ಕಾಂಗ್ರೆಸ್-ಹಾರ್ದಿಕ್ ಮಧ್ಯೆ ಕುದುರಿದ ಒಪ್ಪಂದ, ಇಂದು ಬಹಿರಂಗ ಘೋಷಣೆ
ಅಹಮದಾಬಾದ್, ನವೆಂಬರ್ 20: ಸೀಟು ಹಂಚಿಕೆ, ಮೀಸಲಾತಿ ನೀಡುವ ಸಂಬಂಧ ಕಾಂಗ್ರೆಸ್ ಮತ್ತು ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ (ಪಾಸ್) ನಡುವೆ ಕೊನೆಗೂ ಒಪ್ಪಂದ ಕುದುರಿದೆ.
ಶನಿವಾರ ರಾತ್ರಿ ಮಾತನಾಡಿರುವ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿನ್ಹಾ ಸೋಲಂಕಿ, ಹಾರ್ದಿಕ್ ಪಟೇಲ್ ನೇತೃತ್ವದ ಪಾಸ್ ಜತೆಗಿನ ಭಿನ್ನಭಿಪ್ರಾಯಗಳನ್ನು ಬಗೆಹರಿಸಿರುವುದಾಗಿ ಹೇಳಿದ್ದಾರೆ.

ನಮ್ಮ ನಡುವೆ ಇದ್ದ ಅಡೆತಡೆಗಳನ್ನು ನಿವಾರಿಸಿಕೊಂಡು ನಾವು ರಾಜಿ ಮಾಡಿಕೊಂಡಿದ್ದು ಒಪ್ಪಂದಕ್ಕೆ ಬಂದಿದ್ದೇವೆ ಎಂದು ಸೋಲಂಕಿ ಹೇಳಿದ್ದಾರೆ.
ಪಾಸ್ ಮುಖಂಡರ ಜತೆಗಿನ ಸಭೆಯ ನಂತರ ಮಾತನಾಡಿದ ಅವರು, "ಪಾಸ್ ಆಗಲೀ, ಅಲ್ಪೇಶ್ ಠಾಕೂರ್ ಆಗಲೀ, ಜಿಗ್ನೇಶ್ ಮೆವಾನಿ ಕೂಡಾ ಟಿಕೆಟ್ ಕೇಳಿಲ್ಲ," ಎಂದು ಹೇಳಿದ್ದಾರೆ.
ಆದರೆ ಪಾಸ್ ಮಾತ್ರ ಮೀಸಲಾತಿ ಬೇಡಿಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, "ನಮ್ಮ ಮೊದಲ ಮತ್ತು ಕೊನೆಯ ಬೇಡಿಕೆ ಮೀಸಲಾತಿ. ನಾಳೆ (ಅಂದರೆ ನವೆಂಬರ್ 20) ಹಾರ್ದಿಕ್ ಪಟೇಲ್ ರಾಜ್ ಕೋಟ್ ನಲ್ಲಿ ಈ ಸಂಬಂಧ ತಮ್ಮ ನಿರ್ಧಾರ ಘೋಷಿಸಲಿದ್ದಾರೆ," ಎಂದು ಪಾಸ್ ಸಂಚಾಲಕ ದಿನೇಶ್ ಬಂಭಾನಿಯಾ ಹೇಳಿದ್ದಾರೆ.












Click it and Unblock the Notifications