ಗುಜರಾತ್ ಚುನಾವಣೆ: ತವರು ನೆಲದತ್ತ ಬೆಂಗಳೂರು ಗುಜರಾತಿಗಳು

ಗುಜರಾತ್, ಡಿಸೆಂಬರ್ 07 : ದೇಶಾದ್ಯಂತ ಗಮನ ಸೆಳೆದಿರುವ ಗುಜರಾತ್ ವಿದಾನಸಭೆ ಚುನಾವಣೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ದೂರದ ಗುಜರಾತ್ ಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದಲೂ ಸಾವಿರಾರು ಗುಜರಾತಿಗಳು ತಮ್ಮ ತವರು ನೆಲದತ್ತ ಮುಖಮಾಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಎಐಸಿಸಿ ನಿಯೋಜಿತ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಚಾರ ಭಾಷಣಗಳನ್ನು ಕೇಳಲು ಬೆಂಗಳೂರಿನಿಂದ ಗುಜರಾತಿಗಳು ಈಗಾಗಲೇ ಗುರುವಾರವೇ ಗುಜರಾತಿಗೆ ತೆರಳಿದ್ದಾರೆ ಎಂದು ಇಂದಿರಾನಗರ ಗುಜರಾತ್ ಅಸೋಸಿಯೇಷನ್ ಮೂಲಗಳು ತಿಳಿಸಿವೆ.

Gujarathis rushing home to vote in Polls

ಬೆಂಗಳೂರು ನಗರದಲ್ಲಿ ಸರಿಸುಮಾರು 5 ಲಕ್ಷ ಗುಜರಾತಿಗಳು ಹಲವಾರು ವರ್ಷಗಳಿಂದ ನೆಲೆಸಿದ್ದಾರೆ. ಗುಜರಾತ್ ನಲ್ಲಿ ಇದೇ ಡಿಸೆಂಬರ್ 9 ರಂದು ಹಾಗೂ ಡಿಸೆಂಬರ್ 14 ರಂದು ಎರಡು ಹಂತಗಳಲ್ಲಿ ನಡೆಯುವ ಗುಜರಾತ್ ವಿಧಾನಸಭಾ ಚುನಾವಣೆ ಗೆ ಮತ ಚಲಾಯಿಸಲು ಬೆಂಗಳೂರಿನ ಸಾವಿರಾರು ಜನರು ಹಂತ ಹಂತಗಳಲ್ಲಿ ತೆರಳುತ್ತಿದ್ದಾರೆ.

ಗುಜರಾತ್ ಚುನಾವಣಾ ಫಲಿತಾಂಶ : ಖ್ಯಾತ ಜ್ಯೋತಿಷಿ ನುಡಿದ ಭವಿಷ್ಯ

ಈಗಾಗಲೇ ನಮ್ಮ ಕುಟುಂಬಕ್ಕೆ ಸದಸ್ಯರು ಅಹಮದಾಬಾದ್ ಗೆ ತೆರಳಿದ್ದಾರೆ ಎಂದು ಐಟಿ ಉದ್ಯೋಗಿ ಆಗಿರುವ ಬೆಂಗಳೂರಿನ ಗುಜರಾತಿ ನಿವಾಸಿ ಪ್ರತಿಕ್ ದೇಸಾಯಿ ಹೇಳುತ್ತಾರೆ. ಈಗಾಗಲೇ ಬೆಂಗಳೂರಿನಿಂದ ಸೂರತ್ ಮತ್ತೊಬ್ಬ ಐಟಿ ಉದ್ಯೋಗಿ ದರ್ಶನ್ ಪಟೇಲ್ ಹೇಳುವ ಪ್ರಕಾರ ಅವರು ಸೂರತ್ ನಿವಾಸಿ ಯಾಗಿದ್ದು ಸೂರತ್ ನಲ್ಲಿ ಇದೇ ಶನಿವಾರ ಮತದಾನ ನಡೆಯಲಿದೆ. ಹೀಗಾಗಿ ಬೆಂಗಳೂರಿನಲ್ಲಿದ್ದ ಅವರ ಸಂಬಂಧಿಗಳು ಈಗಾಗಲೇ ಮತ ಚಲಾಯಿಸಲು ತೆರಳಿದ್ದಾರೆ.

ಇಂದಿರಾನಗರ ಗುಜರಾತ್ ಅಸೋಸಿಯೇಷನ್ ಕಾರ್ಯದರ್ಶಿ ಪ್ರಫುಲ್ ಮಾನ್ ಹೇಳುವ ಪ್ರಕಾರ ಗುಜರಾತ್ ಚುನಾವಣೆ ತಮ್ಮ ತವರುನೆಲಕ್ಕೆ ತೆರಳಿ ಸ್ವಲ್ಪ ದಿನ ಇದ್ದು ಬರಲು ಅವಕಾಶ ಕಲ್ಪಿಸಿದೆ. ಹೀಗಾಗಿ ಹತ್ತಾರು ಸಾವಿರ ಗುಜರಾತಿಗಳು ತೆರಳಿದ್ದಾರೆ. ಎರಡನ ಹಂತದ ಚುನಾವಣೆ ಬಳಿಕ ವಾಪಾಸ್ ಬರಲಿದ್ದಾರೆ.ಇನ್ನು ರಾಜಕಾರಣದಲ್ಲಿ ಆಸಕ್ತಿ ಇರುವ ಅನೇಕರು ಮತ ಎಣಿಕೆ ಡಿಸೆಂಬರ್ 18 ನಡೆಯಲಿದ್ದು ಫಲಿತಾಂಶದ ಬಳಿಕವೇ ವಾಪಾಸಾಗಲಿದ್ದಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+