ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗಳನ್ನು ಉಳಿಸಿಕೊಳ್ಳಲು ಚಾಲಕನಿಗಿದೆ ವಾರದ ಅವಕಾಶ

Google Oneindia Kannada News

ಅವರು ನಿಧಿಪತಿ. ನಿತ್ಯವೂ ಪ್ರಯಾಣಿಕರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯುವ ಚಾಲಕ ವೃತ್ತಿ ಅವರದ್ದು. ಆದರೆ ಒಂದು ದಿನ ಅವರಿಗೆ ಕಷ್ಟದ ಸಮಯವನ್ನು ವಿಧಿ ನೀಡಿತು.

ನಿಜ, ಆ ದಿನ 16 ವರ್ಷದ ಆತನ ಮಗಳಿಗೆ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿತ್ತು. ಭಯಾನಕ ರೀತಿಯಲ್ಲಿ ವಾಂತಿಯನ್ನು ಮಾಡುತ್ತಿದ್ದಳು. ರಾತ್ರಿಯಾಗುತ್ತಿದ್ದಂತೆ ಅವಳ ಆರೋಗ್ಯ ಸ್ಥಿತಿ ಇನ್ನಷ್ಟು ದುರ್ಬಲಗೊಳ್ಳುತ್ತಾ ಬಂದಿತು. ಮಗಳ ಆರೋಗ್ಯ ಸ್ಥಿತಿ ಗಂಭೀರವಾಗಿರುವುದನ್ನು ಕಂಡು ನಿಧಿಪತಿ ಮಗಳನ್ನು ಆಸ್ಪತ್ರೆಗೆ ಕರೆದೊಯ್ದರು.

"ಹಿಂದಿನ ರಾತ್ರಿಯಲ್ಲಿಯೇ ಮಗಳು ಹೊಟ್ಟೆ ನೋವು ಎಂದು ಹೇಳುತ್ತಿದ್ದಳು. ಆದರೆ ನಾವು ಅದನ್ನು ಅಷ್ಟಾಗಿ ಗಂಭೀರ ಸಮಸ್ಯೆ ಎಂದು ಪರಿಗಣಿಸಲೇ ಇಲ್ಲ. ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಆಗ ತೋರಿದ ನಿಷ್ಕಾಳಜಿ ಇದೀಗ ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿವರ್ತನೆ ಗೊಂಡಿದೆ" ಎಂದು ಅವರು ದುಃಖಿಸುತ್ತಿದ್ದಾರೆ.

ತನ್ನ ಮಗಳಾದ ನೆಶಾಳಿಗೆ ಈಗ ಕೇವಲ ಚಿಕಿತ್ಸೆಯಿಂದ ಆರೋಗ್ಯವನ್ನು ಸುಧಾರಿಸಲು ಸಾಧ್ಯವಿಲ್ಲ. ಆಕೆಗೆ ಯಕೃತ್ ಸಮಸ್ಯೆ ಇರುವುದರಿಂದ ಯಕೃತ್‍ನ ಕಸಿ ಮಾಡಿಸಬೇಕು. ನನ್ನ ಮಗಳಿಗೆ ಚಿಕಿತ್ಸೆ ಕೊಡಿಸುವಷ್ಟು ಹಣ ನನ್ನಲ್ಲಿಲ್ಲ. ಆದರೆ ನನ್ನ ಮಗಳನ್ನು ಉಳಿಸಿಕೊಳ್ಳಬೇಕು ಎನ್ನುವ ಹಂಬಲ ನನ್ನದು ಎಂದು ಹೇಳಿಕೊಳ್ಳುತ್ತಿದ್ದಾರೆ.

ನಿಧಿಪತಿ ತನ್ನ ಮಗಳಿಗೆ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದರೆ ಇವರ ಮಾಸಿಕ ವರಮಾನ ಕೇವಲ 4,000 ರೂಪಾಯಿ. ಇವರ ವರಮಾನದಿಂದ ಆಂಬುಲೆನ್ಸ್ ವೆಚ್ಚವನ್ನು ಭರಿಸಲು ಸಾಧ್ಯವಾಗಿರಲಿಲ್ಲ. ಮಗಳ ಚಿಕಿತ್ಸೆಗಾಗಿ ಇತರ ಕುಟುಂಬದವರಿಂದ ಹಣ ಸಹಾಯ ಪಡೆದು ಆಂಬುಲೆನ್ಸ್ ಗೆ ಹಣ ನೀಡಿದ್ದಾರೆ.

ಇದೀಗ ತನ್ನ ಮಗಳ ಯಕೃತ್ ಚಿಕಿತ್ಸೆಗೆ ಹಣವನ್ನು ಒಂದು ವಾರದಲ್ಲಿ ಹೊಂದಿಸಬೇಕು. ಒಂದು ವಾರದಲ್ಲಿ ಚಿಕಿತ್ಸೆ ಕೊಡಿಸಿದರೆ ಮಗಳನ್ನು ನಾನು ರಕ್ಷಿಸಿ ಕೊಳ್ಳಬಹುದು. ಮಗಳ ಈ ಚಿಕಿತ್ಸೆಗೆ 30 ಲಕ್ಷ ರೂಪಾಯಿ ಹೊಂದಿಸಬೇಕಿದೆ. ನಿಧಿಪತಿ ಈವರೆಗೆ ಸಾಕಷ್ಟು ಕಷ್ಟಪಟ್ಟಿದ್ದಾರೆ. ಮಗಳನ್ನು ರಕ್ಷಿಸಿಕೊಳ್ಳಲು ಹಣ ಇಲ್ಲದಿರುವುದೇ ಅಡಚಣೆಯಾಗಿದೆ.

"ನೆಶಾ ಇವರ ಪ್ರೀತಿಯ ಏಕೈಕ ಪುತ್ರಿ. ಬುದ್ಧಿವಂತೆಯಾದ ಇವಳು ವಿದ್ಯಾರ್ಥಿಗಳಿಗೆ ಮನೆಪಾಠ ಹೇಳಿಕೊಡುವುದರ ಮೂಲಕ ತನ್ನ ಕುಟುಂಬಕ್ಕೆ ಹಣ ಸಹಾಯ ಮಾಡುತ್ತಿದ್ದಳು. ನನ್ನ ಜೀವವಾದ ನನ್ನ ಮಗಳನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ನನ್ನ ದುಃಖವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಕಣ್ಣೀರು ಇಡುತ್ತಿದ್ದಾರೆ.

ನಿಧಿಪತಿಯ ಮಗಳ ಆರೋಗ್ಯ ರಕ್ಷಣೆಗೆ ನೀವು ಕೈಲಾದ ಸಹಾಯವನ್ನು ಮಾಡಬಹುದು. ನೀವು ಹಣ ಸಹಾಯ ಮಾಡಲು ಮುಂದಾಗುವುದಾದರೆ ನಿಧಿ ಸಂಗ್ರಹಣೆಗೆ ಸಹಾಯ ಮಾಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X