Haryana Assembly Election 2024 Exit Polls: ಹರಿಯಾಣದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು, ಬಿಜೆಪಿಗೆ ಭಾರೀ ಮುಖಭಂಗ
Haryana Assembly Election 2024 Exit Poll: ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಯ ಮತದಾನ ಶನಿವಾರ (ಅಕ್ಟೋಬರ್ 05) ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಅಂದು ಸಂಜೆಯೇ ವಿವಿಧ ಸುದ್ದಿ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದವು. ಬಹುತೇಕ ಸುದ್ದಿ ಸಂಸ್ಥೆಗಳ ಸಮೀಕ್ಷೆ ಪ್ರಕಾರ, ಇಲ್ಲಿ ಕಾಂಗ್ರೆಸ್ ಗೆದ್ದು ಬೀಗಲಿದ್ದು, ಬಿಜೆಪಿಗೆ ಭಾರೀ ಮುಖಭಂಗ ಆಗಿದೆ.
ಬಹುತೇಜ ಸುದ್ದಿ ಸಂಸ್ಥೆಗಳು ನಡೆಸಿರುವ ಸಮೀಕ್ಷೆ ಪ್ರಕಾರ, 90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದು, ಆಢಳಿತರೂಢ ಬಿಜೆಪಿ ಭಾರೀ ಕಡಿಮೆ ಸ್ಥಾನಗಳನ್ನು ಪಡೆಯುವ ಮೂಲಕ ಬಾರೀ ಭಾರೀ ಮುಖಭಂಗ ಅನುಭವಿಸಲಿದೆ.

ರಿಬಬ್ಲಿಕ್ ಭಾರತ್ ಮ್ಯಾಟ್ರಿಜ್ ಮತದಾನೋತ್ತರ ಸಮೀಕ್ಷೆ ಪ್ರಕಾರ 90ರಲ್ಲಿ ಕಾಂಗ್ರೆಸ್ 55-62 ಸ್ಥಾನಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಲಿದೆ. ಇನ್ನು ಆಡಳಿತರೂಢ ಬಿಜೆಪಿ ಕೇವಲ 18-24 ಸ್ಥಾನಗಳನ್ನು ಪಡೆದು ಭಾರೀ ಮುಖಭಂಗ ಅನುಭವಿಸಲಿದೆ. ಇತರರು 2-5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದರೆ, ಜನನಾಯಕ್ ಜನತಾ ಪಕ್ಷ 0-3 ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿಸಿದೆ.
ದೈನಿಕ್ ಭಾಸ್ಕರ್ ಸಮೀಕ್ಷೆ ಪ್ರಕಾರ, 90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ 44-54 ಸ್ಥಾನ ಪಡೆಯುವ ಮೂಲಕ ಗೆದ್ದು ಬೀಗಿದೆ. ಬಿಜೆಪಿ 15-29, ಜೆಜೆಪಿ+ 0-1, ಐಎನ್‌ಎಲ್‌ಡಿ+ 1-5, ಇತರೆ 4-9 ಸ್ಥಾನಗಳನ್ನು ಪಡೆದಿದೆ.
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 53-65 ಸ್ಥಾನಗಳನ್ನು ಪಡದು ಗೆಲುವು ಸಾಧಿಸಲಿದೆ. ಬಿಜೆಪಿ 18-28 ಸ್ಥಾನಗಳನ್ನು ಪಡೆಯುವ ಮುಲಕ ಸೋಲನುಭವಿಸಲಿದೆ.
ಆಡಳಿತ ವಿರೋಧಿತನ ಇಲ್ಲ ಎಂದು ಹೇಳಿಕೊಂಡು ಬಂದಿರುವ ಬಿಜೆಪಿಗೆ ಈ ಫಲಿತಾಂಶಗಳು ದೊಡ್ಡ ಆಘಾತ ನೀಡುವಂತಿದೆ.
ಸಮೀಕ್ಷೆಗಳ ಪ್ರಕಾರ ಇಲ್ಲಿ ಕಾಂಗ್ರೆಸ್ ಗೆದ್ದು ಬೀಗಿದರೆ, ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂದು ಕುತೂಹಲ ಎಂಬುದು ಕೆರಳಿಸಿದೆ.
ಈಗಾಗಲೇ ಹಿರಿಯ ಕಾಂಗ್ರೆಸ್ ನಾಯಕಿ ಕುಮಾರಿ ಸೆಲ್ಜಾ ನಾನೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ಶುಕ್ರವಾರ ಮಾತನಾಡಿದ ಅವರು, ನಾನು ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ. ಪಕ್ಷದ ವರಿಷ್ಠರು ನನ್ನ ಹೆಸರನ್ನು ಪರಿಗಣಿಸಲಿದ್ದಾರೆ ಎಂದು ಅಚ್ಚರಿ ಹೇಳಿ ನೀಡಿ ಗಮನ ಸೆಳೆದಿದ್ದರು.
ಅಲ್ಲದೆ, ಚುನಾವಣೆಯ ಪೂರ್ವದಲ್ಲಿ, ಸೆಲ್ಜಾ ಅವರು ತಮ್ಮ ಅವಕಾಶಗಳ ಕುರಿತು ಪ್ರತಿಕ್ರಿಯಿಸುತ್ತಾ, ಚುನಾವಣೆ ನಂತರವೇ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ. ಪಕ್ಷಕ್ಕೆ ನಾನು ನೀಡಿರುವ ಸೇವೆ ಪರಿಗಣಿಸಿ ನನ್ನ ಹೆಸರನ್ನು ಪರಿಗಣಿಸುವ ವಿಶ್ವಾಸವಿದೆ ಎಂದು ಹೇಳಿದ್ದರು.
ದಲಿತ ವರ್ಗಕ್ಕೆ ಸೇರಿದ ಸಿರ್ಸಾ ಸಂಸದೆ ಕುಮಾರಿ ಸೆಲ್ಜಾ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ಹೂಡಾ ಕುಟುಂಬದ ಆಧಿಪತ್ಯ ಪ್ರಶ್ನಿಸಿ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು. ಬಹಿರಂಗ ಪ್ರಚಾರ ಅಂತ್ಯಕ್ಕೂ ಮೊದಲು ಗುರುವಾರ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದು, ಬಳಿಕ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ್ದರು.
ಹರಿಯಾಣದಲ್ಲಿ ಅಕ್ಟೋಬರ್ 5ರಂದು ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಸಂಜೆ 5 ಗಂಟೆವರೆಗೆ ಶೇಕಡ 61ರಷ್ಟು ಮತದಾನ ನಡೆದಿದೆ. ಅಕ್ಟೋಬರ್ 8ರಂದು ಹರಿಯಾಣದ ಜೊತೆಗೆ ಜಮ್ಮು-ಕಾಶ್ಮೀರ ಚುನಾವಣೆಯ ಮತ ಎಣಿಕೆಯೂ ನಡೆಯಲಿದೆ. ಆಗ ಯಾವ ಪಕ್ಷ ಹಹೆವು ಸಾಧಿಸಲಿದೆ ಎಂದು ನಿಖರ ಉತ್ತರ ಸಿಗಲಿದೆ. ಮತ್ತೊಂದೆಡೆ ಇನ್ನುಳಿದ ಸುದ್ದಿ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳಲ್ಲಿ ಯಾವ ಪಕ್ಷ ಗೆಲುವು ಸಾಧಿಸಲಿದೆ ಎಂದು ಇಲ್ಲಿ ತಿಳಿಯಿರಿ.
ಧ್ರುವ್ ರಿಸರ್ಚ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 50-60 ಸ್ಥಾನಗಳನ್ನು ಪಡೆಯಲಿದೆ. ಇದು ಬಹುಮತದ 46ಕ್ಕಿಂತ ಹೆಚ್ಚು ಆಗಿದೆ. ಇನ್ನು ಬಿಜೆಪಿಗೆ 22-32 ಸ್ಥಾನಗಳನ್ನು ಗೆಲ್ಲಲಿದ ಎಂದು ತಿಳಿಸಿದೆ.
ರಿಪಬ್ಲಿಕ್ ಟಿವಿ-ಪಿ-ಮಾರ್ಕ್
* ಕಾಂಗ್ರೆಸ್ 51-61
* ಬಿಜೆಪಿಗೆ ಕೇವಲ 27-35
ಇಂಡಿಯಾ ಟುಡೇ-ಸಿ ವೋಟರ್ ಸಮೀಕ್ಷೆ
* ಕಾಂಗ್ರೆಸ್ 50-58
* ಬಿಜೆಪಿಗೆ 20-28
ಪೀಪಲ್ಸ್ ಪಲ್ಸ್ ಸಮೀಕ್ಷೆ
* ಕಾಂಗ್ರೆಸ್ 49-61
* ಬಿಜೆಪಿ 20-32
ಮತದಾನಕ್ಕೆ ಕೆಲವು ದಿನಗಳ ಮೊದಲು, ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದಕ್ಕಾಗಿ ಬಿಜೆಪಿ ಎಂಟು ಬಂಡಾಯಗಾರರನ್ನು ಪಕ್ಷದಿಂದ ಹೊರಹಾಕಿತ್ತು. ಮತ್ತೊಂದೆಡೆ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ 13 ನಾಯಕರನ್ನು ಪಕ್ಷದಿಂದ ಉಚ್ಚಾಟಿಸುವ ಮೂಲಕ ಕಾಂಗ್ರೆಸ್ ಕೂಡ ಭಿನ್ನಮತದ ಹೊಡೆತಕ್ಕೆ ಸಿಲುಕಿತ್ತು.












Click it and Unblock the Notifications