Gujarat Election Results 2022: ಗುಜರಾತ್‌ನಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಸಮಾಜವಾದಿ ಪಕ್ಷ
ಅಹಮದಾಬಾದ್, ಡಿಸೆಂಬರ್ 08: ಗುಜರಾತ್ ವಿಧಾನಸಭೆ ಚುನಾವಣೆಯ ಮತ ಎಣಿಕೆ(Gujarat Election Results 2022) ಪ್ರಕ್ರಿಯೆ ನಡೆಯುತ್ತಿದೆ. ಹೊರಬರುತ್ತಿರುವ ಫಲಿತಾಂಶಗಳ ಪ್ರಕಾರ, ಗುಜರಾತ್‌ನಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರ ಬರಲಿದೆ. ಭಾರೀ ಬಹುಮತ ಗಳಿಸುವ ಸಾಧ್ಯತೆ ನಿಚ್ಚಳವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸುವುದು ನಿಚ್ಚಳವಾಗಿದೆ. ಎಎಪಿ ತನ್ನ ನೆಲೆಯಲ್ಲಿ ಕಂಡುಕೊಳ್ಳುವತ್ತ ಮುನ್ನುಗ್ಗುತ್ತಿದೆ. ಅಚ್ಚರಿಯ ಬೆಳವಣಿಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಮೊದಲ ಬಾರಿಗೆ ಗುಜರಾತ್‌ನಲ್ಲಿ ಖಾತೆ ತೆರೆಯಲಿದೆ.
ಸೌರಾಷ್ಟ್ರದ ಪೋರಬಂದರ್ ಜಿಲ್ಲೆಯ ಕುಟಿಯಾನಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಕಂದಲ್ ಜಡೇಜಾ ಭಾರೀ ಅಂತರದಿಂದ ಮುನ್ನಡೆ ಸಾಧಿಸಿ, ಗುಜರಾತ್ ವಿಧಾನಸಭೆ ಪ್ರವೇಶಿಸಲು ಸಜ್ಜಾಗಿದೆ.
Recommended Video
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಬೆಳಿಗ್ಗೆ 12 ಗಂಟೆಗೆ ಎಸ್‌ಪಿ ಅಭ್ಯರ್ಥಿ ಜಡೇಜಾ ಅವರು ಭಾರತೀಯ ಜನತಾ ಪಕ್ಷದ ಧೆಲಿಬೆನ್ ಒಡೆದಾರರಿಗಿಂತ ಸುಮಾರು 6,500 ಮತಗಳ ಮುನ್ನಡೆ ಸಾಧಿಸಿ, ಗೆಲುವಿಗೆ ಹತ್ತಿರವಾಗಿದ್ದಾರೆ.

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದಿಂದ (ಎನ್‌ಸಿಪಿ) ಎರಡು ಬಾರಿ ಶಾಸಕರಾಗಿದ್ದ ಜಡೇಜಾ ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ನಂತರ ಅವರು ಶರದ್ ಪವಾರ್ ನೇತೃತ್ವದ ಪಕ್ಷವನ್ನು ತೊರೆದು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು.
ಕುಟಿಯಾನಾದಿಂದ ಎನ್‌ಸಿಪಿ ಅಭ್ಯರ್ಥಿಯಾಗಿ, ಜಡೇಜಾ 2012 ಮತ್ತು 2017 ರಲ್ಲಿ ಕ್ರಮವಾಗಿ 18,474 ಮತ್ತು 23,709 ರಲ್ಲಿ ಭಾರೀ ಅಂತರದಿಂದ ಗೆದ್ದಿದ್ದರು. 2012ರಲ್ಲಿ ಕುಟಿಯಾನಾದಲ್ಲಿ ಶೇ.64.36 ಮತ್ತು 2017ರಲ್ಲಿ ಶೇ.59.16ರಷ್ಟು ಮತದಾನವಾಗಿದ್ದು, ಈ ಬಾರಿ ಶೇ.56.58ರಷ್ಟು ಮತದಾನವಾಗಿದೆ

2012 ಮತ್ತು 2017 ರ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆ ಎನ್‌ಸಿಪಿ ಮೈತ್ರಿ ಮಾಡಿಕೊಂಡಿತ್ತು. ಆದರೆ, ಈ ಬಾರಿ ಎನ್‌ಸಿಪಿ-ಕಾಂಗ್ರೆಸ್ ಚುನಾವಣಾ ಮೈತ್ರಿಯು ಕುಟಿಯಾನ ಕ್ಷೇತ್ರವನ್ನು ಒಳಗೊಂಡಿರಲಿಲ್ಲ. ಬದಲಿಗೆ ಎರಡು ಪಕ್ಷಗಳು ನರೋಡಾ, ಉಮ್ರೇತ್ ಮತ್ತು ದೇವಗಧಬರಿಯಾ ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಂಡಿವೆ.
ಗುಜರಾತ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ಖಾತೆ ತೆರೆಯಲು ಸಮಾಜವಾದಿ ಪಕ್ಷ ಸಿದ್ಧವಾಗಿದೆ.












Click it and Unblock the Notifications