ತಮಿಳುನಾಡಿನಲ್ಲಿ ಮಹಾಮಳೆ: ಶಾಲಾ-ಕಾಲೇಜು ಬಂದ್; ಹಲವೆಡೆ ರೆಡ್ ಅಲರ್ಟ್
ಭಾರತದ ದಕ್ಷಿಣ ಭಾಗಗಳಲ್ಲಿ ಮತ್ತೆ ಮಳೆಯ ಅರ್ಭಟ ಜೋರಾಗಿದೆ. ಇದರಿಂದಾಗಿ ಜನಜೀವನ ನರಕಕ್ಕೆ ತಳ್ಳಿದಂತಾಗಿದೆ. ಮಳೆಗಾಲದಲ್ಲಿನ ಮುಂಗಾರಿನ ಪರಿಣಾಮದಿಂದ ಜನ ಇನ್ನೂ ಚೇತರಿಸಿಕೊಳ್ಳಲಾಗುತ್ತಿಲ್ಲ. ಇನ್ನೇನು ಮಳೆಗಾಲ ಮುಗಿತು ಅನ್ನೋ ಹೊತ್ತಿಗೆ ವರುಣ ಮತ್ತೆ ಚುರುಕುಗೊಂಡು ಅಪಾರ ಹಾನಿಯನ್ನುಂಟು ಮಾಡಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತಗೊಂಡು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇಂದೂ ಕೂಡ ಅಧಿಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ ಹಲವೆಡೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇಂದು ತೀವ್ರ ಮಳೆ ಮುನ್ಸೂಚನೆ ಇರುವುದರಿಂದ ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳು ತಮಿಳುನಾಡು ಮತ್ತು ಪುದುಚೇರಿಯ ಹಲವಾರು ಜಿಲ್ಲೆಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿವೆ. ಕೆಲ ದಿನಗಳಿಂದ ತಮಿಳುನಾಡಿನಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು ಜನಜೀವನ ಅಸ್ಥವ್ಯಸ್ಥಗೊಂಡಿದೆ.

ಶಾಲಾ-ಕಾಲೇಜು ಬಂದ್
ಭಾರತೀಯ ಮಾಪನ ಇಲಾಖೆ (ಐಎಂಡಿ) ಶುಕ್ರವಾರದಂದು ತಮಿಳುನಾಡಿನ ಚೆನ್ನೈ, ತಿರುವಳ್ಳೂರು, ಕಲ್ಲಕುರಿಚಿ, ಸೇಲಂ, ವೆಲ್ಲೂರು, ತಿರುಪತ್ತೂರು, ರಾಣಿಪೇಟ್, ತಿರುವಣ್ಣಾಮಲೈ ಜಿಲ್ಲೆಗಳು ಮತ್ತು ಪುದುಚೇರಿಗೆ ರೆಡ್ ಅಲರ್ಟ್ ಘೋಷಿಸಿದೆ. ಮಾತ್ರವಲ್ಲದೆ ಮಳೆಯಿಂದಾಗಿ ತಮಿಳುನಾಡಿನ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲ್ಪಟ್ಟು, ರಾಣಿಪೇಟ್, ವೆಲ್ಲೂರು, ಕಡಲೂರು, ಮೈಲಾಡುತುರೈ, ತಿರುವರೂರು, ನಾಗಪಟ್ಟಿಣಂ, ತಂಜಾವೂರು, ವಿಲ್ಲುಪುರಂ ಮತ್ತು ಅರಿಯಲೂರು ಜಿಲ್ಲೆಗಳಲ್ಲಿ ಶುಕ್ರವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಗುಡುಗು ಮತ್ತು ಮಿಂಚು ಸಹಿತ ತೀವ್ರ ಮಳೆ
ರಾಣಿಪ್ಪೆಟ್ಟೈ ತಿರುವಣ್ಣಾಮಲೈ, ತಿರುವಳ್ಳೂರು, ಚೆನ್ನೈ, ಕಾಂಚೀಪುರಂ, ಚೆಂಗಲ್‌ಪಟ್ಟು, ವಿಲ್ಲುಪುರಂ, ಕಲ್ಲಕ್ಕುರಿಚಿ, ಕಡಲೂರು, ಅರಿಯಲೂರ್, ಪೆರಂಬಲೂರ್, ತಂಜಾವೂರು, ಮೈಲಾಡು, ತಿರುವರುರೈ, ತಿರುವರುರೈ, ರಾಣಿಪ್ಪೆಟ್ಟೈ ತಿರುವಣ್ಣಾಮಲೈನಲ್ಲಿ ಸ್ಥಳಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ತೀವ್ರ ಮಳೆಯಾಗಲಿದೆ ಎಂದು ಭಾರತೀಯ ಮಾಪನ ಇಲಾಖೆ (IMD) ಮುನ್ಸೂಚನೆ ನೀಡಿದೆ. ತಮಿಳುನಾಡಿನ ಪುದುಕ್ಕೊಟ್ಟೈ, ರಾಮನಾಥಪುರಂ ಮತ್ತು ಶಿವಗಂಗೈ ಜಿಲ್ಲೆಗಳಲ್ಲೂ ಮಳೆಯ ಮುನ್ಸೂಚನೆ ನೀಡಲಾಗಿದೆ. ಅಲ್ಲದೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಮಿಳುನಾಡಿನ ತಿರುವಳ್ಳೂರು ಜಿಲ್ಲೆಗೂ ರೆಡ್ ಅಲರ್ಟ್ ಘೋಷಿಸಿದೆ.

ಬೆಳೆ ಹಾನಿಯಾಗುವ ಸಾಧ್ಯತೆ
ರೆಡ್ ಅಲರ್ಟ್‌ನ ಸಂಭವನೀಯ ಪರಿಣಾಮವೆಂದರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ. ಬೆಳೆಗಳಿಗೆ ತೀವ್ರ ಹಾನಿಯಾಗುವ ಸಾಧ್ಯತೆ ಇದೆ. ಮಾತ್ರವಲ್ಲದೆ ಮರಗಳು ಧರೆಗುರುಳುವ ಸಾಧ್ಯತೆ ಕೂಡ ಇದೆ. ತಮಿಳುನಾಡಿನ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಂತೆ ಪಾಂಡಿಚೇರಿಯಲ್ಲಿಯೂ ಕಳೆದ ದಿನ ಅಧಿಕ ಮಳೆಯಾಗಿದೆ. ಇದರ ಬೆನ್ನಲ್ಲೆ ಪದುಚೇರಿಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ಮಳೆ ರಜೆ ನೀಡಲಾಗಿದೆ.

ಕರ್ನಾಟಕದ ಹಲವೆಡೆ ಮಳೆ ಸೂಚನೆ
ಮುಂಗಾರು ಹಿಮ್ಮುಖದಿಂದ ಕೊಂಚ ಬಿಡುವು ಪಡೆದುಕೊಂಡಿದ್ದ ಮಳೆ ಮತ್ತೆ ಬೆಂಗಳೂರಿನಲ್ಲಿ ಪ್ರಾರಂಭವಾಗುವ ಲಕ್ಷಣಗಳು ಕಾಣೀಸುತ್ತಿವೆ. ಇಂದು ಮುಂಜಾನೆಯಿಂದ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಹಲವೆಡೆ ಜಿಟಿ ಜಿಟಿ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಕರ್ನಾಟಕದ ಹಲವೆಡೆ ಮಳೆಯಾಗುವ ಮುನ್ಸೂಚನೆ ಇದೆ.












Click it and Unblock the Notifications