Breaking: ಅಸ್ಸಾಂ ಪೊಲೀಸರಿಂದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬಂಧನ
ಅಹಮದಾಬಾದ್, ಏಪ್ರಿಲ್ 21: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬಂಧನವಾಗಿದೆ. ನಿನ್ನೆ ತಡರಾತ್ರಿ ಗುಜರಾತ್‌ನ ಪಾಲನ್‌ಪುರದ ಸರ್ಕ್ಯೂಟ್ ಹೌಸ್‌ನಲ್ಲಿ ಸ್ಥಳೀಯಪೊಲೀಸರ ನೆರವಿನಿಂದ ಅಸ್ಸಾಂ ಪೊಲೀಸರು ಮೇವಾನಿರನ್ನು ಬಂಧಿಸಿದ್ದಾರೆ.
2021ರ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ನಂತರ ಅಹಮದಾಬಾದ್‌ಗೆ ಕರೆದೊಯ್ಯಲಾಯಿತು ಮತ್ತು ಇಂದು ಅಸ್ಸಾಂಗೆ ರೈಲಿನ ಮೂಲಕ ಕರೆದೊಯ್ಯಲಾಗುತ್ತದೆ ಎಂದು ತಿಳಿದು ಬಂದಿದೆ.
ದಲಿತ ನಾಯಕ ಮತ್ತು ರಾಜಕೀಯ ಪಕ್ಷದ ರಾಷ್ಟ್ರೀಯ ದಲಿತ ಅಧಿಕಾರ ಮಂಚ್‌ನ ಸಂಚಾಲಕ ಮೇವಾನಿ ಬಂಧನದ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಮೇವಾನಿ ಅವರ ಅಧಿಕೃತ ಖಾತೆಯಿಂದ ಕೆಲವು ಇತ್ತೀಚಿನ ಟ್ವೀಟ್‌ಗಳನ್ನು ಅಧಿಕಾರಿಗಳ ವಿನಂತಿಯ ಕಾರಣ ತಡೆಹಿಡಿಯಲಾಗಿದೆ ಎಂದು ಅವರ ಟ್ವಿಟ್ಟರ್ ಖಾತೆ ತೋರಿಸುತ್ತದೆ.
ಎಫ್‌ಐಆರ್ ಅಥವಾ ಪೊಲೀಸ್ ಪ್ರಕರಣದ ಪ್ರತಿಯನ್ನು ಇನ್ನೂ ನೀಡಿಲ್ಲ ಎಂದು ಮೇವಾನಿ ಅವರ ಸಹಾಯಕರು ಹೇಳಿದ್ದಾರೆ.

ಜಿಗ್ನೇಶ್ ಮೇವಾನಿ ಅವರು ಗುಜರಾತ್‌ನ ವಡ್ಗಾಮ್‌ನ ವಿಧಾನಸಭೆಯ ಸದಸ್ಯ ಅಥವಾ ಶಾಸಕರಾಗಿದ್ದಾರೆ. ಅವರು ವಕೀಲ ಕಾರ್ಯಕರ್ತ ಮತ್ತು ಮಾಜಿ ಪತ್ರಕರ್ತ. ಅವರು ಸ್ವತಂತ್ರ ಶಾಸಕರಾಗಿದ್ದರೂ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ.
ಗುಜರಾತ್ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡಿದ್ದ ಮೂವರು ಯುವ ಮುಖಂಡರ ಪೈಕಿ ಜಿಗ್ನೇಶ್ ಮೇವಾನಿ ಒಬ್ಬರಾಗಿದ್ದಾರೆ. ಪಾಟೀದಾರ್ ಸಂಘಟನೆ ಮುಖಂಡ ಹಾರ್ದಿಕ್ ಪಟೇಲ್ ಚುನಾವಣೆ ಸ್ಪರ್ಧಿಸಿರಲಿಲ್ಲ ಆದರೆ, ಈಗ ಗುಜರಾತ್ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರಾಗಿದ್ದಾರೆ. ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ರಾಧನ್ಪುರ್ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿದ್ದರು.
ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ 63,471 ಮತಗಳನ್ನು ಪಡೆದಿದ್ದಾರೆ. ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವಿಜಯಕುಮಾರ್ ಚಕ್ರವರ್ತಿಯವರನ್ನು 21,042 ಮತಗಳ ಅಂತರದಿಂದ ಸೋಲಿಸಿದ್ದರು. ಮೇವಾನಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳಲಾಗಿತ್ತು.
ಊನ್ನಾವೋ ದಲಿತ ದೌರ್ಜನ್ಯದ ನಂತರ ರಾಜ್ಯದಾದ್ಯಂತ ಹುಟ್ಟಿಕೊಂಡ ದಲಿತ ಹೋರಾಟದ ಮೂಲಕ ಜಿಗ್ನೇಶ್ ಮೇವಾನಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಬಿಜೆಪಿ ವಿರುದ್ಧ ಕೆಂಡ ಕಾರುತ್ತಾ ಬಂದ ಜಿಗ್ನೇಶ್ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಿದ್ದರು












Click it and Unblock the Notifications