ಇಂಡಿಯಾ ಟಿವಿ ವಿಎಂಆರ್ ಸಮೀಕ್ಷೆ: ಬಿಜೆಪಿಗೆ 106-116 ಸೀಟುಗಳು ಪಕ್ಕಾ!

Posted By:
Subscribe to Oneindia Kannada

ಅಹಮದಾಬಾದ್, ಡಿಸೆಂಬರ್ 06:ಇಂಡಿಯಾ ಟಿವಿ ವಿಎಂ ಆರ್ ಸಮೀಕ್ಷೆಯಂತೆ ಉತ್ತರ ಗುಜರಾತಿನಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಲಿದೆ. ಆದರೆ, ದಕ್ಷಿಣ ಗುಜರಾತಿನಲ್ಲಿ ಕಾಂಗ್ರೆಸ್ ಮುನ್ನಡೆ ಪಡೆಯಲಿದ್ದು ಬಿಜೆಪಿಗೆ ಆತಂಕ ಸೃಷ್ಟಿಸಿದೆ. ಆದರೆ, ಅಂತಿಮವಾಗಿ 182 ಸ್ಥಾನಗಳ ಪೈಕಿ ಬಿಜೆಪಿ 106 ರಿಂದ 116 ಸ್ಥಾನಗಳನ್ನು ಗಳಿಸಿ ಜಯಭೇರಿ ಬಾರಿಸಲಿದೆ ಎಂದು ವರದಿ ಹೇಳಿದೆ.

ಟೈಮ್ಸ್ ನೌ- ವಿಎಂಆರ್ ಸಮೀಕ್ಷೆಯಲ್ಲೂ ಗುಜರಾತ್ ನಲ್ಲಿ ಬಿಜೆಪಿಗೆ ಬಹುಮತ

ನವೆಂಬರ್ 23 ರಿಂದ ನವೆಂಬರ್ 30ರ ಅವಧಿಯಲ್ಲಿ ಇಂಡಿಯಾ ಟಿವಿ ವಿಎಂ ಆರ್ ಅಭಿಪ್ರಾಯ ಸಂಗ್ರಹದಿಂದ ಹೊರ ಬಂದಿರುವ ಸಮೀಕ್ಷಾ ವರದಿ ಇದಾಗಿದೆ.

ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ: ಗುಜರಾತ್ ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ

* ಶೇ 47 ರಷ್ಟು ಮಂದಿ- ಕಾಂಗ್ರೆಸ್ಸಿಗೆ ದಲಿತರು, ಪಾಟಿದಾರರು, ಒಬಿಸಿ ಸಮುದಾಯವರ ಬೆಂಬಲವಿದೆ ಎಂದಿದ್ದಾರೆ.

* ಶೇ 34ರಷ್ಟು ಮಂದಿ ಬಿಜೆಪಿಗೆ ಸುಲಭ ಜಯ ದಕ್ಕಲಿದೆ ಎಂದಿದ್ದಾರೆ.
* ಶೇ 9 ರಷ್ಟು ಮಂದಿ ಪ್ರಮುಖ ಮೂರು ಜಾತಿಗಳು ಸಮಬಲದ ಹೋರಾಟ ನಡೆಸಿ, ನಿರ್ಣಾಯಕವಾಗಲಿವೆ.
* ಶೇ 55ರಷ್ಟು ಮಂದಿ ಪ್ರಕಾರ ರಾಹುಲ್ ಗಾಂಧಿ ಅವರು ದೇಗುಲಗಳಿಗೆ ಭೇಟಿ ನೀಡಿದ್ದು ಕಾಂಗ್ರೆಸ್ಸಿಗೆ ಲಾಭದಾಯಕವಾಗಲಿದೆ ಎಂದಿದ್ದಾರೆ.
* ಶೇ 45ರಷ್ಟು ಮಂದಿ ರಾಹುಲ್ -ದೇಗುಲ ಭೇಟಿಯನ್ನು ಫ್ಲಾಪ್ ಶೋ ಎಂದಿದ್ದಾರೆ.

ಗುಜರಾತಿನ ಅತಿ ಜನಪ್ರಿಯ ಮುಖ್ಯಮಂತ್ರಿ?

ಗುಜರಾತಿನ ಅತಿ ಜನಪ್ರಿಯ ಮುಖ್ಯಮಂತ್ರಿ?

* ಶೇ 16ರಷ್ಟು ಮಂದಿ ಶಕ್ತಿ ಸಿಂಗ್ ಗೋಹಿಲ್ ಗೆ ಮತ ಹಾಕಿದ್ದರೆ, ಶೇ 7ರಷ್ಟು ಮಂದಿ ಭರತ್ ಸಿಂಗ್ ಸೋಲಂಕಿಗೆ ಪರ ನಿಂತಿದ್ದಾರೆ. ಇತರೆ ಮಂದಿಗೆ ಶೇ 13ರಷ್ಟು ಮತ ಸಿಕ್ಕಿವೆ.
* ಶೇ 7ರಷ್ಟು ಜನರ ವಿಶ್ವಾಸವನ್ನು ಆನಂದಿಬೆನ್ ಪಟೇಲ್ ಹಾಗೂ ನಿತಿನ್ ಪಟೇಲ್ ಗಳಿಸಿದ್ದಾರೆ. ಶೇ 5ರಷ್ಟು ಮತ ಶಂಕರ್ ಸಿಂಗ್ ವಘೇಲಾ ಅವರಿಗೆ ಸಿಕ್ಕಿದೆ.

* ಶೇ 36ರಷ್ಟು ಜನರ ವಿಶ್ವಾಸ ಗಳಿಸಿರುವ ಹಾಲಿ ಸಿಎಂ ವಿಜಯ್ ರೂಪಾನಿ ಅವರು ಅತ್ಯಂತ ಜನಪ್ರಿಯ ಸಿಎಂ ಎನಿಸಿಕೊಂಡಿದ್ದಾರೆ.

ಅಂತಿಮ ಫಲಿತಾಂಶ 182 ಸ್ಥಾನಗಳು

ಅಂತಿಮ ಫಲಿತಾಂಶ 182 ಸ್ಥಾನಗಳು

ನವೆಂಬರ್ 23 ರಿಂದ ನವೆಂಬರ್ 30ರ ಅವಧಿಯಲ್ಲಿ ಇಂಡಿಯಾ ಟಿವಿ ವಿಎಂ ಆರ್ ಅಭಿಪ್ರಾಯ ಸಂಗ್ರಹದಿಂದ ಹೊರ ಬಂದಿರುವ ಸಮೀಕ್ಷಾ ವರದಿಯ ಅಂತಿಮ ಫಲಿತಾಂಶ ಇಂತಿದೆ:
* 106-116 ಸ್ಥಾನಗಳು ಬಿಜೆಪಿಗೆ ಲಭಿಸಲಿದೆ
* 63-73 ಸ್ಥಾನಗಳು ಕಾಂಗ್ರೆಸ್ ಪಾಲಾಗಲಿದೆ.
* 2-4 ಸ್ಥಾನಗಳು ಪಕ್ಷೇತರು ಹಾಗು ಇತರೆ ಅಭ್ಯರ್ಥಿಗಳಿಗೆ ಸಿಗಲಿದೆ.

ಉತ್ತರ ಗುಜರಾತ್ (53 ಸೀಟುಗಳು)

ಉತ್ತರ ಗುಜರಾತ್ (53 ಸೀಟುಗಳು)

ನವೆಂಬರ್ 23 ರಿಂದ ನವೆಂಬರ್ 30ರ ಅವಧಿಯಲ್ಲಿ ಇಂಡಿಯಾ ಟಿವಿ ವಿಎಂ ಆರ್ ಅಭಿಪ್ರಾಯ ಸಂಗ್ರಹದಿಂದ ಹೊರ ಬಂದಿರುವ ಸಮೀಕ್ಷಾ ವರದಿ ಫಲಿತಾಂಶ ಇಲ್ಲಿದೆ.

ಅಭಿಪ್ರಾಯ ಸಂಗ್ರಹ ಸಮೀಕ್ಷೆಯಂತೆ : ಬಿಜೆಪಿ (30-34), ಕಾಂಗ್ರೆಸ್ (18-22), ಇತರೆ (0-2)
ಕಾಂಗ್ರೆಸ್ : 2017 ರಲ್ಲಿ ಶೇ 42ರಷ್ಟು ಮತ, 2012ರಲ್ಲಿ ಶೇ40ರಷ್ಟು ಗಳಿಸಿತ್ತು.
ಬಿಜೆಪಿ : 2017 ರಲ್ಲಿ ಶೇ 47ರಷ್ಟು ಮತ, 2012ರಲ್ಲಿ ಶೇ50ರಷ್ಟು ಗಳಿಸಿತ್ತು.

ಪ್ರಶ್ನೆ : ರಾಹುಲ್ ಪ್ರಚಾರದಿಂದ ಕಾಂಗ್ರೆಸ್ಸಿಗೆ ಲಾಭವಾಗುವುದೆ?

ಪ್ರಶ್ನೆ : ರಾಹುಲ್ ಪ್ರಚಾರದಿಂದ ಕಾಂಗ್ರೆಸ್ಸಿಗೆ ಲಾಭವಾಗುವುದೆ?

* ಶೇ 24ರಷ್ಟು ಮಂದಿ ಪ್ರಕಾರ ರಾಹುಲ್ ಗಾಂಧಿ ಅವರ ಪ್ರಚಾರ ಹಾಗೂ ಸಿಎಂ ಅಭ್ಯರ್ಥಿ ಘೋಷಣೆಯಿಂದ ಲಾಭವಿದೆ ಎಂದಿದ್ದಾರೆ.
* ಶೇ 39ರಷ್ಟು ಮಂದಿ ರಾಹುಲ್ ಗಾಂಧಿಯ ಪ್ರಚಾರ ದೊಡ್ಡ ಫ್ಲಾಪ್ ಶೋ ಎಂದು ಅಭಿಪ್ರಾಯಪಟ್ಟಿದ್ದಾರೆ.
* ಶೇ 37ರಷ್ಟು ಮಂದಿ ಕಾಂಗ್ರೆಸ್ ಮತ್ತೊಮ್ಮೆ ತನ್ನ ಲಯಕಂಡುಕೊಂಡಿದೆ ಎಂದಿದ್ದಾರೆ.
-ಶನಿವಾರ (ಡಿ 9) ಮೊದಲ ಹಂತ ಮತ್ತು ಎರಡನೇ ಹಂತದ ಮತದಾನ ಡಿ.14ರಂದು ನಡೆಯಲಿದೆ. ಡಿ. 18ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ದಕ್ಷಿಣ ಗುಜರಾತ್: 35 ಸ್ಥಾನಗಳಿಗೆ ನಡೆಸಿದ ಸಮೀಕ್ಷೆ

ದಕ್ಷಿಣ ಗುಜರಾತ್: 35 ಸ್ಥಾನಗಳಿಗೆ ನಡೆಸಿದ ಸಮೀಕ್ಷೆ

2017ರ ಸಮೀಕ್ಷೆ ವರದಿ : ಬಿಜೆಪಿ (23-27) ಶೇ 46ರಷ್ಟು ಮತಗಳು
ಕಾಂಗ್ರೆಸ್ (6-10) ಶೇ 39
ಇತರೆ (1-3) ಶೇ 15

2012: ಬಿಜೆಪಿ- 28 ಸ್ಥಾನಗಳು, ಕಾಂಗ್ರೆಸ್- 6 ಸ್ಥಾನಗಳು, ಇತರೆ- 1

ನವೆಂಬರ್ 23 ರಿಂದ ನವೆಂಬರ್ 30ರ ಅವಧಿಯಲ್ಲಿ ಇಂಡಿಯಾ ಟಿವಿ ವಿಎಂ ಆರ್ ಅಭಿಪ್ರಾಯ ಸಂಗ್ರಹದಿಂದ ಹೊರ ಬಂದಿರುವ ಸಮೀಕ್ಷಾ ವರದಿ ಇದಾಗಿದೆ.

ಸೌರಾಷ್ಟ್ರ 62 ಸ್ಥಾನಗಳಿಗೆ ನಡೆಸಿದ ಸಮೀಕ್ಷೆ

ಸೌರಾಷ್ಟ್ರ 62 ಸ್ಥಾನಗಳಿಗೆ ನಡೆಸಿದ ಸಮೀಕ್ಷೆ

2017ರ ಸಮೀಕ್ಷೆ ವರದಿ : ಬಿಜೆಪಿ (27-31) ಶೇ 44ರಷ್ಟು ಮತಗಳು
ಕಾಂಗ್ರೆಸ್ (23-27) ಶೇ 41
ಇತರೆ (0) ಶೇ 15

2012: ಬಿಜೆಪಿ- 35 ಸ್ಥಾನಗಳು ಶೇ45, ಕಾಂಗ್ರೆಸ್- 16 ಸ್ಥಾನಗಳು ಶೇ37, ಇತರೆ- 3(ಶೇ18)

ನವೆಂಬರ್ 23 ರಿಂದ ನವೆಂಬರ್ 30ರ ಅವಧಿಯಲ್ಲಿ ಇಂಡಿಯಾ ಟಿವಿ ವಿಎಂ ಆರ್ ಅಭಿಪ್ರಾಯ ಸಂಗ್ರಹದಿಂದ ಹೊರ ಬಂದಿರುವ ಸಮೀಕ್ಷಾ ವರದಿ ಇದಾಗಿದೆ.

ಸೆಂಟ್ರಲ್ ಗುಜರಾತ್: 40 ಸ್ಥಾನಗಳಿಗೆ ನಡೆಸಿದ ಸಮೀಕ್ಷೆ

ಸೆಂಟ್ರಲ್ ಗುಜರಾತ್: 40 ಸ್ಥಾನಗಳಿಗೆ ನಡೆಸಿದ ಸಮೀಕ್ಷೆ

2017ರ ಸಮೀಕ್ಷೆ ವರದಿ : ಬಿಜೆಪಿ (23-27) ಶೇ 46ರಷ್ಟು ಮತಗಳು
ಕಾಂಗ್ರೆಸ್ (13-17) ಶೇ 40
ಇತರೆ (0) ಶೇ 14

2012: ಬಿಜೆಪಿ- 20 ಸ್ಥಾನಗಳು, ಕಾಂಗ್ರೆಸ್- 18 ಸ್ಥಾನಗಳು, ಇತರೆ- 0

ನವೆಂಬರ್ 23 ರಿಂದ ನವೆಂಬರ್ 30ರ ಅವಧಿಯಲ್ಲಿ ಇಂಡಿಯಾ ಟಿವಿ ವಿಎಂ ಆರ್ ಅಭಿಪ್ರಾಯ ಸಂಗ್ರಹದಿಂದ ಹೊರ ಬಂದಿರುವ ಸಮೀಕ್ಷಾ ವರದಿ ಇದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gujrat Assembly Elections 2017 : India Tv-VMR Opinion Poll prediction, The India TV-VMR opinion poll was carried out between November 23 to November 30.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ