ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gujarat Election Results 2022: 135 ಜನರನ್ನು ಬಲಿ ಪಡೆದಿದ್ದ ಮೋರ್ಬಿಯಲ್ಲಿ ಬಿಜೆಪಿಗೆ ಮುನ್ನಡೆ

|
Google Oneindia Kannada News

ಗಾಂಧಿನಗರ, ಡಿಸೆಂಬರ್‌ 8: ಐದು ಬಾರಿ ಶಾಸಕರಾಗಿರುವ ಭಾರತೀಯ ಜನತಾ ಪಾರ್ಟಿ (BJP) ಅಭ್ಯರ್ಥಿ ಕಾಂತಿಭಾಯ್ ಅಮೃತಿಯಾ ಅವರು ಗುಜರಾತ್‌ನ ಮೊರ್ಬಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪಾಟೀದಾರರ ಪ್ರಾಬಲ್ಯವಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ತಿಂಗಳು ನಡೆದಿದ್ದ ಸೇತುವೆ ದುರಂತದಲ್ಲಿ 135 ಜನರು ಬಲಿಯಾಗಿದ್ದರು. ಈ ದುರಂತವು ದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಹಾಲಿ ಶಾಸಕ ಬ್ರಿಜೇಶ್‌ ಮಿಶ್ರಾ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಮಾಜಿ ಶಾಸಕ ಕಾಂತಿಭಾಯ್ ಅಮೃತಿಯಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅಮೃತಿಯಾ ಅವರು ಮೋರ್ಬಿ ಸೇತುವೆ ದುರಂತದಲ್ಲಿ ಜನರ ಪ್ರಾಣ ಉಳಿಸಲು ಸಹಾಯ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದ್ದ ಫೋಟೊಗಳು ವೈರಲ್‌ ಆಗಿದ್ದವು. ಆ ನಂತರ ಬಿಜೆಪಿ ಕಾಂತಿಬಾಯ್‌ ಅಮೃತಿಯಾ ಅವರಿಗೆ ಟಿಕೆಟ್‌ ನೀಡಲು ನಿರ್ಧರಿಸಿತು ಎಂದು ಪಕ್ಷದ ಮೂಲಗಳು ತಿಳಿಸಿದ್ದವು.

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

ಕಾಂತಿಬಾಯ್‌ ಅಮೃತಿಯಾ ಅವರ ವಿರುದ್ಧ ಜಯಂತಿ ಪಟೇಲ್ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಯುವ ಅಭ್ಯರ್ಥಿ ಪಂಕಜ್ ರಂಸಾರಿಯಾ ಅವರನ್ನು ಎಎಪಿ ಕಣಕ್ಕಿಳಿಸಿದೆ. ಅವರು ಅಮೃತಿಯಾ ಸಂಬಂಧಿಯೂ ಹೌದು. ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಆದರೂ, ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

Gujarat Poll Results 2022: Morbi BJP candidate Kantilal Amrutia leading

ಗುಜರಾತ್‌ನ ಮೊರ್ಬಿಯಲ್ಲಿ ಅಕ್ಟೋಬರ್‌ ತಿಂಗಳಲ್ಲಿ ತೂಗು ಸೇತುವೆ ಕುಸಿದ ಪರಿಣಾಮ 135 ಜನರು ಮೃತಪಟ್ಟಿದ್ದರು. ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದರು.

Gujarat Poll Results 2022: Morbi BJP candidate Kantilal Amrutia leading

ಗುಜರಾತ್‌ನಲ್ಲಿ ನಡೆದ ಈ ಪ್ರಕರಣವು ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು. ಈ ಘಟನೆಗೆ ಗುಜರಾತ್‌ ಸರ್ಕಾರ ಹಾಗೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯವೇ ಕಾರಣವೆಂದು ವಿರೋಧ ಪಕ್ಷಗಳ ನಾಯಕರು ಹರಿಹಾಯ್ದಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ಚರ್ಚೆ ನಡೆದಿತ್ತು.

English summary
Bharatiya Janata Party (BJP) candidate Kantibhai Amrutia, a five-time MLA, is leading in Gujarat's Morbi. 135 people lost their lives in the bridge disaster last month in this Patidar-dominated assembly constituency. This tragedy caused great outrage in the country,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X