ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್, ಹಿಮಾಚಲ ಚುನಾವಣೆ: ಶೀಘ್ರ, ನಿಖರ ಫಲಿತಾಂಶಕ್ಕೆ Dailyhunt ನೋಡಿ

By ಒನ್‌ಇಂಡಿಯಾ ನ್ಯೂಸ್‌ ಡೆಸ್ಕ್‌
|
Google Oneindia Kannada News

ನವದೆಹಲಿ, ಡಿಸೆಂಬರ್‌ 05: ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಡಿಸೆಂಬರ್ 8ರಂದು ಪ್ರಕಟಗೊಳ್ಳಲಿದೆ.

ಹಿಮಾಚಲ ಪ್ರದೇಶಕ್ಕೆ ನವೆಂಬರ್ 12 ರಂದು ಮತದಾನ ನಡೆದಿದೆ. ಗುಜರಾತ್‌ನಲ್ಲಿ ಡಿಸೆಂಬರ್ 1 ಹಾಗೂ 5 ರಂದು ಎರಡು ಹಂತಗಳಲ್ಲಿ ಮತದಾನ ಪ್ರಕ್ರಿಯೆ ಕೊನೆಗೊಂಡಿದೆ.

ಹಿಮಾಚಲ ಚುನಾವಣೆ: ಫಲಿತಾಂಶಕ್ಕೂ ಮುನ್ನ ಇವಿಎಂ ಕಳ್ಳತನ- ಬಿಜೆಪಿ ವಿರುದ್ಧ ಆರೋಪಹಿಮಾಚಲ ಚುನಾವಣೆ: ಫಲಿತಾಂಶಕ್ಕೂ ಮುನ್ನ ಇವಿಎಂ ಕಳ್ಳತನ- ಬಿಜೆಪಿ ವಿರುದ್ಧ ಆರೋಪ

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸನ್ನಾಹದಲ್ಲಿದೆ. ಪ್ರಧಾನಿ ಮೋದಿ ವರ್ಚಸ್ಸು, ಅಭಿವೃದ್ಧಿ ಹಾಗೂ ಡಬಲ್‌ ಇಂಜಿನ್‌ ಸರ್ಕಾರವೆಂಬ ವಿಚಾರಗಳನ್ನು ಬಿಜೆಪಿ ಮುನ್ನೆಲೆಗೆ ತಂದಿದೆ. ಬಿಜೆಪಿಗೆ ಪ್ರಬಲ ಪೈಪೋಟಿ ಒಡ್ಡಿರುವ ಕಾಂಗ್ರೆಸ್‌, ತನ್ನ ಹಳೆಯ ಬೇರುಗಳನ್ನು ಗಟ್ಟಿಯಾಗಿರಿಸಿಕೊಂಡಿದೆ. ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹಿಮಾಚಲದಲ್ಲಿ ಪ್ರಚಾರ ಮಾಡಿದ್ದಾರೆ. ಭಾರತ್‌ ಜೋಡೊ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ ಅವರ ಅನುಪಸ್ಥಿತಿ ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ಎದ್ದು ಕಂಡಿದೆ. ಕಳೆದ ಎರಡು ವರ್ಷಗಳಲ್ಲಿ ಒಂಬತ್ತು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿದೆ. ಹಿಮಾಚಲದ ಚುನಾವಣೆ ಕಾಂಗ್ರೆಸ್‌ಗೆ ಸಿಹಿ ನೀಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ. ಹಿಮಾಚಲದಲ್ಲಿ ನೆಲೆ ಕಂಡುಕೊಳ್ಳಲು ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಸಹ ಪೈಪೋಟಿ ನಡೆಸಿದೆ. ಹಿಮಾಚಲದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟರೂ, ಎಎಪಿಯನ್ನು ಅಲ್ಲಗಳೆಯುವಂತಿಲ್ಲ.

Gujarat, HP Assembly Election Results 2022: Tune into Dailyhunt to get the fastest coverage

ಹಿಮಾಚಲ ಪ್ರದೇಶದಲ್ಲಿ 55 ಲಕ್ಷಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಿದ್ದಾರೆ. ಇದು 68 ಕ್ಷೇತ್ರಗಳ 412 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ. ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಮತ್ತು ಶಿಮ್ಲಾ ಗ್ರಾಮಾಂತರದಿಂದ ಸ್ಪರ್ಧಿಸಿರುವ ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್ ಅವರು ಪ್ರಮುಖ ಅಭ್ಯರ್ಥಿಗಳು. ಪ್ರಧಾನಿ ಮೋದಿ ಅವರು ಬಿಜೆಪಿ ಪರ ಪ್ರಚಾರವನ್ನು ಮುನ್ನಡೆಸಿದ್ದಾರೆ. ಕಮಲದ ಗುರುತಿಗೆ ಹಾಕುವ ಪ್ರತಿ ಮತವೂ ತಮ್ಮ ಶಕ್ತಯನ್ನು ಹೆಚ್ಚಿಸಲಿದೆ ಎಂದು ಪ್ರಧಾನಿ ಹೇಳಿದ್ದಾರೆ. 'ಡಬಲ್ ಇಂಜಿನ್' ಆಡಳಿತವು ಎಲ್ಲರ ಸರ್ವತೋಮುಖ ಅಭಿವೃದ್ಧಿಗಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್‌ ಪ್ರಚಾರ ಮಾಡಿದ್ದಾರೆ. ಹಿಮಾಚಲದಲ್ಲಿ ನೆಲೆ ಕಂಡುಕೊಳ್ಳಲು ಆಮ್‌ ಆದ್ಮಿ ಪಕ್ಷ ಯತ್ನ ನಡೆಸಿದೆ. ಹಿಮಾಚಲದ 68 ಸ್ಥಾನಗಳಲ್ಲಿ 67 ರಲ್ಲಿ ಸ್ಪರ್ಧಿಸಿರುವ ಎಎಪಿ, ಅಬ್ಬರದ ಪ್ರಚಾರನ್ನು ಕೈಗೊಂಡಿಲ್ಲ.

ಗುಜರಾತ್

1995 ರಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಎರಡು ದಶಕಗಳಿಂದಲೂ ಕಾಂಗ್ರೆಸ್‌ ಪಕ್ಷವು ಶೇ 40ರಷ್ಟು ಮತಗಳನ್ನು ಪಡೆಯುತ್ತಿದ್ದರೂ, ಅಧಿಕಾರಕ್ಕೆ ಏರಲು ಸಾಧ್ಯವಾಗಿಲ್ಲ. ಈ ಬಾರಿ ಗುಜರಾತ್‌ನಲ್ಲಿ ಅಧಿಕಾರ ಹಿಡಿದು ಹೊಸ ದಾಖಲೆ ಬರೆಯುವ ಉತ್ಸಾಹದಲ್ಲಿ ಬಿಜೆಪಿ ಇದೆ. ಕಳೆದ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇರುತ್ತಿತ್ತು. ಆದರೆ, ಈ ಬಾರಿ ಆಮ್‌ ಆದ್ಮಿ ಪಕ್ಷವು ಗುಜರಾತ್‌ ಅಖಾಡಕ್ಕೆ ದುಮುಕಿದೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರ ಗದ್ದುಗೆ ಏರಿರುವ ಎಎಪಿ ಗುಜರಾತ್‌ನಲ್ಲಿ ನೆಲೆ ಕಂಡುಕೊಳ್ಳಲು ಹರಸಾಹಸ ನಡೆಸಿದೆ.

Gujarat, HP Assembly Election Results 2022: Tune into Dailyhunt to get the fastest coverage

2017ರಲ್ಲಿ ನಡೆದ ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಗೆದ್ದಿತ್ತು. ಅದರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ 77 ಸ್ಥಾನಗಳನ್ನು ಪಡೆದುಕೊಂಡಿತ್ತು. ಪ್ರಸ್ತುತ, 182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಯಲ್ಲಿ ಬಿಜೆಪಿಯ ಬಲವು 111 ಆಗಿದೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್‌ನ ಹಲವಾರು ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ.

Dailyhunt ಕವರೇಜ್

Dailyhunt ವೆಬ್‌ ತಾಣವು ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಗಳ ನೇರ ಪ್ರಸಾರ ಮಾಡುತ್ತಿದೆ. ಚುನಾವಣೆ ಎಂದರೆ ಕೇವಲ ಸಂಖ್ಯಾಶಾಸ್ತ್ರವಲ್ಲ ಎಂದು ನಾವು ನಂಬುತ್ತೇವೆ. ಪ್ರತಿಯೊಬ್ಬ ನಾಗರಿಕನ ಜೀವನದ ಮೇಲೆ ಚುನಾವಣೆಗಳು ಪ್ರಭಾವ ಬೀರುತ್ತವೆಂದು ನಾವು ತಿಳಿದುಕೊಂಡಿದ್ದೇವೆ. ಈ ಕಾರಣಕ್ಕಾಗಿ, ನಿಖರವಾದ ಮಾಹಿತಿ ನೀಡಲು ಡೇಟಾ, ಮಾದರಿಗಳು ಮತ್ತು ವಿಶ್ಲೇಷಣೆಗಳ ಮೇಲೆ ನಮ್ಮ ಗಮನವಿದೆ. ಫಲಿತಾಂಶ ದಿನದಂದು ನಾವು ಎಲ್ಲಾ ದೃಷ್ಟಿಕೋನಗಳಿಂದ ವಿಶ್ಲೇಷಣೆಯನ್ನು ನಿಮ್ಮ ಮುಂದಿಡುತ್ತೇವೆ. ಫಲಿತಾಂಶದ ಒಳಾರ್ಥಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಸಾಮಾನ್ಯರಿಂದ ಹಿಡಿದು ರಾಜಕೀಯ ತಜ್ಞರವರೆಗೆ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಫಲಿತಾಂಶದ ವಿಶ್ಲೇಷಣೆಯನ್ನು ಪ್ರಸ್ತುತಪಡಿಸಲಿದ್ದೇವೆ.

Dailyhuntನಲ್ಲಿ ಚುನಾವಣಾ ಫಲಿತಾಂಶಗಳ ವಿಮರ್ಶೆ, ವಿಶ್ಲೇಷಣೆ, ಸಂಖ್ಯೆ ಹಾಗೂ ಸುದ್ದಿಗಳನ್ನು ನೀಡಲಿದ್ದೇವೆ.

ಈ ಲೈವ್‌ ಕವರೇಜ್‌ ಕೆಳಗಿನ ಎಲ್ಲ ಅಂಶಗಳನ್ನು ಒಳಗೊಂಡಿರುತ್ತದೆ:

*ಚುನಾವಣೆಗಳ ಫಲಿತಾಂಶದ ಅಫ್‌ಡೇಟ್‌ಗಳು, ಬೆಳವಣಿಗೆಗಳನ್ನು ಕೋಷ್ಟಕಗಳ ಮೂಲಕ ತ್ವರಿತವಾಗಿ ಲೈವ್‌ ರೂಪದಲ್ಲಿ ನೀಡುವುದು.

*ಈಗಿನ ಫಲಿತಾಂಶಗಳ ಅಂಕಿಅಂಶಗಳನ್ನು ಹಿಂದಿನ ಫಲಿತಾಂಶಗಳೊಂದಿಗೆ ತಾಳೆ ಮಾಡುವುದು. ರಾಜ್ಯವಾರು ಹಾಗೂ ಕ್ಷೇತ್ರವಾರು ಸೀಟುಗಳ ಹೊಸ ಅಪ್‌ಡೇಟ್‌ಗಳನ್ನು ನಿಮ್ಮ ಮುಂದೆ ಇರಿಸುವುದು.

*ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಪ್ರತಿಕ್ರಿಯೆಗಳು ಹಾಗೂ ಟ್ವಿಟರ್‌ ಟ್ರೆಂಡ್‌ಗಳ ಬಗೆಗಿನ ವಿವರಗಳನ್ನು ನೀಡುವುದು.

*ಲೈವ್ ವಿಡಿಯೊಗಳು, ವೈರಲ್ ಮೀಮ್‌ಗಳು, ಟ್ರೆಂಡಿಂಗ್ ಸ್ಟೋರಿಗಳನ್ನು ನಮ್ಮ ಕವರೇಜ್‌ನಲ್ಲಿ ಕೊಡಲಾಗುವುದು.

English summary
Dailyhunt website is live streaming the assembly elections of two states. We believe that elections are not just about numbers. We know that elections affect the life of every citizen. For this reason, our focus is on data, models and analytics to deliver accurate information,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X