• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನಕ್ಕೆ ತೆರಳುವಾಗ ಪ್ರಧಾನಿ ಮೋದಿ ರೋಡ್‌ಶೋ: 'ಎಚ್ಚರಿಕೆಯ ಕರೆ', 'ವಿವಿಐಪಿ ಅಟ್ಟಹಾಸ' ಎಂದ ವಿರೋಧ ಪಕ್ಷಗಳು

|
Google Oneindia Kannada News

ಅಹಮದಾಬಾದ್‌, ಡಿಸೆಂಬರ್‌ 5: ಗುಜರಾತ್‌ ವಿಧಾನಸಭೆಗೆ ಇಂದು ಎರಡನೇ ಹಾಗೂ ಅಂತಿಮ ಹಂತದ ಮತದಾನ ನಡೆಯುತ್ತಿದೆ. ಮತದಾನ ಮತಗಟ್ಟೆಗೆ ತೆರಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ನಡಿಗೆಯ ಮೂಲಕ ರೋಡ್‌ಶೋ ನಡೆಸಿದರು. ರಸ್ತೆಯ ಎರಡೂ ಬದಿಯಲ್ಲಿ ನೆರೆದಿದ್ದ ಸಾವಿರಾರು ಜನರತ್ತ ಪ್ರಧಾನಿ ಕೈಬೀಸುತ್ತಿದ್ದ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿವೆ. ಪ್ರಧಾನಿ ರೋಡ್ ಶೋ ವೇಳೆಯ ಲೈವ್‌ ಪ್ರಸಾರವನ್ನು ಸುದ್ದಿ ಮಾಧ್ಯಮಗಳು ಮಾಡಿವೆ. ಈ ಕುರಿತು ವಿರೋಧ ಪಕ್ಷಗಳು ಕೆಂಡಾಮಂಡಲವಾಗಿದೆ. ಇದು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಕಾಂಗ್ರೆಸ್‌ ಆರೋಪಿಸಿದೆ.

ನೀತಿ ಸಂಹಿತೆ ಉಲ್ಲಂಘಿಸಿದ ಪ್ರಧಾನಿ ಮೋದಿ

ನೀತಿ ಸಂಹಿತೆ ಉಲ್ಲಂಘಿಸಿದ ಪ್ರಧಾನಿ ಮೋದಿ

ಮತದಾನಕ್ಕೆ ಬರುವಾಗ ರೋಡ್‌ ಶೋ ಮಾಡಿದ ಮೋದಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ವಿಚಾರವಾಗಿ ವಿಡಿಯೊ ಹೇಳಿಕೆ ನೀಡಿರುವ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಪವನ್ ಖೇರಾ, ಭಾರತೀಯ ಜನತಾ ಪಕ್ಷವು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಆಗಾಗ್ಗೆ ಉಲ್ಲಂಘಿಸಿದೆ. ಈ ಕುರಿತು ಭಾರತ ಚುನಾವಣಾ ಆಯೋಗವು ಮೌನ ವಹಿಸಿದೆ ಎಂದು ಹೇಳಿದ್ದಾರೆ.

ಬಿಜೆಪಿಯು ಚುನಾವಣಾ ಆಯೋಗವನ್ನು ಮೌನಗೊಳಿಸಿರುವ ನಡೆಯುವ ಪ್ರಜಾಪ್ರಭುತ್ವಕ್ಕೆ ಎಚ್ಚರಿಕೆಯ ಕರೆ ಎಂದು ಖೇರಾ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರ 'ರೋಡ್‌ಶೋ' ಅನ್ನು ಜಾಹೀರಾತಿನ ವ್ಯಾಖ್ಯಾನದಡಿಯಲ್ಲಿ ತರಲು ಕಾನೂನು ಅಂಶಗಳ ಬಗ್ಗೆ ಕಾಂಗ್ರೆಸ್ ಪಕ್ಷವು ಯೋಚಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಉಚಿತ ಪ್ರಚಾರ ಮಾಡಿದ ಸುದ್ದಿವಾಹಿನಿಗಳು

ಉಚಿತ ಪ್ರಚಾರ ಮಾಡಿದ ಸುದ್ದಿವಾಹಿನಿಗಳು

ಗುಜರಾತ್‌ನ ಅಹಮದಾಬಾದ್‌ನಲ್ಲಿ 2.5 ಗಂಟೆಗೂ ಹೆಚ್ಚು ಕಾಲ ಮತ ಚಲಾಯಿಸಲು ಹೋದ ಪ್ರಧಾನಿ ಮೋದಿ ಕುರಿತು ಎಲ್ಲಾ ಸುದ್ದಿ ವಾಹಿನಿಗಳು ಉಚಿತವಾಗಿ ನೇರಪ್ರಸಾರ ಮಾಡಿವೆ. ನೀವು (ಸುದ್ದಿವಾಹಿನಿಗಳು) ಬಿಜೆಪಿಗೆ ಶುಲ್ಕವನ್ನೇಕೆ ವಿಧಿಸಬಾರದು?' ಎಂದು ಖೇರಾ ಕೇಳಿದ್ದಾರೆ.

ಇದೆಲ್ಲವನ್ನೂ ನೀವು ಉಚಿತವಾಗಿ ಏಕೆ ಮಾಡುತ್ತಿದ್ದೀರಿ? ಈ ವಿಚಾರದ ಕುರಿತು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಚುನಾವಣೆ ನಡೆಯುತ್ತಿರುವಾಗಲೂ ರೋಡ್‌ಶೋ ನೇರ ಪ್ರಸಾರ ಮಾಡಲು ಬಿಜೆಪಿ ಒತ್ತಡ ಹೇರಿದೆ. ಪಕ್ಷದ ಚುನಾವಣಾ ವೆಚ್ಚದ ವ್ಯಾಪ್ತಿಯಲ್ಲಿ ಇಂತಹ ಪ್ರಚಾರವು ಬರುತ್ತದೆ. ಇದನ್ನು ಸಾಭೀತು ಪಡಿಸಲು ಸಾಧ್ಯವಾಗುವ ಕಾನೂನು ಅಂಶಗಳ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಖೇರಾ ಹೇಳಿದ್ದಾರೆ.

ಮೋದಿ ರೋಡ್‌ಶೋ ವಿವಿಐಪಿ ಅಟ್ಟಹಾಸ ಎಂದ ಮಮತಾ

ಮೋದಿ ರೋಡ್‌ಶೋ ವಿವಿಐಪಿ ಅಟ್ಟಹಾಸ ಎಂದ ಮಮತಾ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಅವರ ರೋಡ್‌ಶೋ ವಿವಿಐಪಿಗಳ ಅಟ್ಟಹಾಸವೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ವಿವಿಐಪಿಗಳು ನಿರ್ಭಯದಿಂದ ಏನೂ ಬೇಕಾದರೂ ಮಾಡಬಹುದು ಎಂಬ ಸಂದೇಶವನ್ನು ಪ್ರಧಾನಿ ಮೋದಿ ರವಾನಿಸಿದ್ದಾರೆ ಎಂದು ಮಮತಾ ಹರಿಹಾಯ್ದಿದ್ದಾರೆ.

'ಮತದಾನದ ದಿನದಂದು ರೋಡ್‌ಶೋಗೆ ಅನುಮತಿ ಇಲ್ಲ. ಆದರೆ, ಪ್ರಧಾನಿ ಮೋದಿ ಮತ್ತು ಅವರ ಪಕ್ಷವು ವಿವಿಐಪಿಗಳು, ಏನು ಬೇಕಾದರೂ ಮಾಡಬಹುದು. ಅವರನ್ನು ಕ್ಷಮಿಸಲಾಗುತ್ತದೆ' ಮಮತಾ ಟೀಕಿಸಿದ್ದಾರೆ.

ಇದು ರೋಡ್‌ಶೋ ಅಲ್ಲ ಎಂದು ಬಿಜೆಪಿ

ಇದು ರೋಡ್‌ಶೋ ಅಲ್ಲ ಎಂದು ಬಿಜೆಪಿ

ಇದು ರೋಡ್ ಶೋ ಅಲ್ಲ ಎಂದು ಸಮರ್ಥಿಸಿಕೊಂಡಿರುವ ಬಿಜೆಪಿ ವಕ್ತಾರ ಟಾಮ್ ವಡಕ್ಕನ್, 'ಪ್ರಧಾನಿಯವರ ಭದ್ರತಾ ಪಡೆಯನ್ನು ಮತಗಟ್ಟೆಯಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಲಾಗಿತ್ತು. ಪ್ರಧಾನಿ ಮತ ಚಲಾಯಿಸಲು ಮತಗಟ್ಟೆಗೆ ತೆರಳಿದರು' ಎಂದು ತಿಳಿಸಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಹಮದಾಬಾದ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಅಹಮದಾಬಾದ್ ನಗರದ ರಾನಿಪ್ ಪ್ರದೇಶದ ನಿಶಾನ್ ಹೈಸ್ಕೂಲ್‌ನಲ್ಲಿರುವ ಮತದಾನ ಕೇಂದ್ರಕ್ಕೆ ಬೆಳಿಗ್ಗೆ 9.30 ರ ಸುಮಾರಿಗೆ ತಮ್ಮ ಹಕ್ಕು ಚಲಾಯಿಸಲು ಆಗಮಿಸಿದರು. ಮತಗಟ್ಟೆ ಸಮೀಪ ನೆರೆದಿದ್ದ ಜನಸಮೂಹಕ್ಕೆ ತಮ್ಮ ಶಾಯಿಯ ಬೆರಳನ್ನು ತೋರಿಸಿದರು. ನಂತರ ಅವರು ಮತದಾನ ಕೇಂದ್ರದ ಬಳಿ ಇರುವ ತಮ್ಮ ಅಣ್ಣ ಸೋಮ ಮೋದಿ ಅವರ ಮನೆಗೆ ತೆರಳಿದರು.

English summary
The opposition parties have alleged that Prime Minister Narendra Modi's long walk to the polling booth to cast his vote in Ahmedabad violated the Model Code of Conduct. Congress's national spokesperson Pawan Khera said in a video statement that the Election Commission of India (ECI) has maintained silence over frequent violations of MCC by the Bharatiya Janata Party (BJP) during the assembly elections,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X