Gujarat Election Results 2022: ಅತ್ಯಾಚಾರಿಗಳಿಗೆ 'ಸಂಸ್ಕಾರಿ'ಗಳು ಎಂದು ಕರೆದಿದ್ದ ಬಿಜೆಪಿ ಶಾಸಕ ಗೆಲುವು

ಅಹಮದಾಬಾದ್‌, ಡಿಸೆಂಬರ್‌ 8: ಗುಜರಾತ್‌ ವಿಧಾನಸಭೆ ಚುನಾವಣೆಯ ಫಲಿತಾಂಶಗಳು (Gujarat Assembly Elections 2022) ಬಹುತೇಕ ಸ್ಪಷ್ಟವಾಗುತ್ತಿವೆ. ಕಳೆದ ಎರಡು ದಶಕಗಳಿಂದ ಗುಜರಾತ್‌ನಲ್ಲಿ ಅಧಿಕಾರ ಹಿಡಿದಿರುವ ಭಾರತೀಯ ಜನತಾ ಪಕ್ಷವು(BJP) ಅಭೂತಪೂರ್ವ ಗೆಲುವು ದಾಖಲಿಸಿದೆ. ಕಾಂಗ್ರೆಸ್‌ ಪಕ್ಷವು ಅತಿ ಹೀನಾಯವಾಗಿ ಸೋತಿದೆ. ಇನ್ನು ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು(AAP) ಅಂದುಕೊಂಡಷ್ಟು ಪ್ರದರ್ಶನ ನೀಡಿಲ್ಲ.

ಈ ಚುನಾವಣೆಯಲ್ಲಿ ಅತಿಹೆಚ್ಚು ಗಮನ ಸೆಳೆದಿದ್ದ ಕ್ಷೇತ್ರಗಳಲ್ಲಿ ಗೋದ್ರಾ ಸಹ ಒಂದು. ಗೋದ್ರಾ ಹತ್ಯಾಕಾಂಡ ನಡೆದ ನಂತರ ಗೋದ್ರಾ ಕ್ಷೇತ್ರವು ದೇಶದಾದ್ಯಂತ ಕುಖ್ಯಾತಿ ಗಳಿಸಿತು. ಗೋದ್ರಾ ಹತ್ಯಾಕಾಂಡದ ನಂತರ ಗುಜರಾತ್‌ನಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಎರಡು ಕೋಮುಗಳ ನಡುವೆ ನಡೆದಿದ್ದ ಗಲಭೆಗಳಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರು. ಇಂತಹ ಕ್ಷೇತ್ರವು ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ.

ಈಗ ಚುನಾವಣಾ ಆಯೋಗ ನೀಡಿರುವ ಫಲಿತಾಂಶದ ಪ್ರಕಾರ ಗೋದ್ರದಾಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಸಿಂಹ ರೌಲ್ಜಿ ಭಾರೀ ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಸುಮಾರು 20, 000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

Gujarat Election Results 2022 BJP MLA Who Called Bilkis Banos Rapists Sanskari

ಅತ್ಯಾಚಾರಿಗಳನ್ನು ಸಂಸ್ಕಾರಿಗಳು ಎಂದು ಕರೆದಿದ್ದ ಶಾಸಕ

ಗೋದ್ರಾ ಸೆಂಟ್ರಲ್‌ನಲ್ಲಿ ಜಯಗಳಿಸಿರುವ ಶಾಸಕ ರೌಲ್ಜಿ, ವಿವಾದಿತ ಹೇಳಿಕೆ ನೀಡಿದ್ದರು. ಬಿಲ್ಕಿನ್‌ ಬಾನೊ ಅತ್ಯಾಚಾರದಲ್ಲಿ ಅಪರಾಧಿಗಳಾಗಿರುವ ವ್ಯಕ್ತಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. 11 ಅಪರಾಧಿಗಳನ್ನು ಆಗಸ್ಟ್‌ 15ರಂದು ಬಿಡುಗಡೆ ಮಾಡಲಾಗಿತ್ತು.

ಈ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿಸುವಲ್ಲಿ ರೌಲ್ಜಿ ಪ್ರಮುಖ ಪಾತ್ರವಹಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಅವರು, ಅತ್ಯಾಚಾರಿಗಳು 'ಸಂಸ್ಕಾರಿ ಬ್ರಾಹ್ಮಣರು' ಎಂದು ಕರೆದಿದ್ದರು. ಈ ಹೇಳಿಕೆ ದೇಶದೆಲ್ಲೆಡೆ ಆಕ್ರೋಶವನ್ನು ಉಂಟು ಮಾಡಿತ್ತು.

Gujarat Election Results 2022 BJP MLA Who Called Bilkis Banos Rapists Sanskari

ಗೋಧ್ರಾ ರೈಲು ಹತ್ಯಾಕಾಂಡದ ಬಳಿಕ ಗುಜರಾತ್‌ನಲ್ಲಿ ವ್ಯಾಪಕ ಕೋಮು ಹಿಂಸಾಚಾರ ನಡೆದಿತ್ತು. ಆಗ ಬಿಲ್ಕಿನ್‌ ಬಾನೊ ಅವರ ಮೇಲೆ ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಆಕೆಯ ಪರಿವಾರದ 7 ಸದಸ್ಯರನ್ನು ಅಪರಾಧಿಗಳು ಹತ್ಯೆ ಮಾಡಿದ್ದರು. ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ಅಪರಾಧಿಗಳೆಂದು ಕೋರ್ಟ್‌ ತೀರ್ಪು ನೀಡಿತ್ತು. 2008ರ ಜನವರಿ 21 ರಂದು ವಿಶೇಷ ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್‌ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಸಂತ್ರಸ್ತೆ ಬಿಲ್ಕಿಸ್‌ ಬಾನು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+