ಗುಜರಾತ್ ವಿಧಾನಸಭಾ ಚುನಾವಣೆ ಸಮೀಕ್ಷೆ: ಬಿಜೆಪಿಗೆ ಮತ್ತೆ ಅಧಿಕಾರದ ಗದ್ದುಗೆ

ಅಹ್ಮದಾಬಾದ್‌, ನವೆಂಬರ್ 5: ಗುಜರಾತ್‌ನಲ್ಲಿ ಆಡಳಿತ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ ಡಿಸೆಂಬರ್‌ 1ರಿಂದ 5ರವರೆಗೆ ಎರಡು ಹಂತದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರ ಉಳಿಸಿಕೊಳ್ಳುವುದರ ಜೊತೆಗೆ ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುವು ನಿರೀಕ್ಷೆಯಲ್ಲಿದೆ.

ಚುನಾವಣೆಗೂ ಮುನ್ನ ನಡೆದಿರುವ ಸಿ-ವೋಟರ್‌-ಎಬಿಪಿ ಒಪಿನಿಯನ್ ಪೋಲ್‌ ಪ್ರಕಾರ, ಆಡಳಿತರೂಢ ಬಿಜೆಪಿ ಗುಜರಾತ್‌ನ 182 ಕ್ಷೇತ್ರಗಳಲ್ಲಿ 131ರಿಂದ 139 ಸ್ಥಾನಗಳನ್ನು ಪಡೆಯಲಿದೆ. 2017 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳಿಸಿಕೊಂಡಿತ್ತು. ಕಾಂಗ್ರೆಸ್‌ ಕಳೆದ ಚುನಾವಣೆಯಲ್ಲಿ 77 ಸ್ಥಾನ ಗಿಟ್ಟಿಸಿಕೊಂಡಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ 31ರಿಂದ 39 ಸ್ಥಾನಗಳಿಗೆ ಕುಸಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಇನ್ನೂ ಗುಜರಾತ್ ಚುನಾವಣೆಯಲ್ಲಿ ಅಚ್ಚರಿ ಮೂಡಿಸಬಹುದಾದ ಪಕ್ಷವಾಗಿರುವ ಆಮ್‌ ಆದ್ಮಿ ಪಕ್ಷ 7 ರಿಂದ 15 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಿ-ವೋಟರ್ ಸಮೀಕ್ಷೆ ತಿಳಿಸಿದೆ. 2017 ರ ಚುನಾವಣೆಯಲ್ಲಿ ಎಎಪಿ ಗುಜರಾತ್‌ನಲ್ಲಿ ಒಂದು ರಾಜಕೀಯ ಪಕ್ಷವಾಗಿ ಅಸ್ತಿತ್ವ ಕಂಡುಕೊಂಡಿರಲಿಲ್ಲ. ಅದರೆ ಮುಂಬರುವ ಚುನಾವಣೆಯಲ್ಲಿ ಎಎಪಿ ಪಕ್ಷ ಕಾಂಗ್ರೆಸ್ ಮತಗಳ ಬಹುದೊಡ್ಡ ಪಾಲು ಸೆಳೆದುಕೊಳ್ಳಲಿದೆ ಎಂದು ಸಮೀಕ್ಷೆ ಸುಳಿವು ನೀಡಿದೆ.

ಚುನಾವಣಾ ಸಮೀಕ್ಷೆಯ ಬಗ್ಗೆ ಮಾತನಾಡಿರುವ ಗುಜರಾತ್ ಬಿಜೆಪಿ ವಕ್ತಾರ ಯಮಲ್ ವ್ಯಾಸ್‌, ಸಮೀಕ್ಷೆಯಲ್ಲಿ ಅಂದಾಜಿಸಿರುವ ಸ್ಥಾನಗಳಿಗಿಂತಲೂ ಇನ್ನೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಇನ್ನು ಎಎಪಿ ಗುಜರಾತ್‌ನಲ್ಲಿ ಶೂನ್ಯ ಸಾಧನೆ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಆದರೆ ಚುನಾವಣಾ ಪೂರ್ವ ಸಮೀಕ್ಷೆಯ ವರದಿಯನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ಮತ್ತು ಎಎಪಿ ಪಕ್ಷಗಳು, ಇದು ಕೇವಲ ಮತದಾರರನ್ನು ದಾರಿ ತಪ್ಪಿಸುವ ಉದ್ದೇಶವಾಗಿದೆ ಎಂದು ಆರೋಪಿಸಿವೆ.

Gujarat Elections BJP is Expected to win more seats than Opinion poll

ಕಾಂಗ್ರೆಸ್ ವಕ್ತಾರ ಅಮಿತ್ ನಾಯಕ್ ಸಮೀಕ್ಷೆ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿ " ಈ ಹಿಂದೆಯೂ ಇಂತಹ ಹಲವಾರು ಸಮೀಕ್ಷೆಗಳ ವರದಿಗಳು ತಪ್ಪು ಎಂದು ಸಾಬೀತಾಗಿದೆ. ಬಿಜೆಪಿ ಆಡಳಿತ ವಿರೋಧಿ ಮತಗಳನ್ನು ವಿಭಜಿಸುವುದಕ್ಕಾಗಿ ಗುಜರಾತ್‌ಗೆ ಎಎಪಿ ಮತ್ತು ಎಐಎಂಐಎಂ ಪಕ್ಷಗಳನ್ನು ತಂದಿದೆ. ಆದರೆ ಈ ಬಾರಿ ಅದರ ತಂತ್ರಗಳು ವಿಫಲಗೊಳ್ಳುತ್ತದೆ, ಏಕೆಂದರೆ ಜನರು ಎಎಪಿ ಪಕ್ಷ ಬಿಜೆಪಿಯ 'ಬಿ' ಟೀಮ್ ಎಂದು ಅರಿತುಕೊಳ್ಳುವುದನ್ನ ಪ್ರಾರಂಭಿಸಿದ್ದಾರೆ. ಸಮೀಕ್ಷೆಗೆ ವಿರುದ್ಧವಾಗಿ ಕಾಂಗ್ರೆಸ್ ಕನಿಷ್ಠ 125 ಸ್ಥಾನಗಳನ್ನು ಗೆಲ್ಲುವ ಮೂಲಕ ಗುಜರಾತ್‌ನಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ದೆಹಲಿಯಲ್ಲಿ ಮೂರು ಬಾರಿ ಮತ್ತು ಪಂಜಾಬ್‌ನಲ್ಲಿ ಒಮ್ಮೆ ಇಂತಹ ಚುನಾವಣಾ ಪೂರ್ವ ಸಮೀಕ್ಷೆಗಳು ಸಂಪೂರ್ಣವಾಗಿ ತಪ್ಪಾಗಿರುತ್ತವೆ ಎಂದು ಜನರು ಸಾಬೀತುಪಡಿಸಿದ್ದಾರೆ. ಗುಜರಾತ್ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಗುತ್ತದೆ, ಜನರು ರಾಜ್ಯ ಸರಕಾರವನ್ನು ಬದಲಾಯಿಸಲು ನಿರ್ಧರಿಸಿದ್ದಾರೆ" ಎಂದು ಎಎಪಿ ವಕ್ತಾರ ಯೋಗೇಶ್ ಜಾಡ್ವಾನಿ ತಿಳಿಸಿದ್ದಾರೆ.

ರಾಜಕೀಯ ವಿಶ್ಲೇಷಕ ದಿಲೀಪ್ ಗೋಹಿಲ್ ಐಎಎನ್‌ಎಸ್‌ ಜೊತೆ ಮಾತನಾಡಿದ್ದು, ಸಮೀಕ್ಷೆಯ ಪ್ರಕಾರ ಎಎಪಿ ಶೇಕಡಾ 20 ರಷ್ಟು ವೋಟ್‌ ಶೇರ್‌ ಪಡೆಯಲಿದೆ. ಅದು ಆಡಳಿತ ಪಕ್ಷದ ಮತಗಳ ಪಾಲನ್ನು ಸಹಾ ಕಸಿದುಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಎಂದಿದ್ದಾರೆ. ಗುಜರಾತ್‌ನಲ್ಲಿ ಎಎಪಿಯ ಉಪಸ್ಥಿತಿಯಿಂದ ಬಿಜೆಪಿ ಸಾಕಷ್ಟು ಲಾಭ ಪಡೆಯುತ್ತಿದೆ ಎಂಬ ಆರಂಭಿಕ ಸೂಚನೆಗಳಿದ್ದರೂ, ಮುಂದೆ ಪರಿಸ್ಥಿತಿ ಬದಲಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+