ಗುಜರಾತ್ ಸರ್ಕಾರದಲ್ಲಿ ಬಿರುಕು ಮೂಡಿಸುತ್ತಿರುವ ಹಾರ್ದಿಕ್
Recommended Video

ಅಹಮದಾಬಾದ್, ಡಿಸೆಂಬರ್ 30: ಬಿಜೆಪಿ ಮೇಲೆ ಜಿದ್ದಿಗೆ ಬಿದ್ದಿರುವ ಪಾಟೀದಾರ್ ಅನಾಮತ್ ಹೋರಾಟ ನಾಯಕ ಹಾರ್ದಿಕ್ ಪಟೇಲ್ ಗುಜರಾತ್ ನಲ್ಲಿ ಬಿಜೆಪಿ ಸರ್ಕಾರ ಬೀಳಿಸಲು ಹೊಸ ತಂತ್ರ ಹೂಡಿದ್ದಾರೆ.
ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ತಮ್ಮ ಹತ್ತು ಬೆಂಬಲಿಗ ಶಾಸಕರೊಂದಿಗೆ ಪಕ್ಷ ತ್ಯಜಿಸಿ ಬಂದರೆ ನಾನು ಕಾಂಗ್ರೆಸ್ ಜೊತೆ ಮಾತನಾಡಿ ಅವರಿಗೆ ಉತ್ತಮ ಸ್ಥಾನ ಕೊಡಿಸುವ ಜವಾಬ್ದಾರಿ ಹೊರುತ್ತೇನೆ ಎಂದಿದ್ದಾರೆ.

ನಿತಿನ್ ಪಟೇಲ್ ಗೆ ಬಿಜೆಪಿಯಲ್ಲಿ ಗೌರವ ಸಿಗುತ್ತಿಲ್ಲ ಎಂದಮೇಲೆ ಅವರು ನಮ್ಮ ಜೊತೆ (ಪಾಟೀದಾರ್ ಅನಾಮತ್) ಕೈಜೋಡಿಸಬಹುದು' ಎಂದು ಅವರು ಹೇಳಿದ್ದಾರೆ.
ಖಾತೆ ಹಂಚಿಕೆ ಬಗ್ಗೆ ನಿತಿನ್ ಪಟೇಲ್ ಅಸಮಾಧಾನ ಹೊಂದಿದ್ದು, ಅವರು ಇನ್ನೂ ತಮಗೆ ನೀಡಿರುವ ಖಾತೆಯನ್ನು ಅಧಿಕೃತವಾಗಿ ವಹಿಸಿಕೊಂಡಿಲ್ಲ, ಗಾಂಧಿನಗರದಲ್ಲಿ ನಡೆದ ಪದವಿ ಸ್ವೀಕಾರ ಸಮಾರಂಭಕ್ಕೂ ಅವರು ಗೈರಾಗಿದ್ದರು. ಹೀಗಾಗಿ ಹಾರ್ದಿಕ್ ಪಟೇಲ್ ಈ ಸಮಯದ ಲಾಭ ಪಡೆಯಲು ಮುಂದಾಗಿದ್ದಾರೆ.
If Gujarat Deputy CM #NitinPatel along with 10 MLAs is ready to leave BJP, then will talk to Congress to get him a good position. If BJP does not respect him, he should leave the party: Hardik Patel in Gujarat's Sarangpur pic.twitter.com/cFlORE7Yqu
— ANI (@ANI) December 30, 2017
ನಿತಿನ್ ಪಟೇಲ್ ಮತ್ತು ಆನಂದಿಬೇನ್ ಪಟೇಲ್ ಮುನಿಸಿನ ನಂತರ ಈಗ ಹಾರ್ದಿಕ್ ಪಟೇಲ್ ಬಹಿರಂಗ ಆಹ್ವಾನ ನೀಡಿರುವುದು ಗುಜರಾತ್ ರಾಜಕೀಯದಲ್ಲಿ ಏರುಪೇರಾಗುವ ಸಂಭವದ ಮುನ್ಸೂಚನೆ ನೀಡುತ್ತಿದೆ.

ಗುಜರಾತ್ ಕಾಂಗ್ರೆಸ್ ನ ಅಧ್ಯಕ್ಷ ಭಾರತಿ ಸಿಂಗ್ ಸೋಲಂಕಿ ಕೂಡ ಈ ಬಗ್ಗೆ ಮಾತನಾಡಿದ್ದು, ಮೊದಲು ಆನಂದಿಬೇನ್ ಪಟೇಲ್ ಅನ್ನು ಗುಜರಾತ್ ಬಿಜೆಪಿ ಮೂಲೆಗುಂಪು ಮಾಡಿತು ಈಗ ನಿತಿನ್ ಪಟೇಲ್ ರನ್ನು ಮೂಲೆ ಗುಂಪು ಮಾಡಿದೆ, ನಿತಿನ್ ಪಟೇಲ್ ಹಾಗೂ ಇನ್ನು ಕೆಲವು ಶಾಸಕರ ಬೆಂಬಲ ಸಿಕ್ಕರೆ ಗುಜರಾತ್‌ನ ಹಿತದೃಷ್ಠಿಯಿಂದ ನಾವು ಸರ್ಕಾರ ರಚನೆ ಮಾಡಲು ಮುಂದಾಗುತ್ತೇವೆ ಎಂದು ಹೇಳಿದ್ದಾರೆ.
ನಿತಿನ್ ಪಟೇಲ್ ತಮ್ಮ ಬೆಂಬಲಿಗ ಶಾಸಕರೊಂದಿಗೆ ಪಕ್ಷ ಬಿಜೆಪಿ ತ್ಯಜಿಸಿದಲ್ಲಿ ಸರ್ಕಾರ ಬಿದ್ದು ಹೋಗಿ ಚೆಂಡು ಕಾಂಗ್ರೆಸ್ ಅಂಗಳಕ್ಕೆ ಬರುತ್ತದೆ.
-
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು?












Click it and Unblock the Notifications