ಉತ್ತರ ಭಾರತದಲ್ಲಿ ಭಾರೀ ಮಳೆ: 17 ರೈಲು ಸಂಚಾರ ಬಂದ್- 12 ರೈಲುಗಳ ಮಾರ್ಗ ಬದಲಾವಣೆ
ಉತ್ತರ ಭಾರತದಲ್ಲಿ ಭಾರೀ ಮಳೆಯಿಂದಾಗಿ 17 ರೈಲುಗಳನ್ನು ರದ್ದುಗೊಳಿಸಲಾಗಿದ್ದು ಜೊತೆಗೆ 12 ಮಾರ್ಗಗಳನ್ನು ಬದಲಾಯಿಸಲಾಗಿದೆ. ಈ ಬಗ್ಗೆ ವಿವರಗಳನ್ನು ಇಲ್ಲಿ ಪಡೆಯಿರಿ.
ವಾರಾಂತ್ಯದಲ್ಲಿ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಎಡೆಬಿಡದೆ ಮಳೆ ಸುರಿದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ನಿರಂತರ ಮಳೆಯಿಂದಾಗಿ ದೆಹಲಿ-ಎನ್‌ಸಿಆರ್ ಸೇರಿದಂತೆ ಹಲವಾರು ನಗರಗಳಲ್ಲಿ ಮಳೆ ನೀರು ತುಂಬಿ ಟ್ರಾಫಿಕ್ ಜಾಮ್ ಉಂಟಾಗಿದೆ. ಮಾತ್ರವಲ್ಲದೆ ಮುಂಗಾರು ಮಳೆಯಿಂದಾಗಿ ರೈಲ್ವೇಗಳಿಗೂ ಹೊಡೆತ ಬಿದ್ದಿದೆ.

ಉತ್ತರ ರೈಲ್ವೆ ಸುಮಾರು 17 ರೈಲುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿತು ಮತ್ತು ಸುಮಾರು 12 ಇತರ ರೈಲುಗಳ ಮಾರ್ಗವನ್ನು ಬದಲಾಯಿಸಿದೆ. ಹಳಿಗಳು ಜಲಾವೃತವಾಗಿರುವ ಕಾರಣ ನಾಲ್ಕು ಸ್ಥಳಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರ ರೈಲ್ವೆ ವಕ್ತಾರರು ತಿಳಿಸಿದ್ದಾರೆ. ಇವುಗಳಲ್ಲಿ ನೊಗನ್ವಾನ್ (ಅಂಬಾಲಾ)-ನ್ಯೂ ಮೊರಿಂಡಾ ನಡುವಿನ ಮಾರ್ಗಗಳು, ನಂಗಲ್ ಅಣೆಕಟ್ಟು ಮತ್ತು ಆನಂದಪುರ ಸಾಹಿಬ್ ನಡುವೆ ಮತ್ತು ಕಿರಾತ್‌ಪುರ್ ಸಾಹಿಬ್ ಮತ್ತು ಭಾರತ್‌ಗಢ್ ನಡುವಿನ ಮಾರ್ಗಗಳು ಸೇರಿವೆ.
ದೆಹಲಿಯಲ್ಲಿ 40 ವರ್ಷಗಳಲ್ಲಿ ಅತಿ ಹೆಚ್ಚು ಏಕದಿನ ಮಳೆಯಾಗಿದೆ. ಇದರಿಂದಾಗಿ ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳು ಮುಳುಗಿ ಹೋಗಿವೆ. ಕೆಲವೆಡೆ ಅಂಗಡಿ, ಮನೆಗಳಿಗೂ ನೀರು ನುಗ್ಗಿದೆ.

ಎಡಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ರಾಷ್ಟ್ರ ರಾಜಧಾನಿ ಪ್ರದೇಶದಿಂದ ಸಂಚರಿಸುವ ರೈಲುಗಳ ಮೇಲೆ ನಿಗಾ ಇಟ್ಟಿದ್ದು, ಹಳಿಗಳಿಂದ ನೀರು ಹೊರ ಹಾಕಲು ಪಂಪ್‌ಗಳನ್ನು ಓಡಿಸಲಾಗುತ್ತಿದೆ.
ಇಂದು ರದ್ದಾದ ರೈಲುಗಳ ಪಟ್ಟಿ ಇಲ್ಲಿದೆ:-
T.NO 14629(CDG-FZR)JCO-10-723
T.NO 12411(CDG-ASR)JCO-10-723
T.NO 12242(ASR-CDG)JCO-10-723
T.NO 14614(FZR-CDG)JCO-10-723
T.NO 12058(UHL-NDLS)JCO-10-723
T.NO 14506(NLDM-ASR)JCO-10-723
T.NO 14505(ASR-NLSM)JCO-10-723
Due to heavy rain, following trains are cancelled, diverted and short terminated or short originated. pic.twitter.com/hlRGbIjd9L
— DRM Ferozpur NR (@drm_fzr) July 9, 2023
"ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೆಹಲಿ ಪ್ರದೇಶದಿಂದ ರೈಲುಗಳನ್ನು ಸುರಕ್ಷಿತವಾಗಿ ಓಡಿಸಲು ಕಟ್ಟುನಿಟ್ಟಾದ ನಿಗಾ ಇರಿಸಲಾಗಿದೆ. ದೆಹಲಿ-ಸಬ್ಜಿ ಮಂಡಿ ಪ್ರದೇಶ ಮತ್ತು ನಿಲ್ದಾಣದ ತರಬೇತಿ ಪ್ರದೇಶದಲ್ಲಿ ಎಂಟು ಪಂಪ್ಗಳನ್ನು ಹಳಿಗಳಿಂದ ನೀರನ್ನು ಪಂಪ್ ಮಾಡಲು ಚಾಲನೆ ಮಾಡಲಾಗುತ್ತಿದೆ. ದೆಹಲಿ ಪ್ರದೇಶ ಈಗ ಸಾಮಾನ್ಯವಾಗಿದೆ" ಎಂದು ಸಿಪಿಆರ್ಒ ಉತ್ತರ ರೈಲ್ವೆ ದೀಪಕ್ ಕುಮಾರ್ ಹೇಳಿದ್ದಾರೆ.
ರದ್ದಾದ ರೈಲುಗಳಲ್ಲಿ ಫಿರೋಜ್‌ಪುರ ಕ್ಯಾಂಟ್ ಎಕ್ಸ್‌ಪ್ರೆಸ್, ಅಮೃತಸರ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಚಂಡೀಗಢ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಮತ್ತು ಚಂಡೀಗಢದಿಂದ ಅಮೃತಸರ ಜಂಕ್ಷನ್ ಎಕ್ಸ್‌ಪ್ರೆಸ್ ಸೇರಿವೆ. ಇನ್ನೂ ಮುಂಬೈ ಸೆಂಟ್ರಲ್‌ಗೆ ಅಮೃತಸರ ಎಕ್ಸ್‌ಪ್ರೆಸ್, ದೌಲತ್‌ಪುರ್ ಚೌಕ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಾಯಿಸಲಾಗಿದೆ.

ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಶಿಮ್ಲಾ-ಕಲ್ಕಾ ಮಾರ್ಗದ ರೈಲು ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನೂ ಕೆಲ ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಕಳೆದ 24 ಗಂಟೆಗಳಲ್ಲಿ ದೆಹಲಿಯು ಭಾನುವಾರ ಬೆಳಿಗ್ಗೆ 8:30ಕ್ಕೆ ಕೊನೆಗೊಂಡಂತೆ 153 ಮಿಮೀ ಮಳೆಯನ್ನು ದಾಖಲಿಸಿದೆ. 1982 ರಿಂದ ಭಾನುವಾರ ಅತೀ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಯಮುನಾ ನದಿಯ ನೀರಿನ ಮಟ್ಟ ಏರಿಕೆಯಾಗುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಲ್ಲಾ ಸರ್ಕಾರಿ ಅಧಿಕಾರಿಗಳ ಭಾನುವಾರದ ರಜೆಯನ್ನು ರದ್ದುಗೊಳಿಸಿದ್ದಾರೆ ಮತ್ತು ಮೈದಾನದಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ.












Click it and Unblock the Notifications