ಗುಜರಾತ್ ಫಲಿತಾಂಶ ಮೋದಿ ವಿಶ್ವಾಸಾರ್ಹತೆ ಪ್ರಶ್ನಿಸಿದೆ: ರಾಹುಲ್

Subscribe to Oneindia Kannada

ನವದೆಹಲಿ, ಡಿಸೆಂಬರ್ 19: ಗುಜರಾತ್ ಚುನಾವಣೆಯ ಫಲಿತಾಂಶದಿಂದ ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ ಮತ್ತು ಅವರ ಮಾತುಗಳನ್ನು ದೇಶ ಕೇಳಿಸಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ನಿಮ್ಮೊಳಗಿನ ಆಕ್ರೋಶ ಕೆಲಸ ಮಾಡುವುದಿಲ್ಲ ಎಂಬ ಸಂದೇಶವನ್ನು ಗುಜರಾತ್ ಜನರು ಬಿಜೆಪಿ ಮತ್ತು ಮೋದಿಗೆ ನೀಡಿದ್ದಾರೆ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ. ಮಾತ್ತವಲ್ಲ "ವಿರೋಧಿಗಳನ್ನು ಪ್ರೀತಿ ಮತ್ತು ಸಹೋದರತ್ವದಿಂದ ಮಾತ್ರ ಸೋಲಿಸಬಹುದು," ಎಂದು ಅವರು ವಿಶ್ಲೇಷಿಸಿದ್ದಾರೆ.

ಗುಜರಾತ್ : 99ಕ್ಕೆ ಬಿಜೆಪಿ ಸುಸ್ತು, 80ಕ್ಕೆ ಕಾಂಗ್ರೆಸ್ ಮಸ್ತು

"ಮೋದಿ ವಿಶ್ವಾಸಾರ್ಹತೆ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದೆ. ನಿಜವಾಗಿ ಹೇಳಬೇಕೆಂದರೆ ಮೋದಿಯವರಿಗೆ ವಿಶ್ವಾಸಾರ್ಹತೆಯ ಸಮಸ್ಯೆ ಇದೆ. ಮತ್ತು ಇದು ಅವರಿಗೆ ತುಂಬಾ ತೊಂದರೆ ನೀಡುತ್ತಿದೆ. ಅವರು ಏನು ಹೇಳುತ್ತಾರೋ ಅದನ್ನೇ ಅವರ ಬೆಂಬಲಿಗರು ಮತ್ತು ಪಕ್ಷ ಮತ್ತೆ ಮತ್ತೆ ಹೇಳುತ್ತದೆ," ಎಂದಿದ್ದಾರೆ.

Gujarat results raise questions on Modi's credibility: Rahul

"ಇವತ್ತು ಅವರು ಹೇಳುವುದನ್ನು ಜನರು ಕೇಳುತ್ತಿಲ್ಲ ಎಂಬುದನ್ನು ಗುಜರಾತ್ ಚುನಾವಣೆ ತೋರಿಸಿದೆ. ಮುಂದಿನ ದಿನಗಳಲ್ಲಿ ಇದನ್ನು ನೀವು ಸ್ಪಷ್ಟವಾಗಿ ನೋಡಲಿದ್ದೀರಿ," ಎಂದು ರಾಹುಲ್ ಹೇಳಿದ್ದಾರೆ.

ಸೌರಾಷ್ಟ್ರ- ಕಛ್ ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಮುರಿದ ಕಾಂಗ್ರೆಸ್

ಇದೇ ವೇಳೆ ಮೋದಿಯವರ ಗುಜರಾತ್ ಮಾಡೆಲ್ ನ್ನು ರಾಹುಲ್ ಟೀಕಿಸಿದ್ದು, ಗುಜರಾತ್ ಮಾಡೆಲನ್ನು ವಿಪರೀತ ಪ್ರಚಾರ ಮಾಡಲಾಯಿತು ಆದರೆ ಇದು ಒಳಗೆ ಬರೀ ಟೊಳ್ಳು ಎಂದಿದ್ದಾರೆ. "ಮೋದಿಯ ಮಾದರಿಯನ್ನು ಗುಜರಾತಿಗರು ಒಪ್ಪಿಕೊಂಡಿಲ್ಲ ಎಂಬುದು ನನ್ನ ಗಮನಕ್ಕೆ ಬಂತು," ಎಂದು ಅವರು ಹೇಳಿದ್ದಾರೆ.

ಜತೆಗೆ ಗುಜರಾತ್ ಫಲಿತಾಂಶ ಕಾಂಗ್ರೆಸ್ ಪಾಲಿಗೆ ಉತ್ತಮ ಫಲಿತಾಂಶ ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress president Rahul Gandhi today said the Gujarat election results raise questions on Prime Minister Narendra Modi's credibility and the country is not listening to him.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ