ಅರುಣಾಚಲ ಪ್ರದೇಶದಲ್ಲಿ ಹೆಚ್‌ಎಎಲ್‌ನ ಪ್ರಯಾಣಿಕ ವಿಮಾನ ಹಾರಾಟ

ಇಟಾನಗರ್, ಏಪ್ರಿಲ್ 11; ಉಡಾನ್ ಯೋಜನೆಯಡಿ ಅರುಣಾಚಲ ಪ್ರದೇಶದಲ್ಲಿ ವಿಮಾನ ಸೇವೆ ಆರಂಭವಾಗುತ್ತಿದೆ. ಏಪ್ರಿಲ್ 12ರಿಂದ ಹೆಚ್‌ಎಎಲ್ ನಿರ್ಮಿತ ಲಘು ಪ್ರಯಾಣಿಕ ವಿಮಾನ ಹಾರಾಟ ನಡೆಸಲಿದೆ. ಅಲಯನ್ಸ್‌ ಏರ್ ಈ ವಿಮಾನ ಸೇವೆಯನ್ನು ಆರಂಭಿಸುತ್ತಿದೆ.

ಅಸ್ಸಾಂನ ದಿಬ್ರೂಘರ್‌ನಿಂದ ಅರುಣಾಚಲ ಪ್ರದೇಶದ ಪಾಸಿಘಾಟ್ ನಡುವೆ ದೇಶಿಯ ನಿರ್ಮಿತ ವಿಮಾನ ಹಾರಾಟ ನಡೆಸಲಿದೆ. ಪ್ರಾಯೋಗಿಕವಾಗಿ ಉಭಯ ನಗರಗಳ ನಡುವೆ ಹೆಚ್‌ಎಎಲ್ ನಿರ್ಮಿತ Dornier Do-228 ವಿಮಾನ ಸಂಚಾರ ನಡೆಸಲಿದೆ.

ದೇಶಿಯ ನಿರ್ಮಿತ ಮೊದಲ ಪ್ರಯಾಣಿಕ ವಿಮಾನ ಹಾರಾಟಕ್ಕೆ ಮಂಗಳವಾರ ಚಾಲನೆ ದೊರೆಯಲಿದೆ. ಇದರ ಜೊತೆಗೆ ಈಶಾನ್ಯ ಪ್ರದೇಶದ ಮೊದಲ ವಿಮಾನ ಹಾರಾಟ ತರಬೇತಿ ಕೇಂದ್ರವನ್ನು ಸಹ ಅಸ್ಸಾಂನಲ್ಲಿ ಆರಂಭಿಸಲಾಗುತ್ತಿದೆ.

HAL Aircraft To Fly From Dibrugarh To Pasighat

ಎರಡೂ ಕಾರ್ಯಕ್ರಮಗಳನ್ನು ಕೇಂದ್ರ ವಿಮಾನಯಾನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಉದ್ಘಾಟಿಸಲಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಮತ್ತು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈಶಾನ್ಯ ಭಾರತದ ರಾಜ್ಯಗಳಿಗೆ ವಿಮಾನಯಾನ ಸೇವೆ ಆರಂಭಿಸಲು ವಿಮಾನಯಾನ ಸಚಿವಾಲಯ ಕೆಲವು ದಿನಗಳ ಹಿಂದೆ ಒಪ್ಪಿಗೆ ನೀಡಿತ್ತು. ರಾಜ್ಯಗಳಿಗೆ ವಿಮಾನ ಸೇವೆ ಒದಗಿಸುವ ಜೊತೆಗೆ ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವುದು ಸರ್ಕಾರದ ಗುರಿಯಾಗಿದೆ.

ಪ್ರಾಯೋಗಿಕ ಹಾರಾಟ; ದಿಬ್ರೂಘರ್‌-ಪಾಸಿಘಾಟ್ ನಡುವೆ ಹೆಚ್‌ಎಎಲ್ ನಿರ್ಮಿತ Dornier Do-228 17 ಆಸನಗಳ ವಿಮಾನ ಪ್ರಾಯೋಗಿಕವಾಗಿ ಸಂಚಾರ ನಡೆಸಲಿದೆ. ಈ ಯೋಜನೆ ಯಶಸ್ವಿಯಾದರೆ ಬೇರೆ ನಗರಗಳಿಗೂ ಉಡಾನ್ ಯೋಜನೆಯಡಿ ಸಂಪರ್ಕ ಕಲ್ಪಿಸಲಾಗುತ್ತದೆ.

ಎರಡನೇ ಹಂತದಲ್ಲಿ ತೇಜು, ವಿಜಯನಗರ ಸೇರಿದಂತೆ ವಿವಿಧ ಪ್ರದೇಶಗಳಿಂದ ವಿಮಾನ ಸೇವೆ ಆರಂಭಿಸಲು ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ. ಈ ವಿಮಾನ ಸೇವೆಯಿಂದ ಈಶಾನ್ಯ ರಾಜ್ಯಗಳ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ನಿರೀಕ್ಷೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+