
ರಾಯಲಸೀಮಾ, ಕರಾವಳಿ ಆಂಧ್ರಪ್ರದೇಶದಲ್ಲಿ ಭಾರೀ ಮಳೆ
ನೆಲ್ಲೂರು/ವಿಜಯವಾಡ, ನವೆಂಬರ್ 2: ಚಳಿಗಾಲ ಆರಂಭವಾಗುವ ದಿನಗಳಲ್ಲಿ ದೇಶದ ಹಲವೆಡೆ ಆಗಾಗ ಸುರಿಯುತ್ತಿರುವ ಧಾರಾಕಾರ ಮಳೆ ತಂಪಾದ ವಾತಾವರಣವನ್ನು ಹೆಚ್ಚಿಸಿದೆ. ಬಂಗಾಳ ಕೊಲ್ಲಿಯಲ್ಲಿ ಈಶಾನ್ಯ ಮಾನ್ಸೂನ್ ಮತ್ತು ನೈರುತ್ಯ ಮಾರುತಗಳಿಂದ ಚಂಡಮಾರುತದ ಪ್ರಭಾವದಿಂದ ಕಳೆದ 24 ಗಂಟೆಗಳಲ್ಲಿ ತಿರುಪತಿ, ನೆಲ್ಲೂರು, ಪ್ರಕಾಶಂ ಮತ್ತು ಅನ್ನಮಯ್ಯ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಇದರಿಂದಾಗಿ ತಗ್ಗು ಪ್ರದೇಶದಲ್ಲಿನ ಮನೆಗಳು, ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ರಾಜ್ಯ ಯೋಜನಾ ಇಲಾಖೆಯ ಅಂಕಿಅಂಶಗಳ ಪ್ರಕಾರ, ಮಂಗಳವಾರ ರಾತ್ರಿ 8 ಗಂಟೆಗೆ ಸತ್ಯಸಾಯಿ ಜಿಲ್ಲೆಯ ಪೆನುಕೊಂಡದಲ್ಲಿ ಅತಿ ಹೆಚ್ಚು ಅಂದರೆ 8.7 ಸೆಂ.ಮೀ ಮಳೆಯಾಗಿದೆ. ಅನಂತಪುರ ಜಿಲ್ಲೆಯ ಕುದೈರ್‌ನಲ್ಲಿ 8.4 ಸೆಂ.ಮೀ ಮತ್ತು ತಿರುಪತಿ ಜಿಲ್ಲೆಯ ಚಿತ್ತಮೂರಿನಲ್ಲಿ 8 ಸೆಂ.ಮೀ ಮಳೆಯಾಗಿದೆ.
IMD ಯ ದೈನಂದಿನ ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ನೆಲ್ಲೂರಿನ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗಿದೆ. ನೆಲ್ಲೂರು ನಗರದಲ್ಲಿ ಅತಿ ಹೆಚ್ಚು ಅಂದರೆ 8 ಸೆಂ.ಮೀ ಮಳೆಯಾಗಿದ್ದು, ಪ್ರಕಾಶಂ ಜಿಲ್ಲೆಯ ಓಂಗೋಲ್ ಮತ್ತು ಚಿತ್ತೂರು ಜಿಲ್ಲೆಯ ಸತ್ಯವೇಡುನಲ್ಲಿ 6 ಸೆಂ.ಮೀ ಮಳೆಯಾಗಿದೆ.
ರಾಯಲಸೀಮಾ ಮತ್ತು ಕರಾವಳಿ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ 5 ಸೆಂ.ಮೀ ವರೆಗಿನ ಮಳೆ ದಾಖಲಾಗಿದೆ. ಏಕೆಂದರೆ ಕಡಿಮೆ ಟ್ರೋಪೋಸ್ಪಿಯರ್ ಈಸ್ಟರ್ಲಿ/ನಾರ್ತ್ ಈಸ್ಟರ್ಲಿ ಮಾರುತಗಳು ರಾಜ್ಯದ ಮೇಲೆ ಅಪ್ಪಳಿಸಲಿವೆ.
ಕಳೆದ 24 ಗಂಟೆಗಳಲ್ಲಿ, ಆಂಧ್ರಪ್ರದೇಶದ ಕರಾವಳಿಯ ಎರಡು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ (-1.6 °C ನಿಂದ -3.0 °C) ದಾಖಲಾಗಿದೆ. ರಾಯಲಸೀಮಾದಲ್ಲಿ ಕೆಲವು ಸ್ಥಳಗಳಲ್ಲಿ (1.6 °C ರಿಂದ 3.0 °C) ಮತ್ತು ಕರಾವಳಿ ಆಂಧ್ರ ಪ್ರದೇಶದ ಅನೇಕ ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗಿದೆ.

ನೆಲ್ಲೂರು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಮಳೆ ಸುರಿದಿದೆ. ಆತ್ಮಕೂರು ಬಸ್ ನಿಲ್ದಾಣ, ರಾಮಲಿಂಗಪುರ ಮತ್ತು ಮಾಗುಂಟಾ ಲೇಔಟ್‌ನ ರೈಲ್ವೆ ಕೆಳಸೇತುವೆಗಳು ಜಲಾವೃತಗೊಂಡಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಹವಾಮಾನ ಇಲಾಖೆಯಿಂದ ಎಚ್ಚರಿಕೆ ಬಂದ ನಂತರ ಕರಾವಳಿಯಲ್ಲಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆವಿಎನ್ ಚಕ್ರಧರ ಬಾಬು ತಿಳಿಸಿದ್ದಾರೆ. ತಗ್ಗು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿ ಅಗತ್ಯ ಬಿದ್ದರೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ. ಹವಾಮಾನ ಅನುಕೂಲಕರವಾಗಿಲ್ಲದ ಕಾರಣ ಸಮುದ್ರಕ್ಕೆ ಮೀನುಗಾರರು ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ.
ನೆಲ್ಲೂರು ಮಹಾನಗರ ಪಾಲಿಕೆ ಆಯುಕ್ತೆ ಡಿ ಹರಿತಾ ಮಾತನಾಡಿ, ರಸ್ತೆಗಳು, ರೈಲ್ವೆ ಕೆಳ ಸೇತುವೆಗಳು ಮತ್ತು ಇತರ ತಗ್ಗು ಪ್ರದೇಶಗಳಿಂದ ಹೈಪವರ್ ಮೋಟಾರ್‌ಗಳ ಮೂಲಕ ನೀರನ್ನು ಪಂಪ್ ಮಾಡಲು ಅಧಿಕಾರಿಗಳು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಮಳೆ ಬೀಳುವ ಸಂದರ್ಭದಲ್ಲಿ ಜನರು ಮರಗಳ ಕೆಳಗೆ ಆಶ್ರಯ ಪಡೆಯದಂತೆ ಅವರು ಒತ್ತಾಯಿಸಿದರು. ಇಂದು ಎಪಿಯ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. IMD ಪ್ರಕಾರ, ಬುಧವಾರ ಮತ್ತು ಗುರುವಾರ ರಾಯಲಸೀಮಾ ಮತ್ತು ಕರಾವಳಿ ಆಂಧ್ರಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಿಂಚಿನ ಮಳೆಯಾಗುವ ಸಾಧ್ಯತೆಯಿದೆ.