ಗುಜರಾತ್ ಐಎಎಸ್ ಅಧಿಕಾರಿಗೆ ರಕ್ತದಿಂದ ತುಲಾಭಾರ
ವಡೋದರ, ಜ 7: ರಕ್ತದಾನ ಚಳುವಳಿಯ ನೇತೃತ್ವ ವಹಿಸಿ, ಸಾವಿರಾರು ಲೀಟರ್ ರಕ್ತ ಸಂಗ್ರಹಿಸಿ ಹಲವರ ಬಾಳಿಗೆ ಆಶಾಕಿರಣವಾಗಿದ್ದ ಗುಜರಾತಿನ ಐಎಎಸ್ ಅಧಿಕಾರಿಗೆ ಜನರು ರಕ್ತದಿಂದಲೇ ತುಲಾಭಾರ ನಡೆಸಿದ್ದಾರೆ.
ಗುಜರಾತ್ ರಾಜ್ಯದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುದೀಪ್ ಕುಮಾರ್ ನಂದಾ ಅವರಿಗೆ ವಡೋದರ ಜಿಲ್ಲೆಯ ಕಲ್ಲಾ ಎಂಬ ಹಳ್ಳಿಯಲ್ಲಿ ಜನರು 79 ಲೀಟರ್ ರಕ್ತದಿಂದ ತುಲಾಭಾರ ನಡೆಸಿ ಸನ್ಮಾನ ಮಾಡಿದ್ದಾರೆ.

ಸುದೀಪ್ ಕುಮಾರ್ ನಂದಾ ಹಲವಾರು ವರ್ಷಗಳಿಂದ ರಕ್ತದಾನ ಚಳುವಳಿಯನ್ನು ರೂಪಿಸಿ, ಜನತೆಗೆ ರಕ್ತದಾನದ ಅರಿವನ್ನು ಮೂಡಿಸಿದ್ದರು. ಸುಮಾರು ಹನ್ನೆರಡು ವರ್ಷಗಳಿಂದ ರಕ್ತದಾನ ಶಿಬಿರ ನಡೆಸಿ, ಅಗತ್ಯವಿದ್ದವರಿಗೆ ರಕ್ತ ಪೂರೈಸುತ್ತಾ ಬಂದಿದ್ದಾರೆ.
ನಂದಾ ಅವರು ತಮ್ಮ ಈ ಸಾಮಾಜಿಕ ಕೆಲಸದಿಂದ ಹಲವರ ಜೀವವನ್ನು ಉಳಿಸಿದ್ದಾರೆ. ಕಲ್ಲಾ ಗ್ರಾಮದ ಫಯಾಜ್ ಚಾರಿಟೇಬಲ್ ಟ್ರಸ್ಟ್, ಸುರಕ್ತಂ ಬ್ಲಡ್ ಬ್ಯಾಂಕ್ ಮತ್ತು ನಾಗರಿಕ ಸಮಿತಿಯಿಂದ ನಂದಾ ಅವರಿಗೆ ವಿಶಿಷ್ಟವಾದ ರಕ್ತದ ತುಲಾಭಾರ ನಡೆಸಲಾಯಿತು.
519 ರಕ್ತದಾನಿಗಳಿಂದ ಸಂಗ್ರಹಿಸಿದ 79 ಲೀಟರ್ ರಕ್ತದಿಂದ ನಂದಾ ಅವರಿಗೆ ತುಲಾಭಾರ ನಡೆಸಲಾಯಿತು. (ಪಿಟಿಐ)












Click it and Unblock the Notifications