• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gujarat Assembly Elections 2022: ಇಂದು ಸಂಜೆ 6.30ಕ್ಕೆ ಚುನಾವಣೋತ್ತರ ಸಮೀಕ್ಷೆ- ಪ್ರಮುಖ ಅಂಶಗಳು

|
Google Oneindia Kannada News

ಅಹಮದಾಬಾದ್, ಡಿಸೆಂಬರ್‌ 05: ಗುಜರಾತ್‌ನಲ್ಲಿ ಎರಡನೇ ಹಂತದ ಮತದಾನ ಮುಗಿದಿದ್ದು, ಎಲ್ಲರ ಕಣ್ಣು ಚುನಾವಣೋತ್ತರ ಸಮೀಕ್ಷೆಗಳತ್ತ ನೆಟ್ಟಿದೆ.

ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ ನಡುವಿನ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಗುಜರಾತ್‌ ಚುನಾವಣೆ ಬಗ್ಗೆ ನೀವು ತಿಳಿಯಬೇಕಿರುವ ಹತ್ತು ಅಂಶಗಳು

*ಇಂದು ಬೆಳಗ್ಗೆ ಮತದಾನ ಮಾಡಿದವರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮುಖರು. ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ, ಚುನಾವಣೆ ನಡೆಸಿದ ಚುನಾವಣಾ ಆಯೋಗಕ್ಕೆ ಧನ್ಯವಾದ ಅರ್ಪಿಸಿದರು. ಜನರು ಹೊರಬಂದು ಮತ ಚಲಾಯಿಸುವಂತೆ ಒತ್ತಾಯಿಸಿದರು.

*ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಮತ ಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದರು. ಗೃಹ ಸಚಿವ ಅಮಿತ್ ಶಾ ಕೂಡ ಇಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಮತ ಚಲಾಯಿಸಿದರು. ಸಂಜೆ 6.30ಕ್ಕೆ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳಲಿವೆ.

*ಡಿಸೆಂಬರ್ 1 ರಂದು ನಡೆದ ಗುಜರಾತ್ ಚುನಾವಣೆಯ ಮೊದಲ ಹಂತದಲ್ಲಿ ಕಡಿಮೆ(ಶೇ. 63) ಮತದಾನವಾಗಿತ್ತು.

*ನಗರ ಕೇಂದ್ರಿತ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ನಿರಾಸಕ್ತಿಯನ್ನು ತೋರಿಸಿದ್ದಾರೆ.

*ಇಂದು ನಡೆದಿರುವ ಎರಡನೇ ಹಂತದ ಮತದಾನದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ.34.7ರಷ್ಟು ಮತದಾನವಾಗಿದೆ.

*ಇಂದು 93 ಕ್ಷೇತ್ರಗಳಿಗೆ ನಡೆದಿರುವ ಮತದಾನದಲ್ಲಿ ಸುಮಾರು 833 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅವುಗಳಲ್ಲಿ ಅಹಮದಾಬಾದ್‌ನ 16 ನಗರ ಕ್ಷೇತ್ರಗಳಿವೆ. ಈ ಸ್ಥಾನಗಳು ಬಿಜೆಪಿಗೆ ನಿರ್ಣಾಯಕವಾಗಿದ್ದು, ಮೂರು ದಶಕಗಳಿಂದ ಅದು ಪ್ರಾಬಲ್ಯ ಸಾಧಿಸಿದೆ.

Gujarat Exit Polls Results 2022 you need to know these points

*ಬಿಜೆಪಿ ಮತ್ತು ಎಎಪಿ ಎಲ್ಲಾ 93 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಕಾಂಗ್ರೆಸ್ 90 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಅದರ ಪಾಲುದಾರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಎರಡು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

*ಎರಡನೇ ಹಂತದಲ್ಲಿ ಅಹಮದಾಬಾದ್‌ನ ಘಟ್ಲೋಡಿಯಾದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಸ್ಪರ್ಧಿಸಿದ್ದಾರೆ. ಅಹಮದಾಬಾದ್‌ನ ವಿರಾಮಗಮ್‌ನಲ್ಲಿ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಕಣಕ್ಕಿಳಿದಿದ್ದಾರೆ. ಗಾಂಧಿನಗರ ದಕ್ಷಿಣದಿಂದ ಅಲ್ಪೇಶ್ ಠಾಕೂರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

*ದಲಿತ ನಾಯಕ ಜಿಗ್ನೇಶ್ ಮೇವಾನಿ ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

*ಗುಜರಾತ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುಖರಾಮ್ ರಥ್ವಾ ಅವರು ಛೋಟಾ ಉದೇಪುರ್ ಜಿಲ್ಲೆಯ ಜೆಟ್‌ಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

*ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

ನರೇಂದ್ರ ಮೋದಿ
Know all about
ನರೇಂದ್ರ ಮೋದಿ
English summary
All eyes are on the exit polls as voting for the second phase ended in Gujarat. 93 seats spread across central and north Gujarat voted today in the triangular contest between the ruling BJP, Congress and Arvind Kejriwal's Aam Aadmi Party,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X