ಚುನಾವಣಾ ಅಖಾಡಕ್ಕಿಳಿದ ಜಿಗ್ನೇಶ್ ಗೆ ಅರುಂಧತಿ ರಾಯ್ ಉಡುಗೊರೆ
ಅಹಮದಾಬಾದ್, ನವೆಂಬರ್ 30: ಸಾರ್ವಜನಿಕರಿಂದ ಹಣ ಸಂಗ್ರಹಿಸಿ (ಕ್ರೌಡ್ ಫಂಡಿಂಗ್) ಚುನಾವಣೆಗೆ ಸ್ಪರ್ಧಿಸಲು ಜಿಗ್ನೇಶ್ ಮೆವಾನಿ ನಿರ್ಧರಿಸಿದ್ದಾರೆ. ಅದರಂತೆ ಹಲವಾರು ಜನ ಧನ ಸಹಾಯ ಮಾಡಿದ್ದು, ದೇಣಿಗೆ ನೀಡಿದವರಲ್ಲಿ ಅರುಂಧತಿ ರಾಯ್ ಮೊದಲ ಸ್ಥಾನದಲ್ಲಿದ್ದಾರೆ.
ವಡ್ಗಾಮ್ ನಿಂದ ಜಿಗ್ನೇಶ್ ಮೆವಾನಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ಘೋಷಿಸಿದೆ. ಆದರೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜಿಗ್ನೇಶ್ ಮೆವಾನಿ ಸುಮಾರು 9 ಲಕ್ಷ ರೂಪಾಯಿ ಹಣವನ್ನು ಜನರಿಂದಲೇ ಸಂಗ್ರಹಿಸಿದ್ದಾರೆ.

ಒಟ್ಟು 236 ಜನರು ಧನ ಸಹಾಯ ಮಾಡಿದ್ದು ಒಟ್ಟು ರೂ. 9,47,639 ಸಂಗ್ರಹಿಸಿದ್ದಾರೆ. ಕೇವಲ 22 ದಿನಗಳಲ್ಲಿ ಇಷ್ಟು ಹಣ ಸಂಗ್ರಹಿಸಲಾಗಿದೆ. ಜಿಗ್ನೇಶ್ ಮೆವಾನಿಯವರಿಗೆ ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ 3 ಲಕ್ಷ ರೂಪಾಯಿ ಹಣ ನೀಡಿ ಸ್ಪರ್ಧಿಸಲು ಹುರಿದುಂಬಿಸಿದ್ದಾರೆ.
ಫೇಸ್ಬುಕ್ ನಲ್ಲೂ ತಮ್ಮ ಚುನಾವಣಾ ಖರ್ಚಿಗೆ ಹಣ ನೀಡುವಂತೆ ಜಿಗ್ನೇಶ್ ಮೇವಾನಿ ಮನವಿ ಮಾಡಿಕೊಂಡಿದ್ದು ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.












Click it and Unblock the Notifications