ಕಾಂಗ್ರೆಸ್ ಕೊಡಲ್ಲ, ಹಾರ್ದಿಕ್ ಬಿಡಲ್ಲ; ಸೀಟಿಗಾಗಿ ಗುಜರಾತಿನಲ್ಲಿ ಕಚ್ಚಾಟ
ಅಹಮದಾಬಾದ್, ನವೆಂಬರ್ 19: ಪಾಟೀದಾರ್ ಅನಾಮತ್ ಆಂದೋಲನ ಸಮಿತಿ ಮತ್ತು ಕಾಂಗ್ರೆಸ್ ನಡುವಿನ ಸೀಟು ಹೊಂದಾಣಿಕೆ ಶನಿವಾರವೂ ಮುಗಿದಿಲ್ಲ. ಹಾರ್ದಿಕ್ ಪಟೇಲ್ ಬಣ 9 ಸೀಟಿಗಾಗಿ ಬೇಡಿಕೆ ಇಟ್ಟಿದ್ದು ಕಾಂಗ್ರೆಸ್ ಕೇವಲ 4 ಸೀಟು ನೀಡಲು ಸಿದ್ಧವಾಗಿದೆ.
ಟಿಕೆಟ್ ಹಂಚಿಕೆ ಮತ್ತು ಮೀಸಲಾತಿಗೆ ಸಂಬಂಧಿಸದಂತೆ ಚರ್ಚೆ ನಡೆಸಲು ಪಾಟೀದಾರ್ ನಾಯಕರು ಶುಕ್ರವಾರ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದರು. ನಂತರ ಸಂಜೆ ವೇಳೆ ಪಾಟೀದಾರ್ ನಾಯಕರು ಮೀಸಲಾತಿ ಸಂಬಂಧಿಸಿದಂತೆ ಕಾಂಗ್ರೆಸ್ ಗೆ ನಿರ್ಧಾರ ತಿಳಿಸಲು 24 ಗಂಟೆ ಗಡುವು ನೀಡಿದ್ದರು. ಇಲ್ಲದಿದ್ದರೆ ಪ್ರತಿಭಟನೆ ಎದುರಿಸಿ ಎಂದು ಎಚ್ಚರಿಕೆ ನೀಡಿದ್ದರು.

"ಪಾಟೀದಾರರ ಬಾಹುಳ್ಯದ ಅಹಮದಾಬಾದ್, ಉತ್ತರ ಗುಜರಾತ್ ಮತ್ತು ಸೌರಾಷ್ಟ್ರದಲ್ಲಿ 9 ಟಿಕೆಟ್ ಗಳನ್ನು ನೀಡುವಂತೆ ಕಾಂಗ್ರೆಸ್ ಗೆ ಬೇಡಿಕೆ ಇಟ್ಟಿದ್ದೆವು," ಎಂದು 'ಪಾಸ್' ಮೂಲಗಳು ಹೇಳಿದ್ದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಆದರೆ, "ಪಾಸ್ ನಾಯಕರಿಗೆ ಟಿಕೆಟ್ ನೀಡುವ ಸಂಬಂಧ ಚರ್ಚೆ ನಡೆದಿಲ್ಲ," ಎಂದು ಗುಜರಾತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಭರತ್ ಸಿನ್ಹಾ ಸೋಲಂಕಿ ಹೇಳಿದ್ದಾರೆ.












Click it and Unblock the Notifications