ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಆಯೋಗದ ಮೇಲೆ ಬಿಜೆಪಿ ಒತ್ತಡ – ಕಾಂಗ್ರೆಸ್ ಟೀಕೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಅಕ್ಟೋಬರ್ 13: ಗುರುವಾರ ಹಿಮಾಚಲ ಪ್ರದೇಶದ ಜತೆಗೆ ಗುಜರಾತ್ ವಿಧಾನಸಭೆ ಚುನಾವಣೆಗೂ ದಿನಾಂಕ ಘೋಷಣೆಯಾಗಲಿದೆ ಎಂದು ಕಾದಿದ್ದವರಿಗೆ ನಿರಾಸೆಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಅಚಲ್ ಕುಮಾರ್ ಜ್ಯೋತಿ ಗುರುವಾರ ಕೇವಲ ಹಿಮಾಚಲ ಪ್ರದೇಶ ಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದಾರೆ.

ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಪ್ರಕಟಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಪ್ರಕಟ

ಮತದಾನ ನವೆಂಬರ್ 9ರಂದು ನಡೆಯಲಿದ್ದರೆ ಫಲಿತಾಂಶ ಡಿಸೆಂಬರ್ 18ರಂದು ಪ್ರಕಟವಾಗಲಿದೆ. ಮತದಾನಕ್ಕೂ ಫಲಿತಾಂಶಕ್ಕೂ 40 ದಿನಗಳ ಅಂತರವಿದೆ. ಇದೇ ಅಂತರದಲ್ಲಿ ಗುಜರಾತ್ ಚುನಾವಣೆಯೂ ನಡೆಯಲಿದೆ ಎಂದು ಜ್ಯೋತಿ ಹೇಳಿದ್ದು, ದಿನಾಂಕವನ್ನ ಮಾತ್ರ ಘೋಷಣೆ ಮಾಡಿಲ್ಲ.

Gujarat Election 2017 date: Congress smells a conspiracy

ಕೇವಲ ಹಿಮಾಚಲ ಪ್ರದೇಶ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮೋದಿ ಸರಕಾರ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಮೋದಿ ಸರಕಾರ ಬೇಕೆಂದೇ ಚುನಾವಣಾ ದಿನಾಂಕದ ಘೋಷಣೆಯನ್ನು ಮುಂದೂಡುವಂತೆ ಮಾಡಿದೆ ಎಂದು ಅದು ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ, "ಮೋದಿ ಸರಕಾರ ಹಿಮಾಚಲ ಪ್ರದೇಶದ ಜತೆ ಗುಜರಾತ್ ಚುನಾವಣೆಯ ದಿನಾಂಕ ಘೋಷಣೆ ಮಾಡದಂತೆ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುತ್ತಿದೆ," ಎಂದು ಆರೋಪಿಸಿದ್ದಾರೆ.

ಅಕ್ಟೋಬರ್ 16ರಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಕಾರಣಕ್ಕೆ ಚುನಾವಣಾ ದಿನಾಂಕ ಘೋಷಣೆ ಮಾಡಿಲ್ಲ ಎಂದಿರುವ ಸುರ್ಜೇವಾಲ, "ಚುನಾವಣಾ ಆಯೋಗ ತಕ್ಷಣವೇ ಗುಜರಾತ್ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆ ಮಾಡಿ ನೀತಿ ಸಂಹಿತೆ ಜಾರಿಗೆ ತರಬೇಕು," ಎಂದು ಅವರು ಒತ್ತಾಯಿಸಿದ್ದಾರೆ.

English summary
The Congress has cried foul over the date of the Gujarat Assembly Election 2017. The party alleged that the Modi government is pressurising the Election Commission to delay the polls in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X