Gujrat Rain: ಮುಳುಗಿದ ಹಲವು ಭಾಗಗಳು: ಪ್ರವಾಹದಲ್ಲಿ ಕೊಚ್ಚಿಹೋದ ಸಿಲಿಂಡರ್, ವಾಹನ, ಜಾನುವಾರುಗಳು

ಗುಜರಾತ್ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪರೀಕ್ಷೆ ಬರೆಯಲು ತನ್ನ ತಂದೆಯೊಂದಿಗೆ ಬೇಲಿಮೋರಾದಿಂದ ತೆರಳಿದ್ದ 16 ವರ್ಷದ ಬಾಲಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ತಂದೆಯನ್ನು ರಕ್ಷಿಸಲಾಗಿದೆ. ಅಗ್ನಿಶಾಮಕ ತಂಡ ಮೃತ ಬಾಲಕ ದೇಹಕ್ಕೆ ಶೋಧ ಕಾರ್ಯ ಆರಂಭಿಸಿದೆ.

ಮುಂದಿನ ಐದು ದಿನಗಳಲ್ಲಿ ಜುಲೈ 26 ರವರೆಗೆ ಸಮುದ್ರಕ್ಕೆ ಇಳಿಯದಂತೆ ಗುಜರಾತ್ ಕರಾವಳಿಯ ಮೀನುಗಾರರಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಎಚ್ಚರಿಕೆ ನೀಡಿದೆ. ಶನಿವಾರ ಗುಜರಾತ್‌ನ 45 ತಾಲೂಕುಗಳಲ್ಲಿ ಭಾರಿ ಮಳೆಯಾಗಿದೆ. ನವಸಾರಿ ಜಿಲ್ಲೆಯಲ್ಲಿ 13 ಇಂಚು ಮಳೆಯಾಗಿದೆ.

gujarat-submerges

ಜುನಾಗಢ್‌ನ ಗಿರ್ನಾರ್ ಹಿಲ್‌ನಲ್ಲಿ ಸುಮಾರು 14 ಇಂಚುಗಳಷ್ಟು ಮಳೆಯಾಗಿದ್ದು, ಪರ್ವತಗಳ ಮೇಲಿಂದ ಹರಿದು ಬಂದ ನೀರು ನಗರದಲ್ಲಿ ಪ್ರವಾಹ ಸೃಷ್ಠಿಸಿದೆ, ನಗರದಲ್ಲಿ ರಸ್ತೆಗಳಲ್ಲಿ ಪ್ರವಾಹ ಉಂಟಾದ ಕಾರಣ ಕಾರುಗಳು ಕೊಚ್ಚಿಹೋಗಿವೆ. ಮನೆಗಳಿಗೆ ನೀರು ನುಗ್ಗಿದ ಕಾರಣ ಜನ ಛಾವಣಿಯ ಮೇಲೆ ನಿಂತು ಜೀವ ಉಳಿಸಿಕೊಂಡರು.

ಗುಜರಾತಿನ ಸೌರಾಷ್ಟ್ರದ ಜುನಾಗಢ ಜಿಲ್ಲೆಯಲ್ಲಿ ಮುಂಜಾನೆಯಿಂದ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ. ಗಿರ್ನಾರ್ ಮತ್ತು ದಾತಾರ್ ಪರ್ವತಗಳಲ್ಲಿ ಅತಿವೃಷ್ಟಿಯಿಂದಾಗಿ ಕಲ್ವಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಗಿರ್ನಾರ್ ಪರ್ವತದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದ ವಿವಿಧ ಪ್ರದೇಶಗಳಲ್ಲಿನ ಮನೆಗಳು ಜಲಾವೃತವಾಗಿವೆ. ಧಾರಾಕಾರ ಮಳೆಗೆ ಜಾನುವಾರು, ವಾಹನಗಳು ಕೊಚ್ಚಿ ಹೋಗಿವೆ. ಸಾರ್ವಜನಿಕರು ತಮ್ಮ ಮನೆಗಳಲ್ಲಿಯೇ ಇರುವಂತೆ ಜುನಾಗಢ ಜಿಲ್ಲಾ ಪೊಲೀಸ್ ಮುಖ್ಯಸ್ಥ ರವಿತೇಜ ವಾಸಂ ಶೆಟ್ಟಿ ಮನವಿ ಮಾಡಿದ್ದಾರೆ.

ಪ್ರವಾಹದಲ್ಲಿ ಕೊಚ್ಚಿಹೋದ ಗ್ಯಾಸ್ ಸಿಲಿಂಡರ್ ಗಳು

ಸೌರಾಷ್ಟ್ರದ ಅಮ್ರೇಲಿ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದೆ. ಅಮೇಲಿ ಜಿಲ್ಲೆಯ ಎಸ್‌ಟಿ ಬಸ್ ನಿಲ್ದಾಣ ಮತ್ತು ರಾಜ್‌ಕೋಟ್ ರಸ್ತೆ ಜಲಾವೃತವಾಗಿದೆ. ದಕ್ಷಿಣ ಗುಜರಾತ್‌ನ ನವಸಾರಿಯಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸುಮಾರು 13 ಇಂಚುಗಳಷ್ಟು ಮಳೆಯಾಗಿದೆ, ಗ್ರಾಮೀಣ ಪ್ರದೇಶಗಳಲ್ಲಿಯೂ ತೀವ್ರ ಮಳೆಯಾಗಿದೆ. ಮಳೆಯ ಅಬ್ಬರಕ್ಕೆ ಹಲವು ರಸ್ತೆ, ಕಟ್ಟಡಗಳು ಜಲಾವೃತವಾಗಿದೆ. ಗೋದಾಮಿನಲ್ಲಿ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಗಳು ಕೊಚ್ಚಿಹೋಗಿವೆ, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ಪ್ರದೇಶದಲ್ಲಿ ತೀವ್ರ ಮಳೆಯಿಂದಾಗಿ, ನವಸಾರಿಯ ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ 48 ಭಾರೀ ದಟ್ಟಣೆಗೆ ಸಾಕ್ಷಿಯಾಗಿದೆ. ಪಟಾನ್ ಮತ್ತು ಬನಸ್ಕಾಂತ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಪಾಲನ್‌ಪುರದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಐಎಂಡಿ ವಲ್ಸಾದ್, ಭವ್ನಗರ, ದೇವ್‌ಭೂಮಿ ದ್ವಾರಕಾ, ದಮನ್, ದಾದ್ರಾ ನಗರ ಹವೇಲಿ, ಅಹಮದಾಬಾದ್‌ಗಾಗಿ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ, ಆನಂದ್, ಭರುಚ್, ಬನಸ್ಕಂತ, ಸಬರ್ಕಂತ, ಅಮ್ರೆಲಿ, ಜಾಮ್‌ನಗರ, ಗಿರ್ ಸೊಮ್ನಾಥ್ ವಡೋದರಾ, ಸೂರತ್, ನವ್ಸಾರಿಯಲ್ಲಿ ಕೂಡ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+