Divorce Party: ಮಾಜಿ ಪತ್ನಿಯ ಬೊಂಬೆ ಜೊತೆ ಡಿವೋರ್ಸ್ ಪಾರ್ಟಿ ಮಾಡಿದ ಪತಿ
ಈಗಂತೂ ಡಿವೋರ್ಸ್ ಎನ್ನುವ ಪದಕ್ಕೆ ಬೆಲೆಯೇ ಇಲ್ಲವೇನೋ ಎಂಬಂತಾಗುತ್ತಿದೆ. ಎಲ್ಲೆಡೆಯೂ ಡಿವೋರ್ಸ್ ಪದ ಕೇಳಿಬರುತ್ತಿದ್ದು, ಅಷ್ಟರಮಟ್ಟಿಗೆ ಡಿವೋರ್ಸ್ ಕಾಮನ್ ಆಗಿಬಿಟ್ಟಿದೆ. ಸಾಮಾನ್ಯವಾಗಿ ಡಿವೋರ್ಸ್ ಅಂದಾಗ ಬೇಸರ ನೋವಿನ ಕ್ಷಣಗಳು ಎಂದು ಹೇಳಲಾಗುತ್ತಿತ್ತು. ಆದರೆ ಕಾಲ ಬದಲಾದಂತೆ ಅವುಗಳ ಸನ್ನಿವೇಷ ಕೂಡ ಬದಲಾಗುತ್ತಿದೆ. ಈಗ ಡಿವೋರ್ಸ್ ಅನ್ನು ಕೂಡ ಪಾರ್ಟಿ ಮೂಲಕ ಸೆಲೆಬ್ರೇಟ್ ಮಾಡುವ ಪ್ರವೃತ್ತಿ ಶುರುವಾಗಿದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾನ್ಯವಾಗಿ ಡಿವೋರ್ಸ್ ಪಾರ್ಟಿಗಳು ಮೊದಲಿನಿಂದಲೂ ಚಾಲ್ತಿಯಲ್ಲಿದ್ದವು. ಆದರೆ, ಇದೀಗ ಭಾರತದಲ್ಲೂ ಡಿವೋರ್ಸ್ ಪಾರ್ಟಿಗಳು ಸದ್ದು ಮಾಡಲಾರಂಭಿಸಿವೆ. ಇತ್ತೀಚೆಗೆ ಮಹಿಳೆಯೊಬ್ಬರು ತಮಗೆ ಡಿವೋರ್ಸ್ ಸಿಕ್ಕ ಕ್ಷಣವನ್ನು ದೊಡ್ಡ ಪಾರ್ಟಿ ಮಾಡುವ ಮೂಲಕ ಆಚರಿಸಿ ಗಮನ ಸೆಳೆದಿದ್ದರು. ಆದರೆ, ಹರಿಯಾಣದ ವ್ಯಕ್ತಿಯೊಬ್ಬ ವಿಚಿತ್ರವಾಗಿ ಡಿವೋರ್ಸ್ ಪಾರ್ಟಿ ಮಾಡಿ ಸುದ್ದಿಯಲ್ಲಿದ್ದಾನೆ.

ಹರಿಯಾಣದ ನಿವಾಸಿಯಾದ ಮಂಜೀತ್ ಎಂಬಾತ ತನ್ನ ವಿಚ್ಚೇದನವನ್ನು ಖುಷಿಯಾಗಿ ಆಚರಿಸಿಕೊಂಡಿದ್ದಾನೆ. ಪಾರ್ಟಿ ಆಯೋಜಿಸುವ ಮೂಲಕ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಡಿವೋರ್ಸ್ ಅನ್ನು ಜಾಲಿ ಮಾಡಿದ್ದಾನೆ. ವಿಚಿತ್ರವೆಂದರೆ ತನ್ನ ಭಾವಿ ಪತ್ನಿಯನ್ನು ಹೋಲುವ ಬೊಂಬೆಯೊಂದನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಪಾರ್ಟಿ ಮಾಡಿದ್ದಾನೆ. ಅದನ್ನು ಮಧುಮಗಳಂತೆ ಸಿಂಗರಿಸಿ ಪಾರ್ಟಿಯಲ್ಲಿ ನಿಲ್ಲಿಸಿಕೊಂಡಿದ್ದಾನೆ.
ಇದರ ಹಿಂಬದಿಯಲ್ಲಿ ತಮ್ಮ ಮದುವೆ ದಿನಾಂಕ ಹಾಗೂ ಡಿವೋರ್ಸ್ ಪಡೆದ ದಿನಾಂಕವಿರುವ ಪೋಸ್ಟರ್ ಕೂಡ ಅಂಟಿಸಿಕೊಂಡಿದ್ದಾನೆ. ಆದರೆ, ತನ್ನ ಮಾಜಿ ಪತ್ನಿಯನ್ನು ಹೋಲುವ ಬೊಂಬೆ ಇಟ್ಟು ಸಂಭ್ರಮಿಸಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
2020ರಲ್ಲಿ ಮಂಜೀತ್ ಕೋಮಲ್ ಅವರನ್ನು ವಿವಾಹವಾಗಿದ್ದರು. ಆದರೆ, ಇಬ್ಬರ ನಡುವೆ ಹೊಂದಾಣಿಕೆ ಸಮಸ್ಯೆ ಇತ್ತು ಎಂದು ವರದಿಯಾಗಿದೆ. ಆದರೆ ಇತ್ತೀಚೆಗೆ ಅವರು ಡಿವೋರ್ಸ್ ಪಡೆದಿದ್ದರು. ಇದನ್ನು ಸಂಭ್ರಮಿಸಲು ಹೊಸ ಪಾರ್ಟಿ ಮೂಡ್‌ಗೆ ಮಂಜೀತ್ ಹೋಗಿದ್ದು ಒಳ್ಳೆಯ ವೇದಿಕೆಯನ್ನು ಸಿಂಗರಿಸಿಕೊಂಡಿದ್ದಾನೆ. ಸ್ನೇಹಿತರನ್ನು ಪಾರ್ಟಿಗೆ ಕರೆಸಿ, ಕೇಕ್ ಕತ್ತರಿಸಿಕೊಂಡಿದ್ದಾರೆ. ಇದನ್ನು ಸ್ವಾತಂತ್ರ್ಯದ ಸಂಭ್ರಮ ಎಂದೂ ಹೇಳಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಫುಲ್ ವೈರಲ್ ಆಗಿದೆ. ಈ ಬಗ್ಗೆ ಹಲವರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಡಿವೋರ್ಸ್ ಅನ್ನು ಈ ರೇಂಜಿಗೆ ಸೆಲೆಬ್ರೇಟ್ ಮಾಡ್ತಿದ್ದಾನೆ ಅಂದ್ರೆ, ಆ ಜೀವ ಇನ್ನೆಷ್ಟು ನೊಂದಿರಬೇಕು? ಎಂದು ಹೇಳಿದ್ದಾರೆ. ಅದು ಆತನ ಸ್ವಾತಂತ್ರ್ಯ...ಸಂಭ್ರಮಿಸಲಿ ಬಿಡಿ ಎಂದು ಹೇಳಿದ್ದಾರೆ.
ಎಲ್ಲ ಸರಿ...ಆ ಗೊಂಬೆಯನ್ನು ನಿಲ್ಲಿಕೊಳ್ಳುವ ಅಗತ್ಯವೇನಿತ್ತು? ಅದರ ಬದಲು ಡಿವೋರ್ಸ್ ಅನ್ನೇ ಕೊಟ್ಟಿರುವ ಪತ್ನಿಯನ್ನೇ ಪಾರ್ಟಿಗೆ ಕರೆದಿದ್ದರೆ ಅವರು ಕೂಡ ನೆಮ್ಮದಿಯಿಂದ ಬರುತ್ತಿದ್ದರೇನೋ? ಎಂದು ಸಲಹೆಯನ್ನೂ ನೀಡಿದ್ದಾರೆ. ಹಲವರು ಮಂಜೀತ್ ನಡೆಗೆ ಭೇಷ್ ಎಂದಿದ್ದರೆ, ಕೆಲವರು ಇತ್ತೀಚೆಗೆ ಸಂಬಂಧಗಳಿಗೆ ಬೆಲೆನೇ ಇಲ್ಲ ಗುರು ಎಂದು ಬೇಸರ ತೋಡಿಕೊಂಡಿದ್ದಾರೆ.












Click it and Unblock the Notifications