
ದೆಹಲಿಯಲ್ಲಿ ಬಿಸಿಗಾಳಿ: 4 ದಿನಗಳವರೆಗೆ ಆರೆಂಜ್ ಅಲರ್ಟ್
ನವದೆಹಲಿ ಜೂನ್ 6: ದೆಹಲಿ ಮತ್ತೊಮ್ಮೆ ಹೊತ್ತಿ ಉರಿಯುತ್ತಿದೆ. ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ಅಪ್‌ಡೇಟ್‌ನಲ್ಲಿ ಈ ಇಡೀ ವಾರ, ದೆಹಲಿಯು ತೀವ್ರ ಶಾಖವನ್ನು ಎದುರಿಸಲಿದೆ ಮತ್ತು ಜನರು ಶಾಖದ ಅಲೆಯನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದೆ. ದೆಹಲಿ, ಹರಿಯಾಣ, ಪಂಜಾಬ್, ಯುಪಿ ಮತ್ತು ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ತೀವ್ರ ಶಾಖದ ಅಲೆಯನ್ನು (Heat Wave) ಅನುಭವಿಸುವ ನಿರೀಕ್ಷೆಯಿದೆ. ಈ ನಾಲ್ಕು ದಿನಗಳಲ್ಲಿ ತಾಪಮಾನವು 44 ° -47 ° C ನಡುವೆ ಇರುತ್ತದೆ ಎಂದು IMD ಹಿರಿಯ ವಿಜ್ಞಾನಿ ಆರ್‌ಕೆ ಜೆನಾಮಣಿ ಹೇಳಿದ್ದಾರೆ. ಹಾಗಾಗಿ ಎಲ್ಲರೂ ತುಂಬಾ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಬಿಸಿಗಾಳಿ ಹೆಚ್ಚಾಗಿದೆ. ಜೂನ್ 11 ರ ಮೊದಲು ದೆಹಲಿಯಲ್ಲಿ ಮಳೆ ನಿರೀಕ್ಷಿಸಲಾಗಿಲ್ಲ, ಜೂನ್ 25-30 ರೊಳಗೆ ಮುಂಗಾರು ದೆಹಲಿ-ಎನ್‌ಸಿಆರ್ ತಲುಪುವ ನಿರೀಕ್ಷೆಯಿದೆ.
ದೆಹಲಿಯಲ್ಲಿ ಮತ್ತೆ ಹೆಚ್ಚಾಯ್ತು ರಣಬಿಸಿಲು : ಆರೆಂಜ್ ಅಲರ್ಟ್ ಘೋಷಣೆ
ಮತ್ತೊಂದೆಡೆ ದಕ್ಷಿಣ ಭಾರತದಲ್ಲಿ ಮುಂಗಾರು ಚುರುಕಾಗಿದ್ದು, ಈಶಾನ್ಯ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.
ಮುಂದಿನ 24 ಗಂಟೆಗಳಲ್ಲಿ ಕೇರಳ, ಲಕ್ಷದ್ವೀಪ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ಸಿಕ್ಕಿಂ, ಉಪ-ಹಿಮಾಲಯನ್ ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ತಿಳಿಸಿದೆ.
Delhi | Orange alert in Delhi. Severe heatwave from June 4 in Haryana, Punjab, Delhi, UP & parts of MP, Rajasthan. Temp varying b/w 44°-47°. Shall continue for 4 more days. We advise people to venture out carefully as heat spell very severe: RK Jenamani, senior scientist IMD pic.twitter.com/04YwyVE6F1
— ANI (@ANI) June 6, 2022

ಆದರೆ ದೆಹಲಿ, ಯುಪಿ, ಬಿಹಾರ, ಎಂಪಿ ಮತ್ತು ಛತ್ತೀಸ್‌ಗಢದಲ್ಲಿ ತುಂಬಾ ಬಿಸಿಲಿರಲಿದೆ. ಜನರು ಬಿಸಿಲನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಕೊಂಕಣ ಮತ್ತು ಮಹಾರಾಷ್ಟ್ರದಲ್ಲಿ ಮುಂಗಾರು ಪೂರ್ವ ಚಟುವಟಿಕೆಗಳನ್ನು ಕಾಣಬಹುದು. ಸಾಮಾನ್ಯವಾಗಿ ಮುಂಗಾರು ಜೂನ್ 5-15 ರ ನಡುವೆ ಮಹಾರಾಷ್ಟ್ರವನ್ನು ತಲುಪುತ್ತದೆ ಆದರೆ ಈ ಬಾರಿ ಸ್ವಲ್ಪ ತಡವಾಗಬಹುದು. ಮುಂಗಾರು ಪೂರ್ವ ಮಳೆಯಿಂದಾಗಿ ಜನರು ನಿರಾಳರಾಗುತ್ತಾರೆ.