Breaking; ಮುಂದಿನ 48 ಗಂಟೆಗಳ ಕಾಲ ಬಿಸಿಗಾಳಿ ಮುನ್ಸೂಚನೆ
ನವದೆಹಲಿ, ಏಪ್ರಿಲ್ 29 ; "ಬಿಸಿಗಾಳಿಯ ವಾತಾವರಣ ಶುಕ್ರವಾರ ಇರಲಿದೆ. ಮುಂದಿನ 24 ರಿಂದ 48 ಗಂಟೆಗಳ ಕಾಲ ಮುಂದುವರೆಯಲಿದೆ. ಬಳಿಕ ಉಷ್ಣಾಂಶದಲ್ಲಿ ಇಳಿಕೆ ಕಂಡುಬರಲಿದೆ" ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಆರ್. ಕೆ. ಜಿನಮಣಿ ಹೇಳಿದರು.
ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಮೇ 2 ರಿಂದ 4ರ ತನಕ ರಾಜಸ್ಥಾನ, ನವದೆಹಲಿ, ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಮಳೆಯಾಗಲಿದೆ. ಇದರಿಂದಾಗಿ ಉಷ್ಣಾಂಶ 36 ರಿಂದ 39 ಡಿಗ್ರಿ ಸೆಲ್ಸಿಯಸ್ ತನಕ ಇರಲಿದೆ" ಎಂದರು.
"ಏಪ್ರಿಲ್ 29, 30 ಮತ್ತು ಮೇ 1ರಂದು ಪಶ್ಚಿಮ ರಾಜಸ್ಥಾನ, ಪಂಜಾಬ್, ಹರ್ಯಾಣ, ನವದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್‌ನಲ್ಲಿ ಬಿಸಿಗಾಳಿಯ ಮುನ್ಸೂಚನೆ ಇದೆ" ಎಂದು ಆರ್. ಕೆ. ಜಿನಮಣಿ ತಿಳಿಸಿದರು.

"ಮೇ 4ರಂದು ಅಂಡಮಾನ್ ಬಳಿ ಚಂಡಮಾರುತದ ವಾತಾವರಣ ನಿರ್ಮಾಣವಾಗಲಿದೆ. ಇದರಿಂದಾಗಿ ಉಷ್ಣಾಂಶದಲ್ಲಿ ಇಳಿಕೆ ಕಂಡುಬರಲಿದೆ. ಇದು ಹವಾಮಾನದಲ್ಲಿ ಬದಲಾವಣೆಯನ್ನು ತರಲಿದೆ ಎಂದು ಅಂದಾಜಿಸಲಾಗಿದೆ" ಎಂದು ತಿಳಿಸಿದರು.
The heatwave, which is very intense today, will continue to persist for the next 24-48 hours after which the temperature will drop: RK Jenamani, senior scientist, IMD pic.twitter.com/WXGJ5NnoB4
— ANI (@ANI) April 29, 2022
"ದೆಹಲಿಯಲ್ಲಿ ಶುಕ್ರವಾರ 0.5-1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಿ ದಾಖಲಾಗುವ ನಿರೀಕ್ಷೆ ಇದೆ. ಕೆಲವು ಪ್ರದೇಶಗಳಲ್ಲಿ 46 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಇರಲಿದೆ. ನವದೆಹಲಿ, ಹರ್ಯಾಣ, ಮಧ್ಯಪ್ರದೇಶ, ಪಶ್ಚಿಮ ಉತ್ತರ ಪ್ರದೇಶದಲ್ಲಿ ಇಂದು ಬಿಸಿಗಾಳಿ ವಾತಾವರಣ ಮುಂದುವರೆಯಲಿದೆ" ಎಂದು ಹೇಳಿದ್ದಾರೆ.












Click it and Unblock the Notifications