ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ 2022: ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ

|
Google Oneindia Kannada News

ನವದೆಹಲಿ, ನವೆಂಬರ್‌ 15: ಡಿಸೆಂಬರ್‌ ತಿಂಗಳಲ್ಲಿ ನಡೆಯುವ ಗುಜರಾತ್ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೋಮವಾರ ರಾತ್ರಿ ತನ್ನ 12 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ಇರದಲ್ಲಿ ಉತ್ತರ ಗುಜರಾತ್‌ನ ರಾಧನ್‌ಪುರದ ಬದಲಿಗೆ ಗಾಂಧಿನಗರ ದಕ್ಷಿಣ ಕ್ಷೇತ್ರದಿಂದ ಹಿಂದುಳಿದ ವರ್ಗದ ನಾಯಕ ಅಲ್ಪೇಶ್‌ ಠಾಕೂರ್‌ ಅವರನ್ನು ಕಣಕ್ಕಿಳಿಸಿದೆ.

182 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗುಜರಾತ್‌ ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಇದುವರೆಗೆ ಬಿಜೆಪಿ 178 ಅಭ್ಯರ್ಥಿಗಳನ್ನು ಘೋಷಿಸಿದೆ. ಅಲ್ಪೇಶ್‌ ಠಾಕೂರ್‌ ಅವರು 2017ರಲ್ಲಿ ರಾಧನ್‌ಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಜಯಶೀಲರಾಗಿದ್ದರು. ಆದರೆ 2019ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.

ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿಯಲ್ಲ; ಬಿಜೆಪಿ ನಾಯಕನ ಭವಿಷ್ಯ! ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿಯಲ್ಲ; ಬಿಜೆಪಿ ನಾಯಕನ ಭವಿಷ್ಯ!

ಬಳಿಕ ನಡೆದ ಉಪಚುನಾವಣೆಯಲ್ಲಿ ಅವರು ರಾಧನ್‌ಪುರ ಕ್ಷೇತ್ರದಿಂದ ಸೋತರು. ಈಗ ಬಿಜೆಪಿ ಅವರನ್ನು ಗಾಂಧಿನಗರ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಿದೆ. ಇತ್ತೀಚಿನ ಪಟ್ಟಿಯಲ್ಲಿ ಇಬ್ಬರು ಮಹಿಳೆಯರು ಸೇರಿದ್ದು, ಇದುವರೆಗೆ ಬಿಜೆಪಿಯಿಂದ ಸ್ಪರ್ಧೆಗೆ ಇಳಿದಿರುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆ 17ಕ್ಕೆ ಏರಿಕೆ ಕಂಡಿದೆ. ಕೇಸರಿ ಪಡೆಯು ಗಾಂಧಿನಗರ ಉತ್ತರ ಕ್ಷೇತ್ರದಿಂದ ರೀತಾಬೆನ್‌ ಪಟೇಲ್‌ ಹಾಗೂ ಪಠಾಣ್‌ ಕ್ಷೇತ್ರದಿಂದ ರಾಜುಲ್‌ ದೇಸಾಯಿ ಅವರನ್ನು ಕಣಕ್ಕಿಳಿಸಿದೆ.

Gujarat Election 2022: 3rd list of BJP candidates released

ಇದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರು ಪಠಾಣ್‌ ಕ್ಷೇತ್ರದಿಂದ ರಾಜುಲ್‌ ದೇಸಾಯಿ ಹೆಸರನ್ನು ಘೋಷಿಸುವ ಸಾಧ್ಯತೆ ಇದ್ದರಿಂದ ಗಾಂಧೀನಗರದ ಕೇತ್ರದ ಬಿಜೆಪಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಕಳೆದ ವಾರ ಕಾಂಗ್ರೆಸ್‌ ಹಾಲಿ ಶಾಸಕ ಭವೇಶ್‌ ಕಟಾರಾ ಬಿಜೆಪಿಗೆ ಅಡ್ಡಗಾಲು ಹಾಕಿದ್ದರಿಂದ ಝಲೋಧ್‌ನಲ್ಲಿ ಆಡಳಿತ ಪಕ್ಷ ಬಿಜೆಪಿ ಮಹೇಶ್‌ ಭೂರಿಯಾ ಅವರನ್ನು ಸ್ಪರ್ಧೆಗೆ ಇಳಿಸಿತು.

ಪಕ್ಷವು ಗಾಂಧಿನಗರ ಜಿಲ್ಲೆಯ ಕಲೋನ್‌ನಿಂದ ಇನ್ನೋಬ್ಬ ಠಾಕೂರ್‌ ಸಮುದಾಯದ ಸದಸ್ಯ ಬಕಾಜಿ ಠಾಕೂರ್‌ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿಯ ಈ ನಡವಳಿಕೆ ಹಿಂದುಳಿದ ವರ್ಗದ ಜನರನ್ನು ಒಲೈಕೆಗೆ ಎನ್ನಲಾಗಿದೆ. ಸಯಾಜಿಗುಂಜ್‌ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಜಿತೇಂದ್ರ ಸುಖಡಿಯಾ ಬದಲಿಗೆ ಬಿಜೆಪಿ ವಡೋದರಾ ಮೇಯರ್‌ ಕೆಯೂರ್‌ ರೊಕಾಡಿಯಾ ಅವರಿಗೆ ಟಿಕೆಟ್‌ ನೀಡಿದೆ.

ಆರೋಗ್ಯ ಸಮಸ್ಯೆ ಇರುವ ಕಾರಣದಿಂದ ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರಲು ಸುಖಡಿಯಾ ನಿರ್ಧರಿಸಿದ್ದಾರೆ. ಹಿಂದೆ ವಿಜಯ್‌ ರೂಪಾಣಿ ಸರ್ಕಾರದಲ್ಲಿ ಸಚಿವರಾಗಿದ್ದ ಹಿರಿಯ ನಾಯಕ ಪ್ರದೀಪ್‌ ಸಿಂಗ್‌ ಜಡೇಜಾ ಬದಲಿಗೆ ಬಾಬು ಸಿಂಗ್‌ ಜಾಧವ್‌ ಅವರನ್ನು ವತ್ಪಾದಿಂದ ಟಿಕೆಟ್‌ ನೀಡಿದೆ. ಜೆಟ್‌ಪುರ ಕ್ಷೇತ್ರದಿಂದ ಜಯಂತಿ ಭಾಯ್‌ ರತ್ವಾ ಅವರನ್ನು ಗುಜರಾತ್‌ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಸುಖರಾಮ್‌ ರತ್ವಾ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್‌ ಪಕ್ಷವು ಮೊದಲ ಪಟ್ಟಿಯಲ್ಲಿ 160 ಮಂದಿ ಹೆಸರನ್ನು ಘೋಷಿಸಿದೆ. ಎರಡನೇ ಪಟ್ಟಿಯಲ್ಲಿ 6 ಮಂದಿ ಹಾಗೂ ಮೂರನೇ ಪಟ್ಟಿಯಲ್ಲಿ 12 ಮಂದಿಯ ಹೆಸರನ್ನು ಘೋಷಿಸಿದೆ. ಗುಜರಾತ್‌ನಲ್ಲಿ ಡಿಸೆಂಬರ್‌ 1ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಹಾಗೂ 5ನೇ ತಾರೀಖಿನಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಡಿಸೆಂಬರ್ 8ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಹೊರಬರಲಿದೆ.

English summary
The Bharatiya Janata Party (BJP) on Monday night released its third list of 12 candidates for the December Gujarat assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X