ಕಾಶ್ಮೀರದ ಬ್ಯಾಂಕ್ ನಲ್ಲಿ ಎಂಟು ಲಕ್ಷ ದೋಚಿದ ಬಂದೂಕುಧಾರಿಗಳು

Posted By:
Subscribe to Oneindia Kannada

ಕಾಶ್ಮೀರ, ಡಿಸೆಂಬರ್ 8: ಅಪರಿಚಿತ ಬಂದೂಕುಧಾರಿಯೊಬ್ಬ ದಕ್ಷಿಣ ಕಾಶ್ಮೀರದ ಜಮ್ಮು-ಕಾಶ್ಮೀರ ಬ್ಯಾಂಕ್ ಶಾಖೆಯಲ್ಲಿ ಗುರುವಾರ ಮಧ್ಯಾಹ್ನ ಎಂಟು ಲಕ್ಷ ರುಪಾಯಿ ದೋಚಿದ್ದಾನೆ. ಶ್ರೀನಗರಕ್ಕೆ ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಪುಲ್ವಾಮಾದ ಅರಿಹಾಲ್ ಹಳ್ಳಿಯ ಬ್ಯಾಂಕ್ ಶಾಖೆಗೆ ನುಗ್ಗಿದ ನಾಲ್ವರು ಬಂದೂಕುಧಾರಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.

ಬ್ಯಾಂಕ್ ನಿಂದ ಎಂಟು ಲಕ್ಷ ರುಪಾಯಿ ದೋಚಿ ಪರಾರಿಯಾಗುವ ಮುನ್ನ ದುಷ್ಕರ್ಮಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಭದ್ರತಾ ಪಡೆಯು ಸ್ಥಳಕ್ಕೆ ತೆರಳಿದ್ದು, ಬ್ಯಾಂಕ್ ದರೋಡೆ ಬಗ್ಗೆ ಮಾಹಿತಿ ಕಲೆ ಹಾಕಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ವಿವರವನ್ನು ನೀಡಿದ್ದಾರೆ.[ಕ್ಯಾಂಟರ್ ನಲ್ಲಿ ಸಾಗಿಸುತ್ತಿದ್ದ ಒಂದು ಕೋಟಿ ರುಪಾಯಿ ದರೋಡೆ!]

Gunmen loot over Rs. 8 lakh from J&K bank

ನವೆಂಬರ್ 21ರಂದು ಲಷ್ಕರ್ ಇ ತೋಯ್ಬಾದ ಗುಂಪೊಂದು ಮಧ್ಯ ಕಾಶ್ಮಿರದ ಬುಡ್ಗಾಂ ಜಿಲ್ಲೆಯಲ್ಲಿರುವ ಮಲ್ಪೋರಾದ ಜಮ್ಮು-ಕಾಶ್ಮೀರ ಬ್ಯಾಂಕ್ ನ ಶಾಖೆಯಲ್ಲಿ ಹದಿನಾಲ್ಕು ಲಕ್ಷ ರುಪಾಯಿ ದೋಚಿತ್ತು. ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ನೋಟು ರದ್ದು ಘೋಷಣೆ ಮಾಡಿದ ನಂತರ ಭಯೋತ್ಪಾದಕರಿಗೆ ಹಣಕಾಸಿಗೆ ಸಮಸ್ಯೆಯಾಗಿದೆ. ಆದ್ದರಿಂದ ಇಂಥ ದರೋಡೆಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Unidentified gunmen looted over Rs. 8 lakh from a branch of J&K Bank in south Kashmir on Thursday afternoon.
Please Wait while comments are loading...