ ಜತೆ ಉತ್ತಮ ಬಾಂಧವ್ಯ ಹೊಂದುವುದು ಮುಖ್ಯ ಪ್ರಧಾನಿ ಸಚಿವಾಲಯ ಸಮರ್ಥನೆ ನೀಡುತ್ತದೆ.
ಮೇ 2014 ರಿಂದ ನವೆಂಬರ್ 16 ರ ತನಕ ಪ್ರಧಾನಿ ಮೋದಿ ಅವರು ಸರಿ ಸುಮಾರು 44 ದೇಶಗಳನ್ನು ಸುತ್ತಿ ಬಂದಿದ್ದಾರೆ ಎಂದು ಪ್ರಧಾನಿ ಸಚಿವಾಲಯ ಮಾಹಿತಿ ಹೊರ ಹಾಕಿದೆ.
ಲಭ್ಯ ಮಾಹಿತಿಯಂತೆ ಯುನೈಟೆಡ್ ಸ್ಟೇಟ್ಸ್ ಗೆ ನಾಲ್ಕು ಬಾರಿ ತೆರಳಿದ್ದರು. ಜಪಾನ್, ನೇಪಾಳ, ಸಿಂಗಪ, ಫ್ರಾನ್ಸ್, ಚೀನಾ, ಉಜ್ಬೇಕಿಸ್ತಾನ, ರಶ್ಯಾ ಹಾಗೂ ಅಫ್ಘಾನಿಸ್ತಾನಕ್ಕೆ ಎರಡು ಬಾರಿ ಹೋಗಿ ಬಂದಿದ್ದಾರೆ. ಅಂಟಾರ್ಟಿಕಾ ಬಿಟ್ಟು ಎಲ್ಲಾ ಪ್ರಮುಖ ದೇಶಗಳನ್ನು ಮೋದಿ ಅವರು ಸುತ್ತಿ ಬಂದಿದ್ದಾರೆ. ಪೂರ್ಣವಿವರವನ್ನು ಪ್ರಧಾನಿ ಸಚಿವಾಲಯದ ವೆಬ್ ಸೈಟ್ ನಲ್ಲಿ ಪಡೆಯಬಹುದು