ಏನಿದು ಕಾರ್ಬನ್ ಡೇಟಿಂಗ್? ಈ ವೈಜ್ಞಾನಿಕ ಪ್ರಕ್ರಿಯೆ ಹೇಗೆ ನಡೆಯುತ್ತೆ?
ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದಿರುವ 'ಶಿವಲಿಂಗ'ದ ಕಾರ್ಬನ್ ಡೇಟಿಂಗ್ ಪರಿಶೀಲನೆ ಕೋರಿ ಸಲ್ಲಿಸಿದ ಮನವಿಯ ಕುರಿತು ಅಕ್ಟೋಬರ್ 14 ರಂದು ತೀರ್ಪು ನೀಡಿದೆ. ಸದ್ಯಕ್ಕೆ ಕಾರ್ಬನ್ ಡೇಟಿಂಗ್ ನಡೆಸಲು ಕೋರ್ಟ್ ಅನುಮತಿ ನೀಡಿಲ್ಲ.
ಶಿವಲಿಂಗದಂತಿರುವ ವಸ್ತುವಿನ ವಯಸ್ಸನ್ನು ಕಂಡುಹಿಡಿಯಲು ಕಾರ್ಬನ್ ಡೇಟಿಂಗ್ ಅನ್ನು ಬಳಸಲು ಹಿಂದೂ ಕಡೆಯವರು ಮನವಿ ಮಾಡಿದ್ದಾರೆ. ಇದರಿಂದ ಶಿವಲಿಂಗದಂತಿರುವ ವಸ್ತುವಿನ ವಯಸ್ಸನ್ನು ಕಂಡು ಹಿಡಿಯಲು ಸಾಧ್ಯವಾಗುತ್ತದೆ. ಜೊತೆಗೆ ಅದು ಯಾರ ಆಳ್ವಿಕೆಯ ಕಾಲದಲ್ಲಿತ್ತು ಎನ್ನುವ ಸ್ಪಷ್ಟನೆ ಸಿಗುತ್ತದೆ. ಇದರಿಂದ ಶಿವಲಿಂಗದಂತಿರುವ ರಚನೆಯ ಬಗ್ಗೆ ಮಾಹಿತಿ ಸಿಗಲಿದೆ ಎಂದು ಮನವಿ ಮಾಡಲಾಗಿದೆ.
ಕಾರ್ಬನ್ ಡೇಟಿಂಗ್ ಎನ್ನುವುದು ಪುರಾತತ್ತ್ವ ಶಾಸ್ತ್ರದ ವಸ್ತು ಅಥವಾ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ವಯಸ್ಸನ್ನು (ಪ್ರಾಚೀನತೆ) ಕಂಡುಹಿಡಿಯುವ ವಿಧಾನವಾಗಿದೆ. ಸೆಪ್ಟೆಂಬರ್ 22 ರಂದು, ಹಿಂದೂ ಕಡೆಯವರು ಶಿವಲಿಂಗದಂತಹ ರಚನೆಯ ಕಾರ್ಬನ್ ಡೇಟಿಂಗ್ ಮತ್ತು ಇತರ ವೈಜ್ಞಾನಿಕ ಪರೀಕ್ಷೆಗಳನ್ನು ಒತ್ತಾಯಿಸಿದರು. ಇದನ್ನು ಮುಸ್ಲಿಂ ಕಡೆಯ ಅಂಜುಮನ್ ಇನಾಝಾನಿಯಾ ಮಸಾಜಿದ್ ಕಮಿಟಿ ಮಾತ್ರವಲ್ಲದೆ, ಹಿಂದೂ ಕಡೆಯ ಫಿರ್ಯಾದಿ ನಂಬರ್ ಒನ್ ರಾಖಿ ಸಿಂಗ್ ಕೂಡ ವಿರೋಧಿಸಿದ್ದಾರೆ. ಕಾರ್ಬನ್ ಡೇಟಿಂಗ್ ರಚನೆಗೆ ಹಾನಿಯಾಗುತ್ತದೆ ಎಂದು ವಕೀಲರು ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು. ಸದ್ಯ ತೀರ್ಪಿಗೂ ಮುನ್ನ ಕಾರ್ಬನ್ ಡೇಟಿಂಗ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ? ಎನ್ನುವುದನ್ನು ತಿಳಿಯೋಣ.
ಕಾರ್ಬನ್ ಡೇಟಿಂಗ್ ಎಂದರೇನು?
ಹುಟ್ಟಿದ ವರ್ಷದ ಆಧಾರದ ಮೇಲೆ ಮನುಷ್ಯರ ವಯಸ್ಸನ್ನು ಕಂಡುಹಿಡಿಯುವುದು ಸುಲಭ. ಆದರೆ ವಸ್ತು ಅಥವಾ ಸಸ್ಯಗಳು, ಸತ್ತ ಪ್ರಾಣಿಗಳು ಅಥವಾ ಪಳೆಯುಳಿಕೆ ಅವಶೇಷಗಳು ಎಷ್ಟು ವರ್ಷಗಳ ಇತಿಹಾಸವನ್ನು ಹೊಂದಿದೆ ಎಂದು ತಿಳಿಯುವುದು ಕಷ್ಟ. ಹೀಗಾಗಿ ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ವಸ್ತುಗಳ ಇತಿಹಾಸ ಅರ್ಥಮಾಡಿಕೊಳ್ಳುವಲ್ಲಿ ಕಾರ್ಬನ್ ಡೇಟಿಂಗ್ ಪ್ರಮುಖ ಪಾತ್ರ ವಹಿಸುತ್ತದೆ.

ವಿಜ್ಞಾನಿಗಳು ಕಾರ್ಬನ್ ಡೇಟಿಂಗ್ ಮೂಲಕ ವಸ್ತುಗಳ ಇತಿಹಾಸವನ್ನು ತಿಳಿಯುತ್ತಾರೆ. ವಸ್ತುಗಳ ವಯಸ್ಸನ್ನು ಒದಗಿಸುವ ಪ್ರಕ್ರಿಯೆಗೆ ಇದು ಸಹಕಾರಿಯಾಗಿದೆ. ಇದು ವಸ್ತುಗಳಲ್ಲಿರುವ ಕಾರ್ಬನ್-14 ಪ್ರಮಾಣವನ್ನು ಅಂದಾಜು ಮಾಡುತ್ತದೆ.
ಕಾರ್ಬನ್ ಡೇಟಿಂಗ್ ಎನ್ನುವುದು ಪುರಾತತ್ತ್ವ ಶಾಸ್ತ್ರಜ್ಞರು, ಪ್ಯಾಲಿಯಂಟಾಲಜಿಸ್ಟ್‌ಗಳು ಮತ್ತು ಇತರರು ವಸ್ತುಗಳ ವಯಸ್ಸನ್ನು ಅಂದಾಜು ಮಾಡಲು ಜಾಗತಿಕವಾಗಿ ಬಳಸುವ ಸಾಧನಗಳಲ್ಲಿ ಒಂದಾಗಿದೆ. ಆದಾಗ್ಯೂ, ಬಂಡೆಗಳ ವಯಸ್ಸನ್ನು ಕಂಡುಹಿಡಿಯಲು ಭೂವಿಜ್ಞಾನಿಗಳು ಇದನ್ನು ಬಳಸುವುದಿಲ್ಲ, ಏಕೆಂದರೆ ಕಾರ್ಬನ್ ಡೇಟಿಂಗ್ 50,000 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಬಂಡೆಗಳಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ.

ಎಲ್ಲಾ ಜೀವಿಗಳು ಭೂಮಿಯ ವಾತಾವರಣದ ಮೂಲಕ ಸೂರ್ಯನಿಂದ ಬರುವ ಕಾಸ್ಮಿಕ್ ಕಿರಣಗಳನ್ನು ಎದುರಿಸುತ್ತವೆ. ಈ ಕೆಲವು ಕಾಸ್ಮಿಕ್ ಕಿರಣಗಳು ವಾತಾವರಣದಲ್ಲಿರುವ ಪರಮಾಣುವೊಂದಕ್ಕೆ ಡಿಕ್ಕಿ ಹೊಡೆದು ನಮ್ಮಿಂದ ಹೀರಲ್ಪಡುವ ಕಾರ್ಬನ್-14 ಪರಮಾಣುಗಳನ್ನು ಹೊಂದಿರುವ ದ್ವಿತೀಯ ಕಾಸ್ಮಿಕ್ ಕಿರಣವನ್ನು ಸೃಷ್ಟಿಸುತ್ತವೆ. ಕಾರ್ಬನ್-14 ವಿಕಿರಣಶೀಲವಾಗಿದ್ದು ಸುಮಾರು 5,700 ವರ್ಷಗಳ ಅರ್ಧ-ಜೀವಿತಾವಧಿಯನ್ನು ಹೊಂದಿದೆ.
ವಯಸ್ಸು ಪತ್ತೆಗೆ ಕಾರ್ಬನ್ ಡೇಟಿಂಗ್ ಹೇಗೆ ಸಹಾಯ ಮಾಡುತ್ತದೆ?
ಸಸ್ಯಗಳು, ಪ್ರಾಣಿಗಳು ಮತ್ತು ಮಾನವರು ಸಾಯುತ್ತಿದ್ದಂತೆ, ಇಂಗಾಲ -14 ರ ಸಮತೋಲನ ನಿಲ್ಲಿಸುತ್ತವೆ. ಏಕೆಂದರೆ ಸತ್ತ ಬಳಿಕ ಇಂಗಾಲದ ಹೀರಿಕೊಳ್ಳುವಿಕೆ ಇರುವುದಿಲ್ಲ. ಈ ವೇಳೆ ದೇಹದಲ್ಲಿ ಈಗಾಗಲೇ ಸಂಗ್ರಹವಾದ ಕಾರ್ಬನ್ -14 ಕೊಳೆಯಲು ಪ್ರಾರಂಭಿಸುತ್ತದೆ. ಬಳಿಕ ವಿಜ್ಞಾನಿಗಳು ಇದರ ಮೂಲಕ ವಯಸ್ಸನ್ನು ಕಂಡುಹಿಡಿಯುತ್ತಾರೆ. ಉಳಿದ ಕಾರ್ಬನ್ -14 ಪ್ರಮಾಣವನ್ನು ವಿಶ್ಲೇಷಿಸಲಾಗುತ್ತದೆ.
ಇಂಗಾಲದ ಹೊರತಾಗಿ, ಪೊಟ್ಯಾಸಿಯಮ್ -40 ಕೂಡ ವಿಕಿರಣಶೀಲ ಡೇಟಿಂಗ್‌ಗಾಗಿ ವಿಶ್ಲೇಷಿಸಬಹುದಾದ ಒಂದು ಅಂಶವಾಗಿದೆ. ಪೊಟ್ಯಾಸಿಯಮ್-40 1.3 ಶತಕೋಟಿ ವರ್ಷಗಳ ಅರ್ಧ-ಜೀವಿತಾವಧಿಯನ್ನು ಹೊಂದಿದೆ. ಅದೇ ರೀತಿ, 704 ದಶಲಕ್ಷ ವರ್ಷಗಳ ಅರ್ಧ-ಜೀವಿತಾವಧಿಯೊಂದಿಗೆ ಯುರೇನಿಯಂ -235 ಮತ್ತು 14 ಶತಕೋಟಿ ವರ್ಷಗಳ ಅರ್ಧ-ಜೀವಿತಾವಧಿಯನ್ನು ಹೊಂದಿರುವ ಥೋರಿಯಂ-232 ಅನ್ನು ಬಂಡೆಗಳಂತಹ ವಸ್ತುಗಳನ್ನು ಭೂವೈಜ್ಞಾನಿಕ ವಯಸ್ಸನ್ನು ಅಂದಾಜು ಮಾಡಲು ಬಳಸಲಾಗುತ್ತದೆ.
ಅಕ್ಟೋಬರ್ 14 ರಂದು ಜ್ಞಾನವಾಪಿ ಅರ್ಜಿಯ ತೀರ್ಪನ್ನು ನಿಗದಿಪಡಿಸಲಾಗಿದ್ದು, ಅರ್ಜಿಯನ್ನು ಅನುಮತಿಸಿದರೆ, ಸಂಶೋಧಕರು ವಸ್ತುವನ್ನು ದಿನಾಂಕ ಮಾಡಲು ಯಾವ ವಿಕಿರಣಶೀಲ ಅಂಶವನ್ನು ಹುಡುಕುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ. ಆದರೆ ಸದ್ಯಕ್ಕೆ ಅನುಮತಿ ಸಿಕ್ಕಿಲ್ಲ.












Click it and Unblock the Notifications