Video: ಕಾರಿನ ಅಂತ್ಯಕ್ರಿಯೆ ಮಾಡಿದ ಕುಟುಂಬ: 1500 ಜನ ಅಂತಿಮ ಯಾತ್ರೆಯಲ್ಲಿ ಭಾಗಿ- ಔತಣಕ್ಕೂ ಆಹ್ವಾನ!
ಕಾರು ಕೆಟ್ಟುಹೋದರೆ ಅದನ್ನು ನಾವು ರಿಪೇರಿ ಮಾಡಿಸುತ್ತೇವೆ. ಅದು ತುಂಬಾ ಹಳೆಯದಾದರೆ ನಾವು ಅದನ್ನು ಮಾರಾಟ ಮಾಡುತ್ತೇವೆ. ಆದರೆ ಗುಜರಾತಿನ ಕುಟುಂಬವೊಂದು ತಮ್ಮ ಕಾರು ಹಳೆಯದಾಗಿದ್ದಕ್ಕೆ ಮಾರಾಟ ಮಾಡಲಿಲ್ಲ, ರಿಪೇರಿ ಕೂಡ ಮಾಡಿಸಲಿಲ್ಲ. ಬದಲಿಗೆ ಕಾರನ್ನು ಸಮಾಧಿ ಮಾಡಿದೆ. ಅಚ್ಚರಿ ಅನಿಸಿದರೂ ಇದು ನಿಜ.
ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಲಾಠಿ ತಾಲೂಕಿನ ಪಾದರ್‌ಶಿಂಗ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂಜಯ್ ಪೊಲ್ಲಾರ್ ಮತ್ತು ಅವರ ಕುಟುಂಬದ ಅದೃಷ್ಟದ ಕಾರು ಹಳೆಯದಾಗಿತ್ತು. ಪೊಲ್ಲಾರ್ ಅವರ ಅದೃಷ್ಟದ ಕಾರು ಪದೇ ಪದೇ ರಿಪೇರಿಗೆ ಹೋಗುತ್ತಿತ್ತು. ಇದರಿಂದ ಬೇಸರಗೊಂಡ ಕುಟುಂಬ ಅದನ್ನು ಮಾರಾಟ ಮಾಡಲು ಮನಸ್ಸು ಮಾಡಲಿಲ್ಲ. ತಮ್ಮ ಜೊತೆಗೆ ಇದ್ದ ಕಾರನ್ನು ಬೇರೆಯವರು ಬಳಕೆ ಮಾಡುವುದನ್ನು ನೋಡಲು ಈ ಕುಟುಂಬ ತಯಾರಿರಲಿಲ್ಲ. ಹೀಗಾಗಿ ಕಾರನ್ನು ಮೃತದೇಹದಂತೆ ಅಂತಿಮ ಯಾತ್ರೆ ನಡೆಸಿ ಅದನ್ನು ಮಣ್ಣಿನಲ್ಲಿ ಸಮಾಧಿ ಮಾಡಿದ್ದಾರೆ.
'लकी' कार को कबाड़ में देने की बजाय दफनाया:
— Vikash Mohta (@VikashMohta_IND) November 9, 2024
मालिक ने भोज और विधि-विधान से विदाई दी, 4 लाख रुपए खर्च किए....!!
गुजरात...
गाड़ी केवल एक साधन नहीं बल्कि इमोशन भी है. एक शख्स ने अपनी सालों पुरानी कार का अंतिम संस्कार किया है. कहा कि कार लकी थी तो उसे बेचना नहीं चाहता है. इसलिए अपने… pic.twitter.com/1qNcRgFYlH
ಮತ್ತೊಂದು ವಿಶೇಷ ಅಂದರೆ ಈ ಕಾರಿನ ಅಂತಿಮ ಯಾತ್ರೆಯಲ್ಲಿ ಕುಟುಂಬ ಸದಸ್ಯರು, ಪಂಡಿತರು ಮತ್ತು ಆಧ್ಯಾತ್ಮಿಕ ಮುಖಂಡರು ಸೇರಿದಂತೆ ಸುಮಾರು 1,500 ಜನರು ಪಾಲ್ಗೊಂಡಿದ್ದರು. ಈ ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರನ್ನು ಹೂತು ಹಾಕುವ ದೃಶ್ಯ ಇದರಲ್ಲಿದೆ.

ಕಾರನ್ನು ಏಕೆ ಹೂಳಲಾಯಿತು?
ಸಂಜಯ್ ಪೋಲಾರ್ ಅವರ ಕುಟುಂಬಸ್ಥರು ಕೃಷಿಕರು. ಸುಮಾರು 12 ವರ್ಷಗಳ ಹಿಂದೆ ಅವರು ವ್ಯಾಗನ್ ಆರ್ ಕಾರು ಖರೀದಿಸಿದ್ದರು. ಕಾರು ಖರೀದಿಸಿದ ನಂತರ ಈ ಕುಟುಂಬವು ಸಾಕಷ್ಟು ಪ್ರಗತಿ ಸಾಧಿಸಿದೆ. ಈ ಕಾರು ಈ ಕುಟುಂಬಕ್ಕೆ ತುಂಬಾ ಅದೃಷ್ಟ ತಂದುಕೊಟ್ಟಿದೆ. ಸಂಜಯ್ ಪೋಲಾರ್ ಅವರು ಈ ಕಾರನ್ನು ಅದೃಷ್ಟದ ಕಾರು ಎಂದು ಪರಿಗಣಿಸುತ್ತಾರೆ. ಇದೇ ಕಾರಣಕ್ಕೆ ಈ ಕುಟುಂಬ ಈ ಕಾರಿನೊಂದಿಗೆ ಭಾವನಾತ್ಮಕ ನಂಟು ಬೆಳೆಸಿಕೊಂಡಿತ್ತು. ಹೀಗಾಗಿ ಈ ಕಾರನ್ನು ಮಾರುವ ಬದಲು ಅಥವಾ ರೀಪೇರಿ ಮಾಡಿಸುವ ಬದಲು ಅವರು ಅದನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಹೂತುಹಾಕಿದೆ.
ಕಾರಿನ ಅಂತ್ಯಕ್ರಿಯೆ ನಡೆದದ್ದು ಹೀಗೆ..
ಅಂತ್ಯಕ್ರಿಯೆಗಾಗಿ ಕಾರನ್ನು ಹೂವು ಮತ್ತು ಹಾರಗಳಿಂದ ಅಲಂಕರಿಸಲಾಗಿತ್ತು. ಪೋಲಾರ್ ಅವರ ಮನೆಯಿಂದ ಅವರ ಜಮೀನಿನವರೆಗೆ ವಿಜೃಂಭಣೆಯಿಂದ ಕಾರು ಚಾಲನೆ ಮಾಡಲಾಯಿತು. ಕಾರನ್ನು ಬಟ್ಟೆಯಿಂದ ಮುಚ್ಚಿ ನಂತರ ಕುಟುಂಬ ಸದಸ್ಯರು ಅದಕ್ಕೆ ಪೂಜೆ ಸಲ್ಲಿಸಿದರು.
ಮಂತ್ರಗಳನ್ನು ಪಠಿಸಿ ಕಾರಿನ ಮೇಲೆ ಗುಲಾಬಿ ದಳಗಳನ್ನು ಹಾಕಿ, ನಂತರ ಗದ್ದೆಯಲ್ಲಿ ಅಗೆದ ಹೊಂಡಕ್ಕೆ ಕಾರನ್ನು ಇಳಿಸಲಾಯಿತು. ಕಾರಿನ ಮೇಲೆ ಮಣ್ಣನ್ನು ಹಾಕಿ ಪೂರ್ಣ ವಿಧಿವಿಧಾನಗಳೊಂದಿಗೆ ಹೂಳಲಾಯಿತು. ಈ ಸಂಪೂರ್ಣ ಕಾರ್ಯಕ್ರಮಕ್ಕೆ ಕುಟುಂಬ 4 ಲಕ್ಷ ರೂಪಾಯಿ ಖರ್ಚು ಮಾಡಿದೆ ಎನ್ನಲಾಗುತ್ತಿದೆ. ಜೊತೆಗೆ ಜನರಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಇದೊಂದು ಹಿಂದೆಂದೂ ಕಾಣದ ಘಟನೆಯಾಗಿದೆ. ನಾಯಿ, ಬೆಕ್ಕು, ಮನುಷ್ಯರಂತೆ ಕಾರನ್ನೂ ಸಮಾಧಿ ಮಾಡಿರುವುದು ಇದೇ ಮೊದಲು. ಹೀಗಾಗಿ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ಕಂಡು ಜನ ಅಚ್ಚರಿಗೊಂಡಿದ್ದಾರೆ.












Click it and Unblock the Notifications