ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ: ಬಿಜೆಪಿ ಟಿಕೆಟ್‌ಗಾಗಿ 40 ಪಕ್ಷಾಂತರ ಅಭ್ಯರ್ಥಿಗಳು ಪೈಪೋಟಿ

|
Google Oneindia Kannada News

ಗುಜರಾತ್ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕದನವಾಗಿದೆ. ಇದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾಗಿದ್ದರೂ, ಎಎಪಿ ಶತ ಪ್ರಯತ್ನದಿಂದ ಬಿಜೆಪಿ ಬಲ ಕಳೆದುಕೊಳ್ಳುವ ಹಾಗೆ ಮಾಡುವ ಸಾಧ್ಯತೆಯಿದೆ. ಹೀಗಿರುವಾಗ ರಾಜಕೀಯದ ಚದುರಂಗದಾಟದಲ್ಲಿ ಒಂಟೆ ಯಾವ ಕಡೆ ಕೂರುತ್ತದೆ ಎಂಬುದನ್ನು ಚುನಾವಣೆಯಲ್ಲಿ ಸಾರ್ವಜನಿಕರು ನಿರ್ಧರಿಸುತ್ತಾರೆ.

ಈ ನಡುವೆ ಚುನಾವಣೆಗೂ ಮುನ್ನ ಪಕ್ಷಾಂತರಿ ನಾಯಕರ ಪ್ರಸ್ತಾಪವೂ ಮುನ್ನೆಲೆಗೆ ಬರುತ್ತಿದೆ. ಈ ನಾಯಕರಲ್ಲಿ ಈಗ ಬಿಜೆಪಿಯಲ್ಲಿ ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೋರ್ ಅವರಂತಹ ಕಾಂಗ್ರೆಸ್ಸಿಗರು ಸೇರಿದ್ದಾರೆ. ಕಾಂಗ್ರೆಸ್ ತೊರೆದಿರುವ ಈ ನಾಯಕರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಆದರೆ ಸಾಧ್ಯತೆ ಎಷ್ಟಿದೆ ಅನ್ನೋ ಕುತೂಹಲ ಮೂಡಿದೆ.

ಕಾಂಗ್ರೆಸ್ ಪಕ್ಷ ತೊರೆದ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡುವ ನಿರೀಕ್ಷೆ ಇದ್ದರೂ ಮೂಲ ಬಿಜೆಪಿಗರಿಗೆ ಇದು ಭಾರೀ ಹೊಡೆತ ಬೀಳಲಿದೆ. ಇದರಿಂದ ಪಕ್ಷದಲ್ಲಿ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆಗಳು ಇವೆ. ಹೀಗಾಗಿ ಪಕ್ಷಾಂತರ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡುತ್ತೋ? ಇಲ್ವೋ? ಅನ್ನೋ ಅನುಮಾನ ವ್ಯಕ್ತವಾಗಿದೆ.

ವಾಸ್ತವವಾಗಿ, ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೂರ್ ಗುಜರಾತ್‌ನಲ್ಲಿ ಬಲಾಢ್ಯ ಕಾಂಗ್ರೆಸ್ ನಾಯಕರಾಗಿದ್ದರು. ಆದರೆ ಹೈಕಮಾಂಡ್ ಅಥವಾ ರಾಹುಲ್ ಗಾಂಧಿಯಂತಹ ನಾಯಕರೊಂದಿಗೆ ಅವರ ನೇರ ಮಾತುಕತೆ ಇರಲಿಲ್ಲ. ಇದರಿಂದ ಬೇಸರಗೊಂಡು ಇದೀಗ ಪ್ರಜಾಸತ್ತಾತ್ಮಕ ಪಕ್ಷ ಎಂದು ಹೇಳಿಕೊಂಡು ಹಾರ್ದಿಕ್ ಮತ್ತು ಅಲ್ಪೇಶ್ ಬಿಜೆಪಿಗೆ ಸೇರ್ಪಡೆಗೊಂಡರು. 2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಬಯಸುತ್ತಿದ್ದಾರೆ.

ಎಲ್ಲಿಂದ ಸ್ಪರ್ಧಿಸುತ್ತಾರೆ ಹಾರ್ದಿಕ್

ಎಲ್ಲಿಂದ ಸ್ಪರ್ಧಿಸುತ್ತಾರೆ ಹಾರ್ದಿಕ್

ಪಾಟೀದಾರ್ ಮೀಸಲಾತಿ ಚಳವಳಿಯ ನೇತೃತ್ವದ ಮೂಲಕ ಖ್ಯಾತಿ ಪಡೆದ ಹಾರ್ದಿಕ್ ಪಟೇಲ್ ಅವರಿಗೆ ಕೇವಲ 29 ವರ್ಷ ವಯಸ್ಸು. ವರದಿಯ ಪ್ರಕಾರ ಗುಜರಾತ್ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಬಿಜೆಪಿ ಸೇರಿರುವ ಹಾರ್ದಿಕ್ ಪಟೇಲ್ ಬಿಜೆಪಿಗೆ ಪ್ರಮುಖ ಅಭ್ಯರ್ಥಿಯಾಗಬಹುದು. ಹೀಗಾಗಿ ಹಾರ್ದಿಕ್ ಬಿಜೆಪಿ ಟಿಕೆಟ್‌ನಲ್ಲಿ ವಿರಾಮಗಾಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಎಲ್ಲಾ ಸಾಧ್ಯತೆಗಳಿವೆ.

ಹಾರ್ದಿಕ್ ಪಟೇಲ್ ಅವರ ಸಮಕಾಲೀನರಾದ ಅಲ್ಪೇಶ್ ಠಾಕೋರ್ ಅವರು ತಮ್ಮ ಜಾತಿಯ ಮೀಸಲಾತಿಯನ್ನು ವಿರೋಧಿಸಲು ಚಳವಳಿಯಲ್ಲಿ ಸೇರಿಕೊಂಡಿದ್ದರು. TOI ವರದಿಯ ಪ್ರಕಾರ, ಅಲ್ಪೇಶ್ ಕೋಲಿ ಅವರು ಠಾಕೋರ್ ಸಮುದಾಯಕ್ಕೆ ಮೀಸಲಾತಿ ಮತ್ತು ಪ್ರಯೋಜನಗಳನ್ನು ರಕ್ಷಿಸಲು ಹಾರ್ದಿಕ್ ಅವರ ಪಾಟಿದಾರ್ ಚಳುವಳಿಗೆ ಸಮಾನಾಂತರವಾಗಿ ಮತ್ತೊಂದು ಚಳುವಳಿಯನ್ನು ನಡೆಸಿದರು. ಕಾಂಗ್ರೆಸ್‌ನಲ್ಲಿದ್ದ ಅಲ್ಪೇಶ್ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಬಹುದು.

 ಬಿಜೆಪಿಗೆ ಸವಾಲಾದ ಟಿಕೆಟ್ ಹಂಚಿಕೆ

ಬಿಜೆಪಿಗೆ ಸವಾಲಾದ ಟಿಕೆಟ್ ಹಂಚಿಕೆ

ಪಕ್ಷ ಬದಲಿಸಿದ ನಾಯಕರು ಬಿಜೆಪಿಯ ಚಿಹ್ನೆಯ ಮೇಲೆ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಪಡೆಯುತ್ತಾರೆ ಎಂಬ ಸಂಪೂರ್ಣ ಭರವಸೆ ಹೊಂದಿದ್ದಾರೆ. ಅಂತಹ ನಾಯಕರ ಪೈಕಿ ಕಾಂಗ್ರೆಸ್ಸಿಗರ ಪಟ್ಟಿ ಉದ್ದವಾಗುತ್ತಿದೆ. 2017 ರ ವಿಧಾನಸಭಾ ಚುನಾವಣೆಯ ನಂತರ 35 ಕ್ಕೂ ಹೆಚ್ಚು ಕಾಂಗ್ರೆಸ್ ಸದಸ್ಯರು ಪಕ್ಷ ಬದಲಾಯಿಸಿದರು ಮತ್ತು ಈಗ 2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅಂತಹ ಪಕ್ಷಾಂತರಿ ನಾಯಕರಿಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕತ್ವದ ಮೇಲೆ ಒತ್ತಡ ಹೇರುತ್ತಿದ್ದಾರೆ. ಗುಜರಾತ್‌ನಲ್ಲಿ ಪಕ್ಷ ಬದಲಿಸಿದ ನಂತರ ಟಿಕೆಟ್‌ಗಾಗಿ ಒತ್ತಡ ಹೇರುವ ನಾಯಕರ ಸಂಖ್ಯೆ 40 ಆಗಿದೆ.

40 ಪಕ್ಷಾಂತರ ಅಭ್ಯರ್ಥಿಗಳ ಕಥೆ ಏನು?

40 ಪಕ್ಷಾಂತರ ಅಭ್ಯರ್ಥಿಗಳ ಕಥೆ ಏನು?

ಇವರಲ್ಲಿ ಕೆಲವರು ಪಕ್ಷ ಬದಲಿಸಿ ಕಮಲದ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಗೆದ್ದು ಹಾಲಿ ಶಾಸಕರೂ ಆಗಿದ್ದಾರೆ. ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯಿಂದ ಮತ್ತೊಮ್ಮೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿರುವ ಇಂತಹ ಪಕ್ಷಾಂತರಿ ನಾಯಕರಲ್ಲಿ ಕುಂವರ್ಜಿ ಬವಲಿಯ ಹೆಸರೂ ಸೇರಿದೆ. ಬವಲಿಯಾ ಅವರು ಐದು ಬಾರಿ ಶಾಸಕರಾಗಿದ್ದರು ಮತ್ತು ಲೋಕಸಭೆಯ ಸಂಸದರೂ ಆಗಿದ್ದಾರೆ. ಸೋಮಾಭಾಯಿ ಕೋಲಿ ಪಟೇಲ್ ಅವರು ಸುರೇಂದ್ರನಗರದಿಂದ ಲೋಕಸಭಾ ಸದಸ್ಯರಾಗಿದ್ದರು. ಒಂದಕ್ಕಿಂತ ಹೆಚ್ಚು ಬಾರಿ ಲಿಂಬ್ಡಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಸೋಮಾಭಾಯಿ ಈ ಬಾರಿಯೂ ಟಿಕೆಟ್‌ಗಾಗಿ ಕಾಯುತ್ತಿದ್ದಾರೆ. ಮೋರ್ಬಿಯಲ್ಲಿ ಸೇತುವೆ ಕುಸಿದು ನೂರಾರು ಮಂದಿ ಸಾವನ್ನಪ್ಪಿದ ವಿವಾದದ ನಡುವೆಯೂ ಬ್ರಿಜೇಶ್ ಮೆರ್ಜಾ ಮೊರ್ಬಿ ಸ್ಥಾನದಿಂದ ಪ್ರಬಲ ಸ್ಪರ್ಧಿಯಾಗಿದ್ದಾರೆ. ಈ ಎಲ್ಲ ನಾಯಕರ ಇತಿಹಾಸ ಕಾಂಗ್ರೆಸ್ ಜೊತೆ ಸಂಪರ್ಕ ಹೊಂದಿದೆ.

ವಿಜಯ್ ರೂಪಾನಿ ಮತ್ತು ನಿತಿನ್ ಪಟೇಲ್

ವಿಜಯ್ ರೂಪಾನಿ ಮತ್ತು ನಿತಿನ್ ಪಟೇಲ್

ಗುಜರಾತಿನ ರಾಜಕಾರಣವನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡ ಜನರ ದೃಷ್ಟಿಯಲ್ಲಿ ಕಾಂಗ್ರೆಸ್‌ನ ಮಾಜಿ ನಾಯಕರಿಗೆ ಬಿಜೆಪಿ ಟಿಕೆಟ್‌ ಸಿಗುವುದು ಸವಾಲಷ್ಟೇ ಅಲ್ಲ, ಬಿಜೆಪಿಗೆ ದೊಡ್ಡ ಸಂದಿಗ್ಧವಾಗಿ ಪರಿಣಮಿಸಿದೆ. ಬಿಜೆಪಿಯು ತನ್ನ ಸಮರ್ಪಿತ ಕಾರ್ಯಕರ್ತರನ್ನು ಒಗ್ಗೂಡಿಸಿ ಉನ್ನತ ಉತ್ಸಾಹದಿಂದ ಇರಿಸಲು ಬಯಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಸಮಬಲ ಸಾಧಿಸಬೇಕಿದೆ. ಕಾಂಗ್ರೆಸ್ ಪಕ್ಷದಿಂದ ಪಕ್ಷಾಂತರ ಮಾಡಿದವರಿಗೆ ಬಿಜೆಪಿ ಸ್ಥಾನ ಕಲ್ಪಿಸಬೇಕಾದರೂ ಬಿಜೆಪಿ ಕಾರ್ಯಕರ್ತರ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ದೊಡ್ಡ ಸವಾಲಾಗಿದೆ.

ಈ ಬಾರಿ ಕಾಂಗ್ರೆಸ್ ತೊರೆದು ಕಮಲ ಹಿಡಿದಿರುವ ಹೆಚ್ಚಿನ ಸಂಖ್ಯೆಯ ನಾಯಕರನ್ನು ಟಿಕೆಟ್‌ಗೆ ಪರಿಗಣಿಸಲಾಗುತ್ತಿದೆ ಎಂದು ಬಿಜೆಪಿಯ ಪ್ರಮುಖ ಮೂಲಗಳು ಒಪ್ಪಿಕೊಂಡಿವೆ. ಶಾಸಕರಲ್ಲದ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸದ ಆದರೆ ಜನಸಾಮಾನ್ಯರಲ್ಲಿ ಸಾಕಷ್ಟು ಜನಪ್ರಿಯರಾಗಿರುವ ಮಾಜಿ ಕಾಂಗ್ರೆಸ್ ಸದಸ್ಯರನ್ನೂ ಇದು ಒಳಗೊಂಡಿದೆ. ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಬಿಜೆಪಿಯ ಹಿರಿಯ ನಾಯಕರನ್ನು ತೆರವುಗೊಳಿಸುವ ಸೂಚನೆಗಳೂ ಇವೆ ಎಂದು ಮೂಲಗಳು ತಿಳಿಸಿವೆ. ಪಕ್ಷವು ಅವರಿಗೆ ಸಂಘಟನೆಯೊಳಗೆ ಇತರ ಜವಾಬ್ದಾರಿಗಳನ್ನು ನೀಡಲು ಉದ್ದೇಶಿಸಿರುವ ಕಾರಣ ಟಿಕೆಟ್ ಹಂಚಿಕೆಗೆ ಅವರ ಹೆಸರನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿದು ಬಂದಿದೆ.

English summary
40 defector candidates are seeking BJP ticket for Gujarat assembly elections. Ticket distribution is a challenge for BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X