Gujarat Election Results 2022: ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿ ಸಂಭ್ರಮಾಚರಣೆ

ಅಹಮದಾಬಾದ್, ಡಿ.08: ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಪಕ್ಷದ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಸಂಭ್ರಮಾಚರಣೆಗೆ ಚಾಲನೆ ನೀಡಲಿದ್ದಾರೆ.

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ 6 ಗಂಟೆಗೆ ಪಕ್ಷದ ಸಂಭ್ರಮಾಚರಣೆಗೆ ಚಾಲನೆ ನೀಡಲಿದ್ದಾರೆ.

Recommended Video

      Gujarat Election Results: 150ಕ್ಕೂ ಸೀಟ್ ಗೆಲ್ಲುವತ್ತ ಬಿಜೆಪಿ, 7 ನೇ ಬಾರಿ ಸರ್ಕಾರ ರಚನೆ ಖಚಿತ | Oneindia

      ರಾಜ್ಯದಲ್ಲಿ ತಮ್ಮ ಪಕ್ಷದ ಪ್ರಚಾರದ ಕೊನೆಯ ಕೆಲವು ವಾರಗಳಲ್ಲಿ ಪ್ರಧಾನಿಯವರು 30ಕ್ಕೂ ಹೆಚ್ಚು ಚುನಾವಣಾ ಮೆರವಣಿಗೆಗಳನ್ನು ನಡೆಸಿದ್ದರು. ತವರು ರಾಜ್ಯದಲ್ಲಿ ಬಿಜೆಪಿ ಅತ್ಯುತ್ತಮ ಫಲಿತಾಂಶ ನೀರಿಕ್ಷಿಸುತ್ತಿದ್ದು, ಇದಕ್ಕೆ ಅಭ್ಯರ್ಥಿಗಳ ಮುನ್ನಡೆ ಮತ್ತಷ್ಟು ಹುರುಪು ನೀಡಿದೆ.

      Gujarat Election Results 2022: PM Modi To Lead Celebrations in Delhi

      ಈ ಮುನ್ನಡೆ ಗೆಲುವಾಗಿ ಬದಲಾದರೇ ಬಿಜೆಪಿಗಷ್ಟೇ ಅಲ್ಲ ರಾಜ್ಯದ ಪಾಲಿಗೆ ದಾಖಲೆಯ ಫಲಿತಾಂಶವಾಗಲಿದೆ. ಮಾಧವಸಿಂಹ ಸೋಲಂಕಿ ನೇತೃತ್ವದ ಕಾಂಗ್ರೆಸ್ 1985 ರಲ್ಲಿ 149 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಗೆಲುವು ದಾಖಲಿಸಿದೆ.

      ಗುಜರಾತ್‌ನಲ್ಲಿ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಐದು ವರ್ಷಗಳ ಹಿಂದಿನ ಸ್ಥಾನಗಳನ್ನೂ ಉಳಿಸಿಕೊಳ್ಳುವಲ್ಲಿ ಈ ಬಾರಿ ಎಡವಿದೆ. ಸುಮಾರು 60 ಸ್ಥಾನಗಳಿಮದ 20 ಸ್ಥಾನಗಳಿಗೆ ಇಳಿದಿದೆ. ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಆರು ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.

      ಪ್ರಧಾನಿಯವರು ಎಂದಿನಂತೆ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದರು. ಇನ್ನೂ, ಗುಜರಾತಿನಲ್ಲಿ ಸುಪ್ತ ಆಡಳಿತ ವಿರೋಧಿ ಮನಸ್ಥಿತಿ ಎಂಬುದನ್ನು ಈ ಮುನ್ನಡೆ ಛಿದ್ರಗೊಳಿಸಿದೆ.

      Gujarat Election Results 2022: PM Modi To Lead Celebrations in Delhi

      ಬಿಜೆಪಿ 1995 ರಿಂದ ಗುಜರಾತ್ ಅನ್ನು ಕಳೆದುಕೊಂಡಿಲ್ಲ. 2014 ರಲ್ಲಿ ದೇಶದ ಉನ್ನತ ಹುದ್ದೆಗೆ ಆಯ್ಕೆಯಾಗುವ ಮೊದಲು ಪ್ರಧಾನಿ ಮೋದಿ 13 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕಳೆದ ರಾಜ್ಯ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಗೆದ್ದಿದೆ. ಇಂದಿನವರೆಗೂ, ಗುಜರಾತ್‌ನಲ್ಲಿ ಬಿಜೆಪಿ 2002 ರಲ್ಲಿ 127 ಸ್ಥಾನಗಳನ್ನು ಗೆದ್ದಿರುವುದೇ ಸಾಧನೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+