ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ, ಹರಿಯಾಣ ಫಲಿತಾಂಶ ಲೈವ್

By Mahesh
|
Google Oneindia Kannada News

ಬೆಂಗಳೂರು, ಅ.19: ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಗೆ ಮತ ಎಣಿಕೆ ಮುಕ್ತಾಯವಾಗಿದೆ. ಕಾಂಗ್ರೆಸ್, ಬಿಜೆಪಿ, ಶಿವಸೇನೆ, ಎನ್ ಸಿಪಿ, ಎಂಎನ್‍ಎಸ್, ಐಎನ್‍ಎಲ್ ಡಿ ಸೇರಿದಂತೆ ಘಟಾನುಘಟಿ ನಾಯಕರ ಹಣೆಬರಹ ಭಾನುವಾರ ನಿರ್ಧಾರವಾಗಿದೆ. ಲೋಕಸಭೆ ಚುನಾವಣೆ ನಂತರ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿ ಮತ್ತೊಮ್ಮೆ ಭರ್ಜರಿ ಜಯ ದಾಖಲಿಸಿದ್ದಾರೆ. ಮತ್ತೊಮ್ಮೆ ಭರ್ಜರಿ ಜಯ ದಾಖಲಿಸಿದ್ದಾರೆ. ಕಾಂಗ್ರೆಸ್ ಅಧಿಪತ್ಯಕ್ಕೆ ಅಂತ್ಯ ಹಾಡಲಾಗಿದೆ.

5.30:
ಬಿಜೆಪಿ ಸಂಸದೀಯ ಸಭೆಯಲ್ಲಿ ಮಹಾರಾಷ್ಟ್ರದಲ್ಲಿನ ಮೈತ್ರಿ ಸರ್ಕಾರ ಹಾಗೂ ಹರ್ಯಾಣದ ಮುಂದಿನ ಸಿಎಂ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಈ ನಡುವೆ ಬಿಜೆಪಿ ಕಚೇರಿಗಳಲ್ಲಿ ಸಂಭ್ರಮ ಮನೆ ಮಾಡಿದೆ. [ಚಿತ್ರಗಳಲ್ಲಿ: ನೆಲಕಚ್ಚಿದ ಕಾಂಗ್ರೆಸ್, ಅರಳಿದ ಕಮಲ ]

4.45: ಮಹಾರಾಷ್ಟ್ರದಲ್ಲಿ ಮತಗಳಿಕೆ ಶೇಕಡವಾರು ಹೀಗಿದೆ

4.15: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸುದ್ದಿಗೋಷ್ಠಿ ನಡೆಸಿ, ನಾವು ಈಗ ಸಂಭ್ರಮಾಚರಣೆಯ ಮೂಡ್ ನಲ್ಲಿದ್ದೇವೆ. ಮೈತ್ರಿ ಸರ್ಕಾರದ ಬಗ್ಗೆ ಸಂಜೆ ನಂತರ ಉತ್ತರ ಸಿಗಲಿದೆ ಎಂದಿದ್ದಾರೆ.

4:00 : ಮಹಾರಾಷ್ಟ್ರ ಫಲಿತಾಂಶ : BJP ಗೆಲುವು 62, ಶಿವಸೇನಾ 37, ಕಾಂಗ್ರೆಸ್ 29, ಎನ್ ಸಿಪಿ 18, ಎಂಎನ್ ಎಸ್ 1, ಇತರೆ 13
ಹರ್ಯಾಣ: ಬಿಜೆಪಿ 43, ಐಎನ್ ಎಲ್ ಡಿ 18, ಕಾಂಗ್ರೆಸ್ 14, ಇತರೆ 2.

13.30: ಬಿಜೆಪಿಯ ಮುಂದಿನ ಟಾರ್ಗೆಟ್ ಯಾವುದು?


13.25: ಮಹಾರಾಷ್ಟ್ರದ ಪರ್ಲಿ ಕ್ಷೇತ್ರದಲ್ಲಿ ಜಯ ಗಳಿಸಿದ ಪಂಕಜಾ ಮುಂಡೆ ಅವರು ಈ ಗೆಲುವು ಜನರ ಗೆಲುವು ಇದನ್ನು ನನ್ನ ದಿವಂಗತ ತಂದೆ ಗೋಪಿನಾಥ್ ಮುಂಡೆ ಅವರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ. ನಾನು ಸಿಎಂ ಆಗಲು ಬಯಸಿದ್ದು ನಿಜ ಅದರೆ, ಇದಕ್ಕಾಗಿ ಎಂದೂ ಲಾಬಿ ನಡೆಸಿಲ್ಲ, ಪಕ್ಷದ ಹಿರಿಯ ಮುಖಂಡರು ನೀಡುವ ಯಾವುದೇ ಜವಾಬ್ದಾರಿ ಹೊರಲು ಸಿದ್ಧ ಎಂದಿದ್ದಾರೆ. [ಸೋಲು -ಗೆಲುವು ಯಾರು ಏನು ಹೇಳಿದ್ರು?]

Pankaja Munde

13.20: ಎನ್ ಸಿಪಿಯ ಆರ್ ಆರ್ ಪಾಟೀಲ್ ಅವರಿಗೆ ಜಯ

13.15:
ಹರ್ಯಾಣ ಫಲಿತಾಂಶ : ಬಿಜೆಪಿ 8 ಸ್ಥಾನದಲ್ಲಿ ಜಯ, 44ರಲ್ಲಿ ಮುನ್ನಡೆ
* ಮಹಾರಾಷ್ಟ್ರ ಫಲಿತಾಂಶ: ಬಿಜೆಪಿ 5 ಸ್ಥಾನ, 105ರಲ್ಲಿ ಮುನ್ನಡೆ

13.00:
ಕಾಂಗ್ರೆಸ್ ಶಾಸಕ ಜಗ್ಬೀರ್ ಮಲಿಕ್ ಅವರು ಹರ್ಯಾಣದ ಗೊಹಾನಾ ಸ್ಥಾನವನ್ನು ಕೇವಲ 2 ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ತಮ್ಮ ಶಾಸಕತ್ವ ಉಳಿಸಿಕೊಂಡಿದ್ದಾರೆ.

12.45:
ಮಹಾರಾಷ್ಟ್ರದಲ್ಲಿ ಬಿಜೆಪಿ ಸಿಎಂ, ಶಿವಸೇನಾ ಡಿಸಿಎಂ ಸ್ಥಾನದೊಂದಿಗೆ ಸರ್ಕಾರ ರಚನೆ ಸಾಧ್ಯತೆ.

12.40:
ಬಿಜೆಪಿ ಶಿವಸೇನಾ ಮೈತ್ರಿಯಿಂದ ಸರ್ಕಾರ ರಚನೆಗೆ ನಮ್ಮ ಬೆಂಬಲ ಆರ್ ಪಿಐನ ಮುಖ್ಯಸ್ಥ ರಾಮದಾಸ್ ಅಥಾವಳೆ ಹೇಳಿಕೆ

12.35:
ನಾರಾಯಣ ರಾಣೆ ಅವರ ಪುತ್ರ ನಿತೇಶ್ ರಾಣೆ ಕಂಕವ್ಲಿಯಲ್ಲಿ ಜಯ.

12.30:
ಹರ್ಯಾಣದ ಹಿಸ್ಸಾರ್ ನಲ್ಲಿ ಸಾವಿತ್ರಿ ಜಿಂದಾಲ್ ಅವರಿಗೆ ಸೋಲು.

Uddhav Thackeray


12.25 :
ಮಹಾರಾಷ್ಟ್ರದಲ್ಲಿ ನಾವು ಮಿನಿ ಮೋದಿ ಸರ್ಕಾರವನ್ನು ರಚಿಸಲಿದ್ದೇವೆ. ಬಿಜೆಪಿ ಸೆಂಚುರಿ ಹೊಡೆದಿದೆ: ಕಿರಿತ್ ಸೋಮೈಯಾ ಹೇಳಿಕೆ.

12.20:
ಬಿಜೆಪಿ ಮುಂದಿರುವ ಸಾಧ್ಯತೆಗಳು: ಈಸಮಯದ ಮುನ್ನಡೆ ಗಮನಿಸಿ ಬಿಜೆಪಿ 114+ ಶಿವಸೇನಾ 61=175 ಅಥವಾ ಬಿಜೆಪಿ 114+ಎನ್ ಸಿಪಿ 45=159

12.15:
ಕಾಂಗ್ರೆಸ್ 41+ ಎನ್ ಸಿಪಿ 45+ ಶಿವಸೇನಾ 62= 148

12.10: ಮಹಾರಾಷ್ಟ್ರ ಹಾಗೂ ಹರ್ಯಾಣದ ಫಲಿತಾಂಶ ಅಚ್ಚರಿ ತಂದಿಲ್ಲ. ಶಿವಸೇನಾ ಜೊತೆ ಮರು ಮೈತ್ರಿ ಸಾಧ್ಯತೆ ಭರವಸೆಯಿದೆ ಎಂದು ಆರೆಸ್ಸೆಸ್ ಮುಖಂಡ ಎನ್ ಜಿ ವೈದ್ಯ ಹೇಳಿದ್ದಾರೆ.

12.00:
ಮಹಾರಾಷ್ಟ್ರದಲ್ಲಿ ಹೊಂದಾಣಿಕೆ ಅನಿವಾರ್ಯ, ಅದರೆ, ಮುಖ್ಯಮಂತ್ರಿ ಸ್ಥಾನ ಬಿಜೆಪಿ ಅಭ್ಯರ್ಥಿಯೇ ಆಗಿರುತ್ತಾರೆ. ನಾನು ಪ್ರವಾಸ ಮಾಡಿದ ಶೇ 50ರಷ್ಟು ಕ್ಷೇತ್ರದಲ್ಲಿಗೆಲುವು ಸಾಧಿಸಲಾಗಿದೆ: ಸಂಸದ ಬಿಎಸ್ ಯಡಿಯೂರಪ್ಪ ಹೇಳಿಕೆ

BS Yeddyurappa


11.55: ಮುನ್ನಡೆ:
ಮಹಾರಾಷ್ಟ್ರದಲ್ಲಿ ಬಿಜೆಪಿ 114, ಕಾಂಗ್ರೆಸ್ 39, ಶಿವಸೇನಾ 61, ಎನ್ ಸಿಎಪಿ 45, ಎಂಎನ್ಎಸ್ 4 ಇತರೆ 23
* ಹರ್ಯಾಣ ಮುನ್ನಡೆ : ಬಿಜೆಪಿ 53, ಕಾಂಗ್ರೆಸ್ 11, ಐಎನ್ಎಲ್ ಡಿ 17, ಎಚ್ ಜೆಸಿ 3, ಇತರೆ 6

11.50:
ಎಚ್ ಜೆಸಿ ಅಭ್ಯರ್ಥಿ ಕುಲದೀಪ್ ಬಿಸ್ನೋಯಿಗೆ ಗೆಲುವು

11.45:

ಎನ್ ಸಿಪಿಯ ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್, ಅಜಿತ್ ಪವಾರ್ ಜೊತೆ ಅಧ್ಯಕ್ಷ ಶರದ್ ಪವಾರ್ ಮಾತುಕತೆ.

11.40:
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು 4 ಗಂಟೆಗೆ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ. ಶಿವಸೇನೆ ಜೊತೆ ಮೈತ್ರಿ ಕುರಿತ ಅಂತಿಮ ನಿರ್ಧಾರ ಇನ್ನೂ ಕೈಗೊಂಡಿಲ್ಲ. ಸ್ಪಷ್ಟ ಬಹುಮತ ಪಡೆಯಲು 145 ಸ್ಥಾನಗಳ ಅಗತ್ಯವಿದೆ.

11.35:
ಮುಂಬೈನ ಬೋರಿವಿಲಿಯಲ್ಲಿ ಬಿಜೆಪಿಯ ವಿನೋದ್ ತಾವ್ಡೆಗೆ ಜಯ,

11.30:
ನಾಗ್ಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮಹಾರಾಷ್ಟ್ರ ಸಿಎಂ ಅಭ್ಯರ್ಥಿ ಎನಿಸಿರುವ ದೇವೇಂದ್ರ ಫಡ್ನಾವೀಸ್ ಅವರಿಗೆ 48 ಸಾವಿರ ಮತಗಳ ಅಂತರದ ಗೆಲುವು

11.25:
ಎನ್ ಸಿಪಿಯ ಛಗನ್ ಭುಜಬಲ್ ಗೆ ಯೇವ್ಲಾ ಕ್ಷೇತ್ರದಲ್ಲಿ ಜಯ, ಕಾಂಗ್ರೆಸ್ಸಿನ ರಾಧಾಕೃಷ್ಣ ಪಾಟೀಲ್ ಗೆ ಶಿರಡಿಯಲ್ಲಿ ಜಯ

11.20:
ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ ರಾಣೆ ಅವರಿಗೆ ಕುಡಲ್ ಕ್ಷೇತ್ರದಲ್ಲಿ ಸೋಲು.


11.15:
ಬಿಜೆಪಿ ಹಾಗೂ ಶಿವಸೇನಾ ಮರು ಮೈತ್ರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಸಭೆ, ಸಂಜೆ ಸಂಸದೀಯ ಸಮಿತಿ ಸಭೆಯಲ್ಲಿ ಘೋಷಣೆ ಸಾಧ್ಯತೆ.

11.10: ಹರ್ಯಾಣದ ಗರ್ಹಿ ಸಂಪ್ಲಾ ಇಲಾಹಿ ಕ್ಷೇತ್ರದಿಂದ ಭೂಪಿಂದರ್ ಸಿಂಗ್ ಹೂಡಾ ಆಯ್ಕೆ

11.05: ಬಿಜೆಪಿಗೆ ಬಹುಮತ ಸಿಗದಿದ್ದರೆ ಬಾಹ್ಯ ಬೆಂಬಲ ನೀಡಲು ಎನ್ ಸಿಪಿ ಸಜ್ಜಾಗಿದೆ. ಈ ಬಗ್ಗೆ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಲಾಗಿದೆ.

10.58: ಹರ್ಯಾಣದಲ್ಲಿ ಕಾಂಗ್ರೆಸ್ಸಿಗೆ ಭಾರಿ ಸೋಲು ಸಂಭವ, ಟ್ರೆಂಡಿಂಗ್ ನಲ್ಲಿ ಮೂರನೇ ಸ್ಥಾನಕ್ಕೆ ಕುಸಿತ, ಸೋಲಿನ ಹೊಣೆ ಹೊತ್ತ ನಾಯಕರು.

10.55: ಮುನ್ನಡೆ: ಮಹಾರಾಷ್ಟ್ರ(288 ಸ್ಥಾನ)ದಲ್ಲಿ ಬಿಜೆಪಿ 105, ಕಾಂಗ್ರೆಸ್ 50, ಶಿವಸೇನಾ 55, ಎನ್ ಸಿಎಪಿ 50, ಎಂಎನ್ಎಸ್ 7 ಇತರೆ 21
* ಹರ್ಯಾಣ(90 ಸ್ಥಾನ) ಮುನ್ನಡೆ :
ಬಿಜೆಪಿ 48, ಕಾಂಗ್ರೆಸ್ 13, ಐಎನ್ಎಲ್ ಡಿ 21, ಎಚ್ ಜೆಸಿ 3, ಇತರೆ 5

10.45: ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಿರುವುದನ್ನು ಒಪ್ಪಿಕೊಂಡ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಕರೆ ತರುವ ನಿರ್ಧಾರದಲ್ಲಿ ಒಮ್ಮತ ಮೂಡಿಲ್ಲ, ಈ ಬಗ್ಗೆ ಅವರ ಕುಟುಂಬದ ನಿರ್ಧಾರವೇ ಅಂತಿಮ. ನಮ್ಮ ಸೋಲಿನ ಭ್ರಷ್ಟಾಚಾರ ಕಾರಣವಲ್ಲ ಎಂದಿದ್ದಾರೆ.

10.40: ಮಹಾರಾಷ್ಟ್ರದ ಎನ್ ಸಿಪಿ ಅಜಿತ್ ಪವಾರ್ ಅವರು ಬರಾಮತಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

10.35: ಹರ್ಯಾಣದಲ್ಲಿ ಭೂಪಿಂದರ್ ಸಿಂಗ್ ಹೂಡಾ ಅವರು ಐಎನ್ ಎಲ್ ಡಿಯ ಸತೀಶ್ ನಂದಾಲ್ ವಿರುದ್ಧ ಮುನ್ನಡೆ,

10.30: ಹರ್ಯಾಣದ ಸಿರ್ಸಾ ಕ್ಷೇತ್ರದಲ್ಲಿ ಮಾಜಿ ಸಚಿವ ಗೋಪಾಲ್ ಕಾಂಡಾಗೆ ಮುನ್ನಡೆ, ಜಾಂಝಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಗೀತಾ ಬುಕ್ಕಲ್ ಗೆ ಜಯ.

10.25: ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸೋದರಿ ವಂದನಾ ಶರ್ಮ ಅವರು ಹರ್ಯಾಣದಲ್ಲಿ ಸೋಲುಂಡಿದ್ದಾರೆ.

10.20: ಮಹಾರಾಷ್ಟ್ರದ ಕರಾಡ್ ಕ್ಷೇತ್ರದಲ್ಲಿ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ ಅವರು ಹಿನ್ನಡೆ ಅನುಭವಿಸಿದ್ದಾರೆ.
10.15: ಮಹಾರಾಷ್ಟ್ರ ಲೈವ್ ಟ್ರೆಂಡ್


9.55 : ಪುಣೆಯ ಬಿಜೆಪಿ ನಾಯಕಿ ಮಾಧುರಿ ಮಿಸಾಲ್ ಗೆ ಪರ್ವಾತಿ ಹಾಗೂ ಮೇಥಾ ಕುಲಕರ್ಣಿಗೆ ಕೊಥ್ರುಡ್ ಕ್ಷೇತ್ರದಲ್ಲಿ ಭರ್ಜರಿ ಗೆಲುವು
9.50:
ಮಹಾರಾಷ್ಟ್ರದ ನೂತನ ಸಿಎಂ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಶಿವಸೇನೆ ನಮ್ಮ ರಾಜಕೀಯ ವಿರೋಧಿಯಲ್ಲ, ಕಾಂಗ್ರೆಸ್ ಹಾಗೂ ಎನ್ ಸಿಪಿ ನಮ್ಮ ವಿರೋಧಿಗಳು ಜನ 15 ವರ್ಷದಿಂದ ದುರಾಡಳಿತದಿಂದ ಬೇಸತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನಾವೀಸ್ ಹೇಳಿಕೆ.
9.45:

9.40: ಮುನ್ನಡೆ: ಮಹಾರಾಷ್ಟ್ರದಲ್ಲಿ ಬಿಜೆಪಿ 116, ಕಾಂಗ್ರೆಸ್ 51, ಶಿವಸೇನಾ 58, ಎನ್ ಸಿಎಪಿ 52, ಎಂಎನ್ಎಸ್ 4 ಇತರೆ 17
* ಹರ್ಯಾಣ ಮುನ್ನಡೆ : ಬಿಜೆಪಿ 48, ಕಾಂಗ್ರೆಸ್ 19, ಐಎನ್ಎಲ್ ಡಿ 19, ಎಚ್ ಜೆಸಿ 3, ಇತರೆ 2
9.25:ಹಿನ್ನಡೆ: ನಾರಾಯಣ ರಾಣೆ,ನಿರ್ಮಲಾ ಗಾವಿತ್, ಪಂಕಜ್ ಭುಜ್ ಬಲ್,ರಾಹುಲ್ ಠಾಕ್ರೆ, ರಾಜೇಂದ್ರ ಶೇಖವಾತ್(ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪುತ್ರ
* ಮುನ್ನಡೆ:
ಪಂಕಜಾ ಮುಂಡೆ, ದೇವಯಾನಿ ಫರಾಂಡೆ, ಅಜಿತ್ ಪವಾರ್, ದೇವೇಂದ್ರ ಫಡ್ನಾವೀಸ್, ಪೃಥ್ವಿರಾಜ್ ಚೌಹಾಣ್
9.20:
ಕಾಂಗ್ರೆಸ್ ನಾಯಕರಲ್ಲಿ ಭುಗಿಲೆದ್ದ ಭಿನ್ನಮತ, ಪ್ರಿಯಾಂಕಾ ಲಾವ್ ದೇಶ್ ಬಚಾವ್' ಎಂದು ಘೋಷಣೆ ಕೂಗಿ ದೆಹಲಿ ಎಐಸಿಸಿ ಕಚೇರಿ ಎದುರು ಪ್ರತಿ ಭಟನೆ
9.15: ಮುನ್ನಡೆ:
ಮಹಾರಾಷ್ಟ್ರದಲ್ಲಿ ಬಿಜೆಪಿ 131, ಕಾಂಗ್ರೆಸ್ 42, ಶಿವಸೇನಾ 60, ಎನ್ ಸಿಎಪಿ 39, ಎಂಎನ್ಎಸ್ 2 ಇತರೆ 10
* ಹರ್ಯಾಣ ಮುನ್ನಡೆ : ಬಿಜೆಪಿ 49, ಕಾಂಗ್ರೆಸ್ 17, ಐಎನ್ಎಲ್ ಡಿ 16, ಎಚ್ ಜೆಸಿ 3, ಇತರೆ 2 [ಮಹಾರಾಷ್ಟ್ರದಲ್ಲಿ ಎನ್ ಡಿಎ ಜಯಭೇರಿ : ಸಿವೋಟರ್ ಸಮೀಕ್ಷೆ]

9.10: ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವ ನಿರೀಕ್ಷೆ ಆರಂಭಿಕ ಟ್ರೆಂಡ್ ನೋಡಿ ಶಿವಸೇನಾ ಮುಖಂಡರು ಬಿಜೆಪಿ ನಾಯಕರ ಕಚೇರಿಯತ್ತ ತೆರಳುತ್ತಿದ್ದು, ಮರುಮೈತ್ರಿ ಮಾತುಕತೆ ಆರಂಭವಾಗುವ ಲಕ್ಷಣಗಳು ಕಂಡು ಬಂದಿದೆ.ಈ ಸಮಯಕ್ಕೆ ಬಿಜೆಪಿ 125 ಹಾಗೂ ಶಿವಸೇನಾ 61 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿವೆ

9.05: ಮಹಾರಾಷ್ಟ್ರದ ಮಾಜಿ ಸಿಎಂ ಕರಾಡ್ ಕ್ಷೇತ್ರದ ಅಭ್ಯರ್ಥಿ ಪೃಥ್ವಿರಾಜ್ ಚೌಹಾಣ್ ಗೆ ಮುನ್ನಡೆ.
9.00: ಮುನ್ನಡೆ: ಮಹಾರಾಷ್ಟ್ರದಲ್ಲಿ ಬಿಜೆಪಿ 113, ಕಾಂಗ್ರೆಸ್ 38, ಶಿವಸೇನಾ 66, ಎನ್ ಸಿಎಪಿ 45, ಎಂಎನ್ಎಸ್ 3
* ಹರ್ಯಾಣ ಮುನ್ನಡೆ : ಬಿಜೆಪಿ 45, ಕಾಂಗ್ರೆಸ್ 17, ಐಎನ್ಎಲ್ ಡಿ 23, ಎಚ್ ಜೆಸಿ 4, ಇತರೆ 1

8.55: ಹರ್ಯಾಣದಲ್ಲಿ ವಿವಾದಿತ ನಾಯಕ ಗೋಪಾಲ್ ಕಾಂಡಾಗೆ ಹಿನ್ನಡೆ.

Goapl Kanda


8.50:
ಆರಂಭಿಕ ಮುನ್ನಡೆ ಪಡೆದುಕೊಳ್ಳುತ್ತಿದ್ದಂತೆ ದೆಹಲಿ ಬಿಜೆಪಿ ಕಚೇರಿ ಮುಂದೆ ಸಂಭ್ರಮಾಚರಣೆ.

8.45 : ಮುನ್ನಡೆ:
ಮಹಾರಾಷ್ಟ್ರದಲ್ಲಿ ಬಿಜೆಪಿ 101, ಕಾಂಗ್ರೆಸ್ 28, ಶಿವಸೇನಾ 44, ಎನ್ ಸಿಎಪಿ 21, ಇತರೆ 2
* ಹರ್ಯಾಣ ಮುನ್ನಡೆ : ಬಿಜೆಪಿ 45, ಕಾಂಗ್ರೆಸ್ 11, ಐಎನ್ ಎಲ್ ಡಿ 22, ಎಚ್ ಜೆಸಿ 3

8.42 :
ಹರ್ಯಾಣದಲ್ಲಿ ಭೂಪಿಂದರ್ ಸಿಂಗ್ ಹೂಡಾ ಅವರಿಗೆ ಹಿನ್ನಡೆ

8.41:
ಬಾರಾಮತಿ ಕ್ಷೇತ್ರದಲ್ಲಿ ಮಹಾರಾಷ್ಟ್ರದ ಮಾಜಿ ಡಿಸಿಎಂ ಎನ್ ಸಿಪಿ ಅಭ್ಯರ್ಥಿ ಅಜಿತ್ ಪವಾರ್ ಗೆ ಹಿನ್ನಡೆ, ಆರ್ ಆರ್ ಪಾಟೀಲ್ ಗೂ ಹಿನ್ನಡೆ

8.40: 'ದೆಹಲಿಯಲ್ಲಿ ನರೇಂದ್ರ, ಮಹಾರಾಷ್ಟ್ರದಲ್ಲಿ ದೇವೇಂದ್ರ' ಎಂದು ಫಡ್ನಾವೀಸ್ ಪರ ಬೆಂಬಲಿಗರಿಂದ ಜಯಘೋಷ.

Devendra

8.37: ಮುನ್ನಡೆ: ಮಹಾರಾಷ್ಟ್ರ: ಬಿಜೆಪಿ 32, ಕಾಂಗ್ರೆಸ್ 10, ಶಿವಸೇನಾ 12, ಎನ್ ಸಿಎಪಿ 3, ಇತರೆ 1
* ಹರ್ಯಾಣ : ಬಿಜೆಪಿ 16, ಕಾಂಗ್ರೆಸ್ 3, ಐಎನ್ ಎಲ್ ಡಿ 4.

8.35: ಮಹಾರಾಷ್ಟ್ರದಲ್ಲಿ ಪಂಕಜಾ ಮುಂಡೆಗೆ ಮುನ್ನಡೆ, ನಾಗ್ಪುರದಲ್ಲಿ ದೇವೇಂದ್ರ ಫಡ್ನಾವೀಸ್ ಗೂ ಮುನ್ನಡೆ

8.30:ಹರ್ಯಾಣದಲ್ಲಿ ಇವಿಎಂ ಮತ ಎಣಿಕೆ ಜಾರಿಯಲ್ಲಿರುವ ಚಿತ್ರ


8.25: ಮಹಾರಾಷ್ಟ್ರದಲ್ಲಿ ಮುನ್ನಡೆ : ಬಿಜೆಪಿ 27, ಕಾಂಗ್ರೆಸ್ 2, ಶಿವಸೇನಾ 9

8.17: ಹರ್ಯಾಣದಲ್ಲಿ ಮುನ್ನಡೆ: ಬಿಜೆಪಿ 12, ಕಾಂಗ್ರೆಸ್ 1,ಐಎನ್ ಎಲ್ ಡಿ 7

8.15: ಮುನ್ನಡೆ ಮಹಾರಾಷ್ಟ್ರ: ಬಿಜೆಪಿ 7 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ, ಶಿವಸೇನಾ 3 ಕ್ಷೇತ್ರಗಳಲ್ಲಿ ಮುಂದಿದೆ.

8.05: ಉಭಯ ರಾಜ್ಯಗಳಲ್ಲೂ ಅಂಚೆ ಮತ ಎಣಿಕೆ ಆರಂಭ. ಮೊದಲ 15 ನಿಮಿಷಗಳಲ್ಲೇ ಮೊದಲ ಫಲಿತಾಂಶ ಬರುವ ನಿರೀಕ್ಷೆ.

7.55: ಮಹಾರಾಷ್ಟ್ರದ 269 ಮತ ಎಣಿಕೆ ಕೇಂದ್ರ ಹಾಗೂ ಹರಿಯಾಣದ 57 ಕೇಂದ್ರಗಳಲ್ಲಿ ಮತಯಂತ್ರಗಳಲ್ಲಿ ದಾಖಲಾಗಿರುವ ಮತಗಳಎಣಿಕೆ ಆರಂಭವಾಗಲಿದೆ.

Counting begins; Postal Ballots to be counted first

7.50: ಮಹಾರಾಷ್ಟದಲ್ಲಿ ಒಟ್ಟು 4,119 ಅಭ್ಯರ್ಥಿಗಳು 288 ಅಸೆಂಬ್ಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಹರಿಯಾಣದಲ್ಲಿ 1,351 ಅಭ್ಯರ್ಥಿಗಳ 90 ಕ್ಷೇತ್ರಗಳ ಭವಿಷ್ಯ ನಿರ್ಧಾರವಾಗಲಿದೆ.

7.45: ಚುನಾವಣೋತ್ತರ ಫಲಿತಾಂಶದಲ್ಲಿ ಹರ್ಯಾಣ ಹಾಗೂ ಮಹಾರಾಷ್ಟ್ರ ಉಭಯ ರಾಜ್ಯಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂಬ ಸುದ್ದಿ ಬಂದಿತ್ತು. [ಮತದಾನೋತ್ತರ ಸಮೀಕ್ಷೆ ವಿವರ ಇಲ್ಲಿದೆ]

7.40: ಅ.15 ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರದಲ್ಲಿ 63.13% ಹಾಗೂ ಹರ್ಯಾಣದಲ್ಲಿ 76.54% ಮತದಾನ ದಾಖಲಾಗಿತ್ತು.

7.30: ಭಾನುವಾರ ಸಂಜೆ 6 ಗಂಟೆ ಬಿಜೆಪಿಯ ಸಂಸದೀಯ ಸಮಿತಿ ಸಭೆ ನಿಗದಿಯಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ತಮ್ಮ ಶಕ್ತಿ ಏನೆಂದು ಚುನಾವಣೆ ಮೂಲಕ ತೋರಿಸಲಿವೆ. [ಮೈತ್ರಿಗೆ ಶಿವಸೇನಾ ಓಕೆ, ಬಿಜೆಪಿ ಕೇಳ್ತಿದೆ ಏಕೆ?] ಹರ್ಯಾಣದ ಹಿಸಾರ್ ಕ್ಷೇತ್ರ ಸೇರಿದಂತೆ ಅನೇಕ ಸೂಕ್ಷ್ಮ ಮತಗಟ್ಟೆಗಳ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ

English summary
Maharashtra and Haryana Assembly Election Verdict: BJP gets big mandate in Haryana, emerges largest party in Maharashtra. The results are the deciding factor of whether the alliances will be taken back or they should remain independent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X