ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ: ಸರ್ಕಾರದ ಹೊಸ ಸುರಕ್ಷತಾ ನಿಯಮಗಳು

|
Google Oneindia Kannada News

ನವದೆಹಲಿ, ಫೆಬ್ರವರಿ 16: ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರಿ ಮಾಡುವ ಮಕ್ಕಳಿಗೆ ಹೆಲ್ಮೆಟ್ ಬಳಸುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಮಕ್ಕಳ ಗಾತ್ರಕ್ಕೆ ಅನುಗುಣವಾಗಿ ಹೆಲ್ಮೆಟ್ ತಯಾರಿಸಲು ಕೇಂದ್ರ ಹೆಲ್ಮೆಟ್ ತಯಾರಕರಿಗೆ ಸೂಚಿಸಿದೆ. ಅಲ್ಲದೆ, ಹೊಂದಾಣಿಕೆ ಮಾಡಬಹುದಾದ ಸುರಕ್ಷತಾ ಹಾರ್ನೆಸ್ ಅನ್ನು ಮಕ್ಕಳು ತಮ್ಮ ಸುರಕ್ಷತೆಗಾಗಿ ಧರಿಸಬೇಕು.

ಇನ್ಮುಂದೆ ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ: ನಿಯಮ ಮೀರಿದರೆ ದಂಡ ಫಿಕ್ಸ್‌ಇನ್ಮುಂದೆ ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ: ನಿಯಮ ಮೀರಿದರೆ ದಂಡ ಫಿಕ್ಸ್‌

ನಿಯಮ ಉಲ್ಲಂಘನೆ ಮಾಡಿದರೆ 1 ಸಾವಿರ ರೂ ಗಳ ದಂಡ ಮತ್ತು ಚಾಲಕನ ಪರವಾನಗಿಯನ್ನು ಮೂರು ತಿಂಗಳ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ನಾಲ್ಕು ವರ್ಷದವರೆಗಿನ ಮಕ್ಕಳನ್ನು ಒಳಗೊಳ್ಳುತ್ತದೆ.

Helmet For Child On Bikes, Speed Of Up To 40 Kmph

ಮಗುವಿನೊಂದಿಗೆ ಯಾವುದೇ ದ್ವಿಚಕ್ರ ವಾಹನವು ಗಂಟೆಗೆ ಗರಿಷ್ಠ 40 ಕಿ.ಮೀ ವೇಗ ಮಿತಿಯಲ್ಲಿ ಪ್ರಯಾಣಿಸಬೇಕು. ಮಕ್ಕಳ ಗಾತ್ರದ ಪ್ರಕಾರ, ಮಕ್ಕಳ ಶಿರಸ್ತ್ರಾಣಗಳನ್ನು ತಯಾರಿಸಲು ಸರ್ಕಾರ ಭಾರತೀಯ ಹೆಲ್ಮೆಟ್ ತಯಾರಕರನ್ನು ಕೇಳಿಕೊಂಡಿದೆ. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಬಗ್ಗೆ ಹೇಳುವುದಾದರೆ, ಅವರು ಸರ್ಕಾರ ನಿರ್ದಿಷ್ಟಪಡಿಸಿದ ಮಾನದಂಡಗಳನ್ನು ಅನುಸರಿಸಿ ಕ್ರ್ಯಾಶ್ ಹೆಲ್ಮೆಟ್ ಅಥವಾ ಬೈಸಿಕಲ್ ಹೆಲ್ಮೆಟ್ ಧರಿಸಬೇಕಾಗುತ್ತದೆ.

ಮಕ್ಕಳ ಹೆಲ್ಮೆಟ್‌ಗಳಿಗೆ ಬಿಐಎಸ್ ಪ್ರತ್ಯೇಕ ಮಾನದಂಡವನ್ನು ನೀಡಲಿದೆ. ಅಲ್ಲಿಯವರೆಗೆ, ಚಿಕ್ಕ ಹೆಲ್ಮೆಟ್‌ಗಳು ಅಥವಾ ಬೈಸಿಕಲ್ ಹೆಲ್ಮೆಟ್‌ಗಳನ್ನು ಬಳಸಬಹುದು. ರಸ್ತೆ ಸುರಕ್ಷತೆಗಾಗಿ ಕೇಂದ್ರ ಮೋಟಾರು ವಾಹನ ನಿಯಮಗಳಿಗೆ (CMVR), 1989 ತಿದ್ದುಪಡಿ ತರಲು 25 ಅಕ್ಟೋಬರ್ 2021 ರಂದು ಸರ್ಕಾರವು ಮೊದಲ ಬಾರಿಗೆ ಈ ಕರಡು ಅಧಿಸೂಚನೆಯನ್ನು ತಂದಿದೆ.

ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಮಕ್ಕಳ ಮೋಟಾರ್ ಸೈಕಲ್‌ಗಳಲ್ಲಿ (Bike) ಪ್ರಯಾಣಿಸುವಾಗ ಈ ನಿಯಮಗಳು ಅನ್ವಯಿಸುತ್ತವೆ. 9 ತಿಂಗಳಿಂದ 4 ವರ್ಷದ ಮಕ್ಕಳು ಬೈಕ್‌ನಲ್ಲಿ ಪ್ರಯಾಣಿಸುವಾಗ Safety Harness ಧರಿಸುವುದು ಅವಶ್ಯಕ.

Safety Harness ಹಗುರವಾಗಿರಬೇಕು ಮತ್ತು ಮೆತ್ತಗಿರಬೇಕು. ಇದರಲ್ಲಿ ಮಗು ವಿಶ್ರಾಂತಿ ಪಡೆಯಬಹುದು. ಅಲ್ಲದೆ, ಅದರ ಸಾಮರ್ಥ್ಯವು 30 ಕೆಜಿ ವರೆಗೆ ಭಾರವನ್ನು ಹೊರುವಂತಿರಬೇಕು.

ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಕುಳಿತುಕೊಳ್ಳುವ ಮಕ್ಕಳಿಗೆ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರವು ಈ ಹಿಂದೆ ಪ್ರಸ್ತಾಪಿಸಿತ್ತು. ಈ ವಿಷಯದ ಬಗ್ಗೆ ನಾಗರಿಕರ ಅಭಿಪ್ರಾಯವನ್ನು ಕೇಳಲು ಅಕ್ಟೋಬರ್ 2021ರಲ್ಲಿ ಕರಡು ಅಧಿಸೂಚನೆಯನ್ನು ಹೊರಡಿಸಿತ್ತು.

ಜಾಕೆಟ್ ಹೆವಿ ನೈಲಾನ್ ಅಥವಾ ಮಲ್ಟಿಫಿಲೆಮೆಂಟ್ ನೈಲಾನ್ ವಸ್ತುಗಳನ್ನು ಬಳಸಿ ನಿರ್ಮಿಸಬೇಕು. 30 ಕೆಜಿ ತೂಕವನ್ನು ಹೊರುವ ಸಾಮಥ್ರ್ಯವನ್ನು ಹೊಂದಿರಬೇಕು. ನಾಲ್ಕು ವರ್ಷದೊಳಗಿನ ಮಕ್ಕಳು ಕ್ರ್ಯಾಶ್ ಹೆಲ್ಮೆಟ್ ಅಥವಾ ಬೈಸಿಕಲ್ ಹೆಲ್ಮೆಟ್ ಅನ್ನು ಧರಿಸಬೇಕು. ಸರ್ಕಾರವು ನಿರ್ದಿಷ್ಟಪಡಿಸಿದ ಮಾನದಂಡಗಳನ್ನು ಅನುಸರಿಸಬೇಕು ಎಂದು ಸೂಚಿಸಿದೆ.

ಮಕ್ಕಳಿಗೆ ಸಿದ್ಧಪಡಿಸಲಾಗುವ ಹೆಲ್ಮೆಟ್‌ಗಳು ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸಬೇಕು. ಮಕ್ಕಳಿಗಾಗಿ ಹೆಲ್ಮೆಟ್‌ಗಳನ್ನು ತಯಾರಿಸಲು ಪ್ರಾರಂಭಿಸಲು ಕೇಂದ್ರವು ಹೆಲ್ಮೆಟ್ ತಯಾರಕರಿಗೆ ಈಗಾಗಲೇ ಸೂಚನೆ ನೀಡಿದೆ. ಹಾಗೇ, ನಿಯಮದ ಪ್ರಕಾರ ದ್ವಿಚಕ್ರ ವಾಹನ ಸವಾರರು ಮಕ್ಕಳೊಂದಿಗೆ ಪ್ರಯಾಣಿಸುವಾಗ ವಾಹನದ ವೇಗ ಗಂಟೆಗೆ 40 ಕಿಮೀ ಮೀರದಂತೆ ನೋಡಿಕೊಳ್ಳುವುದು ಕಡ್ಡಾಯವಾಗಿದೆ.

English summary
The Ministry of Road Transport and Highways has notified new safety rules for carrying children below four years of age on two-wheelers today. The new traffic rules make it mandatory for riders to use helmets and harness belts for children as well as limit its speed to just 40 kmph.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X