ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gujarat Election Results 2022: ಪತ್ನಿಯ ರೋಡ್‌ ಶೋನಲ್ಲಿ ಭಾಗಿಯಾದ ಕ್ರಿಕೆಟಿಗ ರವೀಂದ್ರ ಜಡೇಜಾ

|
Google Oneindia Kannada News

ಅಹಮದಾಬಾದ್‌, ಡಿಸೆಂಬರ್‌ 8: ಗುಜರಾತ್‌ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಬಹುತೇಕ ಮುಕ್ತಾಯ ಹಂತಕ್ಕೆ ಬಂದು ತಲುಪಿದೆ. ಬಿಜೆಪಿ ದಾಖಲೆಯ ಪ್ರಮಾಣದ ಬಹುಮತ ಸಾಧಿಸುವಲ್ಲಿ ಸಫಲವಾಗಿದೆ. ಕಾಂಗ್ರೆಸ್‌ ದೊಡ್ಡ ನಷ್ಟವನ್ನು ಅನುಭವಿಸಿದೆ. ಎಎಪಿಗೆ ಒಂದಂಕಿಯ ಸೀಟುಗಳು ದೊರೆಯುವುದು ಖಚಿತವಾಗಿದೆ. ಆ ಮೂಲಕ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಗುಜರಾತ್‌ನಲ್ಲಿ ನೆಲೆಕಂಡುಕೊಳ್ಳಲಿದೆ.

ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಜಾಮ್‌ನಗರ ಉತ್ತರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದರು.

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

ತಮ್ಮ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಕರ್ಸನ್ ಕರ್ಮುರ್ ಅವರನ್ನು 40,000 ಕ್ಕೂ ಹೆಚ್ಚು ಮತಗಳ ಅಂತರದಿಂದ ರಿವಾಬಾ ಸೋಲಿಸಿದ್ದಾರೆ. ಕಾಂಗ್ರೆಸ್‌ನ ಭೀಪೇಂದ್ರ ಸಿನ್ಹ ಜಡೇಜಾ ಮೂರನೇ ಸ್ಥಾನದಲ್ಲಿದ್ದಾರೆ.

Gujarat Election Results 2022 Rivaba holds roadshow with husband Ravindra Jadeja

ಬಿಜೆಪಿ ಬಿಡುಗಡೆ ಮಾಡಿದ್ದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ರಿವಾಬಾ ಜಡೇಜಾ ಹೆಸರಿತ್ತು. ಹಾಲಿ ಶಾಸಕ ಧರ್ಮೇಂದ್ರ ಜಡೇಜಾ ಅವರನ್ನು ಪಕ್ಷವು ಕೈಬಿಟ್ಟ ನಂತರ ರಿವಾಬಾ ಅವರಿಗೆ ಟಿಕೆಟ್ ನೀಡಲಾಯಿತು.

ಧರ್ಮೇಂದ್ರ ಜಡೇಜಾ ಅವರು 2012 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದು ನಂತರ ಬಿಜೆಪಿ ಸೇರಿದ್ದರು. ಅವರು 2017 ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಜಯಗಳಿಸಿದ್ದರು.

40,000 ಮತಗಳ ದೊಡ್ಡ ಪ್ರಮಾಣದ ಅಂತರದಲ್ಲಿ ಜಯಗಳಿಸಿರುವ ರಿವಾಬಾ ಅವರು ಜಾಮ್‌ನಗರದಲ್ಲಿ ರೋಡ್‌ ಶೋ ನಡೆಸಿದ್ದಾರೆ. ರಿವಾಬಾ ಅವರ ಗೆಲುವನ್ನು ಸಂಭ್ರಮಿಸಲು ಸಾವಿರಾರು ಬೆಂಬಲಿಗರು ರಸ್ತೆಯ ಇಕ್ಕೆಲಗಳಲ್ಲಿ ಕಾದು ನಿಂತಿದ್ದರು. ರಿವಾಬಾ ಅವರಿಗೆ ಶುಭಾಶಯ ಕೋರಿದರು.

Gujarat Election Results 2022 Rivaba holds roadshow with husband Ravindra Jadeja

ರಿವಾಬಾ ರೋಡ್‌ ಶೋನಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜ ಸಹ ಭಾಗಿಯಾಗಿದ್ದರು. ಅವರು ತೆರೆದ ವಾಹನದಲ್ಲಿ ಪತ್ನಿಯ ಹಿಂದೆ ನಿಂತು ಜನರತ್ತ ಕೈಬೀಸಿದರು. ಕೆಲ ಕ್ರಿಕೆಟ್‌ ಅಭಿಮಾನಿಗಳು ರಿವಾಬಾ ಹಾಗೂ ರವೀಂದ್ರ ಜಡೇಜಾ ಅವರ ಫೋಟೊಗಳನ್ನು ಹಿಡಿದುಕೊಂಡು ಜೈಕಾರ ಕೂಗಿದರು. ಹಿಂದೆ ನಿಂತಿದ್ದ ಜಡೇಜಾ ಅವರನ್ನು ಮುಂದೆ ಬಂದು ನಿಲ್ಲುವಂತೆ ರಿವಾಬಾ ಮನವಿ ಮಾಡಿದರು. ಈ ಎಲ್ಲ ಕ್ಷಣಗಳು ಕ್ಯಾಮಾರಾದಲ್ಲಿ ಸೆರೆಯಾಗಿವೆ.

ರಿವಾಬಾ ಜಡೇಜಾ ಈ ಹಿಂದೆ ಕರ್ನಿ ಸೇನಾದ ಸಂಘಟಕಿಯಾಗಿ ಕಾರ್ಯಾನಿರ್ವಹಿಸಿದ್ದಾರೆ. ವಿಪರ್ಯಾಸವೆಂದರೆ, ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ತಂದೆ ಹಾಗೂ ಸಹೋದರಿ ಕಾಂಗ್ರೆಸ್‌ ಪರ ಪ್ರಚಾರ ನಡೆಸಿದ್ದರು.

English summary
Cricketer Ravindra Jadeja was also involved in the Rivaba road show. He stood behind his wife in an open vehicle and waved at people. Some cricket fans held up photos of Rivaba and Ravindra Jadeja and chanted,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X