ಏಪ್ರಿಲ್‌ 15ರವರೆಗೂ ಭಾರೀ ಮಳೆ ಮುನ್ಸೂಚನೆ, ಎಲ್ಲೆಲ್ಲಿ?-ಮಾಹಿತಿ ಇಲ್ಲಿದೆ

India weather: ಭಾರತದ ಉತ್ತರ ಭಾಗದಲ್ಲಿ ಹೊರತುಪಡಿಸಿದ್ರೆ, ಬಹುತೇಕ ರಾಜ್ಯಗಳಲ್ಲಿ ತಾಪಮಾನದ ಪ್ರಮಾಣ ಏರಿಕೆ ಆಗುತ್ತಲೇ ಇದೆ. ಇನ್ನು ಇಂದು (ಏಪ್ರಿಲ್‌ 09) ಕೆಲವೆಡೆ ತಾಪಮಾನ ಪ್ರಮಾಣದಲ್ಲಿ ಇಳಿಕೆಯಾಗಲಿದ್ದು, ಇನ್ನು ಹಲವೆಡೆ ಇಂದು ಹಾಗೂ ಮುಂದಿನ 6 ದಿನಗಳ ಕಾಳ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇನ್ನು ಯುಗಾದಿ ನಂತರ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹಲವು ಸ್ವಾಮೀಜಿಗಳು ಸೇರಿದಂತೆ ಹವಾಮಾನ ಇಲಾಖೆಯು ಭವಿಷ್ಯವನ್ನು ನುಡಿದಿತ್ತು. ಆದರೆ ಇದೀಗ ಇಂದು ಯುಗಾದಿ ಹಬ್ಬ ಆರಂಭವಾಗಿದ್ದು, ನಾಳೆಯಿಂದ ಕರ್ನಾಟಕದ ಬಹುತೇಕ ಬಾಗಗಳಲ್ಲಿ ಭಾರೀ ಮಳೆ ಸುರಿಯಲಿದ್ಯಾ ಎನ್ನುವುದು ಜನರ ಪ್ರಶ್ನೆಯಾಗಿದೆ. ಮತ್ತೊಂದೆಡೆ ದೇಶದ ಈ ಭಾಗಗಳಲ್ಲಿ ಏಪ್ರಿಲ್‌ 15ರ ವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

Heavy rainfall forecast in this states of india till April 15 know details

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಈಶಾನ್ಯ ಭಾರತದಲ್ಲಿ ಏಪ್ರಿಲ್‌ 11ರವರೆಗೆ ಗುಡುಗು ಸಹಿತ ಮಳೆ ಸುರಿಯಲಿದೆ. ಏಪ್ರಿಲ್ 13-15ರ ವರೆಗೆ ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಅರುಣಾಚಲ ಪ್ರದೇಶದಲ್ಲಿ ಅಲ್ಲಲ್ಲಿ ವ್ಯಾಪಕವಾದ ಸಾಧಾರಣ ಮಳೆ, ಹಿಮ ಬೀಳುವ ನಿರೀಕ್ಷೆಯಿದೆ. ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮೇಘಾಲಯ, ಜಾರ್ಖಂಡ್, ಬಿಹಾರ, ಒಡಿಶಾ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಗುಡುಗು ಸಹಿತ ಚದುರಿದ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.

ಇನ್ನು ಇಂದು (ಏಪ್ರಿಲ್‌ 09) ಅರುಣಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹಾಗೂ ಪೂರ್ವ ಮಧ್ಯಪ್ರದೇಶ, ಛತ್ತೀಸ್‌ಗಢ, ಪಶ್ಚಿಮ ಮಧ್ಯಪ್ರದೇಶ, ಮರಾಠವಾಡ, ಮಧ್ಯ ಮಹಾರಾಷ್ಟ್ರದಲ್ಲೂ ಗುಡುಗು ಸಹಿತ ಅಲ್ಲಿಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಆಂಧ್ರ ಪ್ರದೇಶ, ಯಾನಂ, ತೆಲಂಗಾಣ, ಕೇರಳ ಮತ್ತು ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಬಿಸಿಗಾಳಿ ಇದ್ದರೂ, ಇದರ ನಡುವೆಯೇ ಗುಡುಗು ಸಹಿತ ಚದುರಿದ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

ಬಿಸಿಗಾಳಿ ಎಲ್ಲೆಲ್ಲಿ?: ಉತ್ತರ ಕರ್ನಾಟಕ, ಕರಾವಳಿ ಆಂಧ್ರಪ್ರದೇಶ, ಯಾನಂ, ತೆಲಂಗಾಣ, ರಿಯಾಲಸೀಮಾದ ಪ್ರತ್ಯೇಕ ಪ್ರದೇಶಗಳಲ್ಲಿ ಇಂದು (ಏಪ್ರಿಲ್‌ 09) ಬಿಳಿಗಾಳಿ ಮುಂದುವರೆಯಲಿದ್ದು, ಈಶಾನ್ಯ, ಪೂರ್ವ ಮತ್ತು ಮಧ್ಯ ಭಾರತದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.

ಇನ್ನು ವಾಯುವ್ಯ ಏಷ್ಯಾದಲ್ಲಿ ಮುಂದಿನ 5 ದಿನಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಸುಮಾರು 2° Cರಷ್ಟು ಕ್ರಮೇಣ ಇಳಿಕೆಯಾಗಬಹುದು. ಆದರೆ ಮುಂದಿನ 24 ಗಂಟೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆಗಳಾಗುವ ಮುನ್ಸೂಚನೆ ಇಲ್ಲ. ನಂತರ ಕ್ರಮೇಣ 3-5° Cರಷ್ಟು ಏರಿಕೆಯಾಗುತ್ತದೆ. ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್, ಕೇರಳ ಮತ್ತು ಮಾಹೆ, ಗುಜರಾತ್‌ನ ಕರಾವಳಿ ಪ್ರದೇಶಗಳು, ಕರಾವಳಿ ಆಂಧ್ರ ಪ್ರದೇಶ ಮತ್ತು ಯಾನಂ, ರಾಯಲಸೀಮಾದಲ್ಲಿ ಇಂದಿನಿಂದ ಏಪ್ರಿಲ್ 12ರವರೆಗೆ ಬಿಸಿಗಾಳಿ ಮುಂದುವರೆಯುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+