ಮಿಸ್ ವರ್ಲ್ಡ್ ಗೋಸ್ ಟು.. ಇಂಡಿಯಾ! ಪ್ರಶಸ್ತಿ ಗೆದ್ದ ಹರ್ಯಾಣದ ಚೆಲುವೆ

Written By:
Subscribe to Oneindia Kannada

ಸಾನ್ಯಾ (ಚೀನಾ), ನ 18: ಹರ್ಯಾಣದ ಮೆಡಿಕಲ್ ವಿದ್ಯಾರ್ಥಿನಿ ಮನೂಷಿ ಚಿಲ್ಲರ್ 'ವಿಶ್ವಸುಂದರಿ - 2017' ಸ್ಪರ್ಧೆ ಗೆದ್ದಿದ್ದಾರೆ. ಹದಿನೇಳು ವರ್ಷಗಳ ನಂತರ ಈ ಪ್ರಶಸ್ತಿ ಭಾರತಕ್ಕೆ ಒಲಿದಿದ್ದು, ಇಸವಿ 2000ರಲ್ಲಿ ಪ್ರಿಯಾಂಕ ಚೋಪ್ರಾ ವಿಶ್ವ ಸುಂದರಿ ಕಿರೀಟ ತೊಟ್ಟಿದ್ದರು.

ವಿಶ್ವದ ವಿವಿಧ ಭಾಗಗಳಿಂದ 108 ಸುಂದರಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಶ್ವಸುಂದರಿ ಸ್ಪರ್ಧೆ ಗೆದ್ದ ಮನೂಷಿಯವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

India's Manushi Chhillar Wins Miss World 2017 at China

ಮಿಸ್ ಇಂಗ್ಲೆಂಡ್ ಸ್ಟೀಫನ್ ಹಿಲ್ ಮೊದಲ ರನ್ನರ್ ಅಪ್, ಮಿಸ್ ಮೆಕ್ಸಿಕೋ ಆಂಡ್ರಿಯಾ ಮೇಜಾ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮನೂಷಿ ತಂದೆ DRDO ಉದ್ಯೋಗಿಯಾಗಿದ್ದಾರೆ.

ಅತ್ಯುತ್ತಮ ಐವರು ಪ್ರಶಸ್ತಿ ಸುತ್ತಿಗೆ ಆಯ್ಕೆಯಾದ ನಂತರದ, ಪ್ರಶ್ನಾವಳಿ ರೌಂಡ್ ನಲ್ಲಿ, ಅತೀ ಹೆಚ್ಚು ಸಂಬಳ ಬರುವ ಯಾವ ಉದ್ಯೋಗವನ್ನು ಆಯ್ಕೆ ಮಾಡಲು ಬಯಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಮನೂಷಿ, ತಾಯಿ ಎಲ್ಲದಕ್ಕಿಂತಲೂ ನನಗೆ ಮುಖ್ಯ ಎಂದು ಉತ್ತರಿಸಿದ್ದಾರೆ.

ದುಡ್ಡು ಮುಖ್ಯವಲ್ಲ, ತಾಯಿ ತೋರಿಸುವ ಪ್ರೀತಿ ಬೆಲೆಕಟ್ಟಲಾಗದದ್ದು. ನನ್ನ ಜೀವನದಲ್ಲಿ ಆಕೆಯೇ ದೊಡ್ಡ ಸ್ಪೂರ್ತಿ. ಇವತ್ತು ಈ ಪ್ರಶಸ್ತಿ ಗೆಲ್ಲಲು ಆಕೆ ಕೊಟ್ಟ ಬೆಂಬಲವೇ ಕಾರಣ. ನನ್ನನ್ನು ಬೆಂಬಲಿಸಿದ ಮತ್ತು ನಾನು ಈ ಪ್ರಶಸ್ತಿ ಗೆಲ್ಲಬೇಕೆಂದು ಪ್ರಾರ್ಥಿಸಿದ ಎಲ್ಲರಿಗೂ ಥ್ಯಾಂಕ್ಸ್ ಎಂದು ಮನೂಷಿ ಭಾವೋದ್ವೇಗಕ್ಕೆ ಒಳಗಾದರು.

ರಾಜ್ಯದ ಮಗಳು ಮನೂಷಿ ಚಿಲ್ಲರ್ ಈ ಪ್ರಶಸ್ತಿ ಗೆದ್ದಿದ್ದಕ್ಕೆ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆಂದು ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಮನೂಷಿಯವರನ್ನು ಅಭಿನಂದಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's Manushi Chhillar won the Miss World beauty pageant for the year 2017. The win comes 17 years after Priyanka Chopra brought home the coveted title in the year 2000.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ